POWER SAMACHARA | KANNADA NEWS | BREKING NEWS| 05-07-2023..

ದಾವಣಗೆರೆ: ನನ್ನ ಬಾಯಿ ಮುಚ್ಚಿಸಲು ಯಾರಿಂದಲು ಸಾಧ್ಯವಿಲ್ಲ, ಬಿಜೆಪಿ ಶಿಸ್ತು ಸಮಿತಿಯಿಂದ ಕೊಟ್ಟಿರುವ ನೋಟಿಸ್ ಗೆ ನಾನು ಉತ್ತರ ಕೊಡುವುದಿಲ್ಲ, ಪಕ್ಷದಿಂದ ಉಚ್ಚಾಟನೆ ಮಾಡಿದರೆ ಮಾಡಲಿ, ನನಗೇನು ನಷ್ಟವಿಲ್ಲ ಎಂದು ದಾವಣಗೆರೆಯಲ್ಲಿ ಮತ್ತೊಮ್ಮೆ ಪಕ್ಷದ ನಾಯಕರ ವಿರುದ್ಧ ಮಾಜಿ ಶಾಸಕ ರೇಣುಕಾಚಾರ್ಯ ಗುಡುಗಿದ್ದಾರೆ..

ನೋಟಿಸ್ ಗೆ ನಾನೇಕೆ ಉತ್ತರ ಕೊಡಬೇಕು, ನಾನೇನು ಬಿಜೆಪಿ ಪಕ್ಷ ಮೋದಿಯವರ ವಿರುದ್ಧ ಮಾತನಾಡಿದ್ದೇನಾ? ಬಿಜೆಪಿ ಕಚೇರಿಯಲ್ಲಿ 11 ಜನರಿಗೆ ನೋಟಿಸ್ ನೀಡಿದ್ದೇವೆ ಎಂದು ಹೇಳುತ್ತಾರೆ, ಹೊರಗೆ ಬಂದು ನನ್ನೊಬ್ಬನಿಗೆ ನೋಟೀಸ್ ಎಂದು ಹೇಳುತ್ತಾರೆ, ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂಬುದು ನನಗೆ ಗೊತ್ತಿಲ್ಲ, ಶಿಸ್ತು ಸಮಿತಿ ನನ್ನೊಬ್ಬನಿಗೆ ನೋಟೀಸ್ ನೀಡಿ ಬೇರೆಯವರಿಗೆ ಏಕೆ ನೀಡಿಲ್ಲ, ನನ್ನ ಬಾಯಿಯನ್ನು ಯಾರಿಂದಲು ಮುಚ್ಚಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು..

ಕಾಂಗ್ರೆಸ್ ಪಕ್ಷಕ್ಕೆ ಹೋಗೋದಿಲ್ಲ..

ನಾನು ಕಾಂಗ್ರೆಸ್ ಗೆ ಹೋಗೊಲ್ಲ, ಕಾಂಗ್ರೆಸ್ ಮುಖಂಡರ ಜೊತೆ ರಾಜಕೀಯ ಹೊರತಾದ ಉತ್ತಮ ಸ್ನೇಹ ಸಂಬಂಧ ಇದೆ, ಶಾಮನೂರು ಶಿವಶಂಕರಪ್ಪ ನವರ ಜೊತೆಯಲ್ಲಿ ಮೈಸೂರಿಗೆ ಫ್ಲೈಟ್ ನಲ್ಲಿ ಒಂದು ಬಾರಿ ಹೋಗಿದ್ದೇನು, ಶಾಮನೂರು ಪ್ರೀತಿಯಿಂದ ನನಗೆ ನನ್ನ ಪ್ಲೈಟ್ ನಲ್ಲಿ ಬರುವಂತೆ ಆಹ್ವಾನ ನೀಡಿದ್ದರು, ಸಿದ್ದರಾಮಯ್ಯ ಡಿಕೆಶಿಯವರಿಗೆ ನಾನು ಪೋನ್ ಮಾಡಿ ಸಮಯ ತೆಗೆದುಕೊಂಡು ಹೋಗಿ ಮಾತನಾಡಿದ್ದೇನೆ, ನಾನು ಬಿಜೆಪಿಯಲ್ಲೇ ಇರುತ್ತೇನೆ ನಾನು ಕಾಂಗ್ರೆಸ್ ಹೋಗೋಲ್ಲ, ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಪಕ್ಷವನ್ನು ಸದೃಢವಾಗಿ ಕಟ್ಟಲು ಸಮರ್ಥನಿದ್ದೇನೆ ಎಂದು ಹೇಳಿದರು..