<strong>POWER SAMACHARA | KANNADA NEWS | BREKING NEWS| 01-05-2024</strong> <strong>ದಾವಣಗೆರೆ</strong> : ವೇದಿಕೆ ಮೇಲೆ ಹರಿಹರ ಜೆಡಿಎಸ್ ನ ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಗಳಗಳನೇ ಕಣ್ಣಿರಿಟ್ಟು ಶಾಮನೂರು ಕುಟುಂಬದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.. <img class="aligncenter wp-image-3015 size-full" src="https://powersamachara.com/wp-content/uploads/2024/05/hs-shivashakar-kanniru-1.jpg" alt="" width="750" height="550" /> ದಾವಣಗೆರೆ ನಗರದ ಭಂಟರ ಭವನದಲ್ಲಿ ಬಿಜೆಪಿಗೆ ಬೆಂಬಲಿಸಿ ಪಂಚಮಸಾಲಿ ಸಮಾಜದ ಸಭೆ ಕರೆಯಲಾಗಿತ್ತು, ಈ ವೇಳೆ ಮಾತನಾಡಿದ ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್, ಶಾಮನೂರು ಕುಟುಂಬ ನಮ್ಮ ಶುಗರ್ ಫ್ಯಾಕ್ಟರಿ ನುಂಗಲು ಯತ್ನಿಸಿತ್ತು. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ನವರು ಸಹ ಸಪೋರ್ಟ್ ಮಾಡಲಿಲ್ಲ, ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಇದ್ದ ಕಾರಣ ಎಸ್ ಎಸ್ ಮಲ್ಲಿಕಾರ್ಜುನ್ ಕುಮ್ಮಕ್ಕಿನಿಂದ ಭದ್ರಾ ಶುಗರ್ ಫ್ಯಾಕ್ಟರಿ ಹರಾಜು ಹಾಕಲಾಯಿತು, ಫ್ಯಾಕ್ಟರಿ ಮುಚ್ಚಲು ಎಸ್ ಎಸ್ ಮಲ್ಲಿಕಾರ್ಜುನ್ ಅವರೇ ನೇರ ಕಾರಣ, ಆಗ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸಕ್ಕರೆ ಕಾರ್ಖಾನೆ ನುಂಗಲು ಯತ್ನ ನಡೆಸಿದರು, 300 ಕೋಟಿ ಆಸ್ತಿಯನ್ನ 52 ಕೋಟಿಗೆ ಕಬಳಿಸಲು ಯತ್ನ ನಡೆಸಿದರು, ನನ್ನ ಜೀವ ಇರುವವರಿಗೂ ಆ ಆಸ್ತಿ ಕಬಳಿಸಲು ಬಿಡಲ್ಲ ಎಂದು ಕಣ್ಣಿರು ಹಾಕಿ ಭಾವೋದ್ವೇಗಕ್ಕೆ ಒಳಗಾದರು. <img class="aligncenter wp-image-3016 size-full" src="https://powersamachara.com/wp-content/uploads/2024/05/hs-shivashakar-kanniru-2.jpg" alt="" width="750" height="550" /> <h3><strong>ಶಾಮನೂರು ಸೋಲಿಸುವವರೆಗೂ ವಿಶ್ರಾಂತಿ ಮಾಡಬೇಡಿ..</strong></h3> ಶಾಮನೂರು ಕುಟುಂಬವನ್ನೂ ಸೋಲಿಸುವವರಿಗೆ ಮಲಗಬೇಡಿ, ಬಿಜೆಪಿಗೆ ಬೆಂಬಲಿಸಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನೂ ಗೆಲ್ಲಿಸಿ ಎಂದು ಕರೆ ನೀಡಿದರು. ನಾವು ಬಿಜೆಪಿಗೆ ಬೆಂಬಲಿಸುತ್ತೇವೆ, ಗೆಲ್ಲಿಸುತ್ತೇವೆ, ಜೆಡಿಎಸ್ ಮೂರೇ ಸೀಟು ಕೇಳುತ್ತೇವೆ, ಹರಿಹರ, ಹರಪನಹಳ್ಳಿ, ದಾವಣಗೆರೆ ದಕ್ಷಿಣ ಮಾತು ಮರೆಯದೇ ನಮಗೆ ಗೆಲ್ಲಿಸಿ ಮೋಸ ಮಾಡಿದರೇ ಮುಂದೇ ಎಲ್ಲರಿಗೂ ಸಮಯ ಬಂದೇ ಬರುತ್ತದೆ ಎಂದು ಇದೇ ವೇಳೆ ಹೆಚ್ ಎಸ್ ಶಿವಶಂಕರ್ ಎಚ್ಚರಿಕೆ ನೀಡಿದರು.. <img class="aligncenter wp-image-3017 size-full" src="https://powersamachara.com/wp-content/uploads/2024/05/hs-shivashakar-kanniru-3.jpg" alt="" width="750" height="550" />