<strong>POWER SAMACHARA | KANNADA NEWS | BREKING NEWS| 04-06-2024</strong> <strong>ದಾವಣಗೆರೆ :</strong> ಬೆಣ್ಣೆನಗರಿಯಲ್ಲಿ ಬಿಜೆಪಿ ಭದ್ರಕೋಟೆ ಪತನ ಆದಂತೆ ಕಾಣ್ತಾ ಇದೆ, 28ವರ್ಷಗಳ ಬಳಿಕ ಬಿಜೆಪಿ ನೆಲಕಚ್ಚಿದ್ದು 11.30ಗಂಟೆ ಸಮಯಕ್ಕೆ ಸುಮಾರು 50 ಸಾವಿರ ಲೀಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮುಂದೆ ಇದ್ದಾರೆ. <img class="aligncenter wp-image-3040 size-full" src="https://powersamachara.com/wp-content/uploads/2024/06/prabha-mallikarjun.jpg" alt="" width="750" height="550" /> ದಾವಣಗೆರೆಯ ತೋಳಹುಣಸೆಯಲ್ಲಿರುವ ಶಿವಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಪ್ರತಿ ಸುತ್ತಿನಲ್ಲೂ ಪ್ರಭಾ ಮಲ್ಲಿಕಾರ್ಜುನ ಲೀಡ್ ಹೆಚ್ಚಿಸಿಕೊಳ್ಳುತ್ತಿದ್ದು, ಗೆಲುವಿನ ಸನಿಹದಲ್ಲಿ ಇದ್ದಾರೆ ಎನ್ನಲಾಗ್ತಿದೆ. ಕಾಂಗ್ರೆಸ್ ಗೆ ದಾವಣಗೆರೆ ಲೋಕಸಭಾ ಕ್ಷೇತ್ರ ಕಬ್ಬಿಣದ ಕಡಲೆಯಾಗಿತ್ತು, ಸತತ ನಾಲ್ಕು ಭಾರೀ ಸಂಸದ ಜಿಎಂ ಸಿದ್ದೇಶ್ವರ್ ಗೆದ್ದು ಬೀಗಿದ್ದರು, ಈ ಭಾರೀ ಶತಾಯಗತಾಯ ಕಾಂಗ್ರೆಸ್ ಗೆಲ್ಲಲೇ ಬೇಕೆಂದು ಪಣ ತೊಟ್ಟಿತ್ತು, ಸಂಸದ ಜಿಎಂ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್, ಸಚಿವ ಎಸ್ ಎಸ್ ಮಲ್ಲಿಕಾರ್ಜುಬ್ ಪತ್ನಿ ಪ್ರಭಾ ಮಲ್ಲಿಕಾರ್ಜುನ ನಡುವೆ ಸ್ಪರ್ಧೆ ಏರ್ಪಟ್ಟಿತ್ತು, ಬಿಜೆಪಿ ಒಳಜಗಳದಿಂದ ಬಿಜೆಪಿ ನಷ್ಟ ಆದಂತೆ ಕಾಣ್ತಾ ಇದ್ದು, ಈ ಭಾರೀ ಬಿಜೆಪಿಯನ್ನ ಭೇದಿಸಿದಂತಾಗಿದೆ, ಮೊದಲ ಭಾರೀ ಮಹಿಳಾ ಸಂಸದೆಯಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಆಯ್ಕೆ ಆಗೋದು ಪಕ್ಕಾ ಎನ್ನಲಾಗ್ತಿದೆ..