POWER SAMACHARA | KANNADA NEWS | BREKING NEWS| 29-04-2024
ದಾವಣಗೆರೆ : ಫೋಕ್ಸೋ ಪ್ರಕರಣದ ಪ್ರಮುಖ ಆರೋಪಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀಗಳು ಮತ್ತೆ ಜೈಲು ಪಾಲಾಗಿದ್ದಾರೆ..
ದಾವಣಗೆರೆ ನಗರದ ಜಯದೇವ ಮುರುಘಾ ಶಾಖಾ ಮಠದಲ್ಲಿ ಮುರುಘಾ ಶ್ರೀ ವಾಸವಿದ್ದರು, ಹೈ ಕೋರ್ಟ್ ನೀಡಿದ್ದ ಜಾಮೀನು ತಿರಸ್ಕರಿಸಿ ಮತ್ತೆ ಬಂಧನಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು, ಬಂಧನಕ್ಕೂ ಮುನ್ನ ಏಳು ದಿನದಲ್ಲಿ ಶರಣಾಗತಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು, ಕೋರ್ಟ್ ಆದೇಶ ಹಿನ್ನಲೆ ಮುರುಘಾ ಮಠದ ಶಿವಮೂರ್ತಿ ಶ್ರೀ ಶರಣಾಗತಿಗೆ ದಾವಣಗೆರೆ ನಗರದ ಜಯದೇವ ಮುರುಘಾ ಶಾಖಾ ಮಠದಿಂದ ಚಿತ್ರದುರ್ಗ ಕೋರ್ಟ್ ಗೆ ತೆರಳಿದರು, ಕೋರ್ಟ್ ಗೆ ಹಾಜರು ನಂತರ ಮೆಡಿಕಲ್ ಟೆಸ್ಟ್ ನಡೆಯಲಿದ್ದು, ಬಳಿಕ ಮುರುಘಾ ಶ್ರೀ ಜೈಲು ಪಾಲಾಗಲಿದ್ದಾರೆ. ಇನ್ನೂ ನಾಲ್ಕು ತಿಂಗಳ ಒಳಗಾಗಿ ವಿಚಾರಣೆ ಮುಗಿಸಿ ತೀರ್ಪು ನೀಡುವಂತೆ ಚಿತ್ರದುರ್ಗ ಕೋರ್ಟ್ ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ ಎನ್ನಲಾಗಿದೆ..