POWER SAMACHARA | KANNADA NEWS | BREKING NEWS| 04-06-2024
ದಾವಣಗೆರೆ : ಬೆಣ್ಣೆನಗರಿಯಲ್ಲಿ ಬಿಜೆಪಿ ಭದ್ರಕೋಟೆ ಪತನ ಆಗಿದ್ದು 26094 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವು ಸಾಧಿಸಿ ದಾವಣಗೆರೆಯ ಮೊದಲ ಮಹಿಳಾ ಸಂಸದೆಯಾಗಿ ಇತಿಹಾಸ ಬರೆದಿದ್ದಾರೆ..
ದಾವಣಗೆರೆಯ ತೋಳಹುಣಸೆಯಲ್ಲಿರುವ ಶಿವಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಪ್ರತಿ ಸುತ್ತಿನಲ್ಲೂ ಪ್ರಭಾ ಮಲ್ಲಿಕಾರ್ಜುನ ಲೀಡ್ ಹೆಚ್ಚಿಸಿಕೊಳ್ಳುತ್ತಾ ಸಾಗಿದರು, ಕಾಂಗ್ರೆಸ್ ಗೆ ದಾವಣಗೆರೆ ಲೋಕಸಭಾ ಕ್ಷೇತ್ರ ಕಬ್ಬಿಣದ ಕಡಲೆಯಾಗಿತ್ತು, ಸತತ ನಾಲ್ಕು ಭಾರೀ ಸಂಸದ ಜಿಎಂ ಸಿದ್ದೇಶ್ವರ್ ಗೆದ್ದು ಬೀಗಿದ್ದರು, ಸಿದ್ದೇಶ್ವರ್ ತಂದೆ ಎರಡು ಭಾರೀ ಗೆದ್ದಿದ್ದು ಒಟ್ಟು 26ವರ್ಷ ಕಾಂಗ್ರೆಸ್ ಗೆದ್ದಿರಲಿಲ್ಲ, ಈ ಭಾರೀ ಶತಾಯಗತಾಯ ಕಾಂಗ್ರೆಸ್ ಗೆಲ್ಲಲೇ ಬೇಕೆಂದು ಪಣ ತೊಟ್ಟಿತ್ತು, ಸಂಸದ ಜಿಎಂ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್, ಸಚಿವ ಎಸ್ ಎಸ್ ಮಲ್ಲಿಕಾರ್ಜುಬ್ ಪತ್ನಿ ಪ್ರಭಾ ಮಲ್ಲಿಕಾರ್ಜುನ ನಡುವೆ ಸ್ಪರ್ಧೆ ಏರ್ಪಟ್ಟಿತ್ತು, ಬಿಜೆಪಿ ಒಳಜಗಳದಿಂದ ಬಿಜೆಪಿ ನಷ್ಟ ಆದಂತೆ ಕಾಣ್ತಾ ಇದ್ದು, ಈ ಭಾರೀ ಬಿಜೆಪಿಯನ್ನ ಭೇದಿಸಿದಂತಾಗಿದೆ, ಮೊದಲ ಭಾರೀ ಮಹಿಳಾ ಸಂಸದೆಯಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಆಯ್ಕೆ ಆಗಿದ್ದಾರೆ..
ಮತಗಳ ವಿವರ
ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್ 606965 ಮತ..
ಕಾಂಗ್ರೆಸ್ ನ ಡಾ. ಪ್ರಭಾ ಮಲ್ಲಿಕಾರ್ಜುನ್ 633059 ಮತ
ವಿನಯ್ ಕುಮಾರ್ 42907 ಮತ
26094 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವು..
26ವರ್ಷಗಳ ಬಳಿಕ 26 ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲುವು..