POWER SAMACHARA | KANNADA NEWS | BREKING NEWS| 12-06-2023

ದಾವಣಗೆರೆ: ವಿದ್ಯುತ್ ಬೆಲೆ ಗಗನಕ್ಕೆ ಏರಿಕೆಯಾದ ಹಿನ್ನಲೆ ದಾವಣಗೆರೆಯಲ್ಲಿ ಶಾಸಕ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ, ಯದ್ವಾ ತದ್ವಾ ಬಿಲ್ ಬಿಲ್ ಬಂದಿದೆ, ಯಾರು ಕರೆಂಟ್ ಬಿಲ್ ಕಟ್ಟ ಬೇಡಿ, ನಾನೇ ಜನರಿಗೆ ಹೇಳುತ್ತಾ ಇದ್ದೀನಿ, ಯಾರು ಬಿಲ್ ಕಟ್ಟಬೇಡಿ, ಪೊಲೀಸ್ ರನ್ನ ಕರೆ ತಂದರೆ ನನಗೆ ಫೋನ್ ಮಾಡಿ ಎಂದು ಕಿಡಿಕಾರಿದ್ದಾರೆ.

ವಿದ್ಯುತ್ ದರ ಏರಿಕೆ ಆದೇಶ ವಾಪಾಸ್ ಪಡೆಯಿರಿ..!

ನಮ್ಮ ಅವಧಿಯ 20 ಸಾವಿರ ರೂಪಾಯಿ ಕೋಟಿ ಕಾಮಗಾರಿ ಹಣ ವಾಪಾಸ್ ತೆಗೆದುಕೊಳ್ಳೋಕೆ ಬರುತ್ತೆ, ವಿದ್ಯುತ್ ಬೆಲೆ ಏರಿಕೆ ಆದೇಶ ವಾಪಾಸ್ ಪಡೆಯೋಕೆ ಬರಲ್ವಾ, ದಿನಕ್ಕೊಂದು ಕಂಡಿಷನ್ ಹಾಕುತ್ತಾ ಇದ್ದಾರೆ, ಸರಾಸರಿ ಪ್ರಮಾಣದಲ್ಲಿ ಬಿಲ್ ಕೊಡ್ತಾರಂತೆ, ಸರ್ಕಾರ ಬಂದು ತಕ್ಷಣ ವಿದ್ಯುತ್ ಫ್ರೀ ಎಂದು ಹೇಳಿ ಈಗ ಹಳೇ ಬಿಲ್ ಕಟ್ಟಿ ಅಂತಿದ್ದಾರೆ, ಈ ಹಿನ್ನಲೆ ಯಾರು ಕರೆಂಟ್ ಬಿಲ್ ಕಟ್ಟಬೇಡಿ ಎಂದು ರೇಣುಕಾಚಾರ್ಯ ಕರೆ ನೀಡಿದ್ದಾರೆ...

ಕಾಂಗ್ರೆಸ್ ಅದೃಷ್ಟ ಸದ್ಯಕ್ಕೆ ಚೆನ್ನಾಗಿದೆ

ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದು ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ರು, ಆದರೆ ಅದೃಷ್ಟ ಚೆನ್ನಾಗಿತ್ತು ಅಧಿಕಾರಕ್ಕೆ ಬಂದಿದ್ದಾರೆ, ಒಬ್ಬೊಬ್ಬ ಮಂತ್ರಿ ಒಂದೊಂದು ತರ ಹೇಳುತ್ತಿದ್ದಾರೆ, ಪ್ರಿಯಾಂಕಾ ಖರ್ಗೆ ಸೂಪರ್ ಸಿಎಂ ರೀತಿ ಮಾಡುತ್ತಿದ್ದಾರೆ, ಹೆಬ್ಬಾಳ್ಕರ್ ದಿನಕ್ಕೊಂದು ಹೇಳಿಕೆ ನೀಡುತ್ತಾ ಹೋಗುತ್ತಿದ್ದಾರೆ, ಕರೆಂಟ್ ಬಿಲ್ ಜಾಸ್ತಿ ಮಾಡಿ ಬಡವರಿಗೆ ಹೊರೆ ಮಾಡಿದ್ದಾರೆ, ನಮ್ಮ ಸರ್ಕಾರ ಬಿಲ್ ಜಾಸ್ತಿ ಮಾಡಿದೆ ಎಂದು ಆರೋಪ ಮಾಡ್ತಿದ್ದಾರೆ, ನಮ್ಮ ಸರ್ಕಾರ ಇದ್ದಾಗ 20 ಸಾವಿರ ಕೋಟಿ ಅನುದಾನ ವಾಪಸ್ಸು ಪಡೆದ್ರಲ್ಲಾ, ಅದರಂತೆ ವಿದ್ಯುತ್ ಬಿಲ್ ಏರಿಕೆ ಗಳನ್ನು ಕೂಡ ವಾಪಸ್ಸು ಪಡೆಯಬೇಕಿತ್ತು ಎಂದರು.

ಅತ್ತೆ ಸೊಸೆ ಜಗಳ ತಂದಿಟ್ಟಿದ್ದು ಯಾರು ಸಹೋದರಿ..

ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೀರಿ, ಆದರೆ ಹಳ್ಳಿಗಾಡುಗಳಲ್ಲಿ ಇದುವರೆಗೆ ಬಸ್ ಇಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಗಳನ್ನು ಬಿಟ್ಟಾಗ ಮಾತ್ರ ಮಹಿಳಾ ಸಬಲೀಕರಣ ವಾಗಲಿದೆ, ಎಲ್ಲಾ ಗ್ಯಾರೆಂಟಿ ಗಳಿಗೆ ಒಳ್ಳೆಯ ಹೆಸರು ಇಟ್ಟಿದ್ದೀರಿ, ನಮ್ಮ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಣ್ಣಂದಿರಾ ಸಮಾಧಾನ ಮಾಡಿಕೊಳ್ಳಿ ಎಂದು ಹೇಳ್ತಾ ಇದ್ದಾರೆ, ಅತ್ತೆ ಸೊಸೆ ನಡುವೆ ಜಗಳ ತಂದಿಟ್ಟಿದ್ದು ಯಾರಮ್ಮ ಸಹೋದರಿ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ..

ಎಂಪಿ ಟಿಕೆಟ್ ಆಕಾಂಕ್ಷಿ ನಾನಲ್ಲ

ಲೋಕಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾನಲ್ಲ, ನಮ್ಮ ಹಿರಿಯ ನಾಯಕರಾದ ಜಿಎಂ ಸಿದ್ದೇಶ್ವರ್ ಅವರು ಇದ್ದಾರೆ, ಅವರು ಸ್ಪರ್ಧೆ ಮಾಡೋದಿಲ್ಲ ಎಂದರೆ ಮುಂದೇ ನೋಡೋಣ, ಸದ್ಯಕ್ಕೆ ನಾನು ಎಂಪಿ ಟಿಕೆಟ್ ಆಕಾಂಕ್ಷಿ ಅಲ್ಲ, ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡೋಕೆ ನಾನು ಶಾಸಕನಲ್ಲ, ಪಕ್ಷದ ಶಾಸಕರು, ಹಿರಿಯರು ಮುಂದಿನ ಅಧಿವೇಶನ ಸಂದರ್ಭದಲ್ಲಿ ಆಯ್ಕೆ ಮಾಡುತ್ತಾರೆ, ಜೊತೆಗೆ ರಾಜ್ಯಾಧ್ಯಕ್ಷರು ಯಾರು ಆಗಬೇಕು ಎಂಬುದನ್ನ ನಿರ್ಧರಿಸುತ್ತಾರೆ ಎಂದು ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ..

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾದವ್, ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಪ್ರ.ಕಾರ್ಯದರ್ಶಿ ಬಿಎಸ್ ಜಗದೀಶ್, ಶ್ರೀನಿವಾಸ್, ಶಿವನಗೌಡ ಸೇರಿದಂತೆ ಮತ್ತಿತರರಿದ್ದರು..