POWER SAMACHARA | KANNADA NEWS | BREKING NEWS| 22-06-2023.....

ದಾವಣಗೆರೆ: ರಾಜ್ಯ ಸರ್ಕಾರ ಮುಸ್ಲಿಂರ ಓಲೈಕೆ ಮಾಡುತ್ತಿದ್ದು, ಇದರ ಪ್ರತೀಕವೇ ಪಠ್ಯ ಪುಸ್ತಕ ಬದಲಾವಣೆ ಎಂದು ದಾವಣಗೆರೆಯಲ್ಲಿ ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ ವಾಗ್ದಾಳಿ ನಡೆಸಿದ್ದಾರೆ..

ಯಾವುದೇ ಶಿಕ್ಷಣ ಪಂಡಿತರನ್ನ ಕೇಳಿಲ್ಲ, ಪಠ್ಯ ಪುಸ್ತಕ ನೇರ ಸಿಎಂ ಮನೆಯಿಂದ ಸಂಪುಟಕ್ಕೆ ಹೋಗಿದೆ, ಆರ್ ಎಸ್ ಎಸ್ ಸಂಸ್ಥಾಪಕ ಹೆಗ್ಡೆವಾರ್ ಭಾಷಣ ತೆಗೆದು ಹಾಕಿದ್ದಾರೆ, ಏನಿದೆ ಅದರಲ್ಲಿ ಅಂದ್ರೆ ಓದಿಲ್ಲ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು ಪಿಎಚ್ ಡಿ ಓದಿದ ಸಚಿವ ಪ್ರಿಯಾಂಕ್ ಖರ್ಗೆ ಯಾಕೆ ಓದಬೇಕು ಎನ್ನುತ್ತಿದ್ದಾರೆ, ವಿವೇಕಾನಂದರನ್ನು ತೆಗೆದು ನೆಹರು ಅವರನ್ನ ಸೇರ್ಪಡೆ ಮಾಡಿದ್ದಾರೆ, ಈ ದೇಶಕ್ಕೆ ನೆಹರು ಕುಟುಂಬದಿಂದ ಸ್ವಾತಂತ್ರ ಬಂದಿದೆ ಎಂದು ಹೇಳಲು ಹೋಗುತ್ತಿದೆ ಎಂದರು..

ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ಸು ಪಡೆಯುತ್ತಿದೆ, ಇದು ಬರುವ ಲೋಕಸಭೆ ಚುನಾವಣೆಗೆ ಮುಸ್ಲಿಂ ಮತಗಳಿಗಾಗಿ ಈ ರೀತಿ ಮಾಡಲಾಗುತ್ತಿದೆ, ಚಕ್ರವರ್ತಿ ಸೂಲೆಬೆಲೆ ಶಿಕ್ಷಣ ಪಂಡಿತರಲ್ಲ ಎನ್ನುವ ಕಾಂಗ್ರೆಸ್ ನವರು ಯಾವ ಪಂಡಿತರ ಸಲಹೆ ಪಡೆದು ಪಠ್ಯ ಬದಲಾವಣೆ ಮಾಡಿದ್ದಾರೆ, ಕೆಲ ನಿರುದ್ಯೋಗಿ ಪಂಡಿತರು ಇದ್ದಾರೆ, ಅವರಿಂದ ಹೀಗಾಗಿದೆ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ..