POWER SAMACHARA | KANNADA NEWS | BREKING NEWS| 05-07-2023..

ದಾವಣಗೆರೆ: ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ..

ದಾವಣಗೆರೆಯ ಜಿಎಂಐಟಿಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ರಾಜಕಾರಣದಲ್ಲಿ ಹೀಗೆ ಆಗುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ, ಮತ್ತೆ ಯಾವುದನ್ನೂ ಅಲ್ಲಗಳೆಯೋದಕ್ಕೆ ಸಾಧ್ಯವಿಲ್ಲ, ರಾಜಕಾರಣದಲ್ಲಿ ಏನು ಬೇಕಾದರು ಆಗಬಹುದು, ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಮಹಾರಾಷ್ಟ್ರ ಸರ್ಕಾರದ ಘಟನೆ ಉಲ್ಲೇಖಿಸಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ..

ವಿಪಕ್ಷ ನಾಯಕನ ಆಯ್ಕೆ ವಿಚಾರ ಪ್ರಮುಖರ ಜೊತೆ ಚರ್ಚೆ ಆಗಿದೆ, ಇಂದು, ಅಥವಾ ನಾಳೆ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತೆ, ರಾಷ್ಟ್ರ ನಾಯಕರು ಬೇರೆ ರಾಜ್ಯದ ವಿಚಾರದಲ್ಲಿ ಬ್ಯುಸಿ ಆಗಿದ್ದರು, ಹೀಗಾಗಿ ತಡವಾಗಿದೆ ಎಂದರು,

ಬಿಟ್ ಕಾಯಿನ್ ಮರು ತನಿಖೆ ವಿಚಾರ ಮಾತನಾಡಿದ ಮಾಜಿ ಸಿಎಂ, 2013 ರಿಂದ 2023 ರವರೆಗೆ ಯಾವ್ಯಾವ ಕಮಿಷನ್ ಆಪಾದನೆಗಳಿವೆ ಎಲ್ಲವೂ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ..