POWER SAMACHARA | KANNADA NEWS | BREKING NEWS| 11-06-2023

ದಾವಣಗೆರೆ: ಶಕ್ತಿ ಯೋಜನೆಗೆ ಬಸ್ ಚಾಲನೆ ಮಾಡುವ ಮೂಲಕ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಚಾಲನೆ ನೀಡಿದ್ದು, ಮಹಿಳೆಯರಿಗೆ ಶಾಸಕ ಶಾಮನೂರು ಶಿವಶಂಕರಪ್ಪ, ಬಸವಂತಪ್ಪ ಟಿಕೆಟ್ ನೀಡಿದ್ದಾರೆ.

ದಾವಣಗೆರೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಮೊದಲ ಫ್ರೀ ಬಸ್ ಹೊರಟ್ಟಿದ್ದು, ಖುಷಿ ಖುಷಿಯಾಗಿ ಮಹಿಳೆಯರು ಬಸ್ ಸಂಚಾರ ಮಾಡಿದ್ರು, ಫ್ರೀ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿದ ಸರ್ಕಾರಕ್ಕೆ ಮಹಿಳೆಯರು ಧನ್ಯವಾದ ತಿಳಿಸಿದ್ದಾರೆ..

ಕೆಲಸ ಮಾಡಿ ಇಲ್ಲವೇ ಕಿತ್ತುಕೊಂಡು ಹೋಗಿ..

ಅಧಿಕಾರಿಗಳು ದೂರು ಬರದಂತೆ ಬಡವರ ಕೆಲಸ ಮಾಡಿಕೊಡಿ, ತುಂಬಾ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಬಂದಿಲ್ಲ, ಕುಟುಂಬದ ಜೊತೆ ಟೂರ್ ಹೋಗಿದ್ದಾರೆಯೇ? ಜನಪ್ರತಿನಿಧಿಗಳ ಜೊತೆ ಇದ್ದು ಒಳ್ಳೆಯ ಕೆಲಸ ಮಾಡಿ, ಇಲ್ಲವೇ ದಾವಣಗೆರೆಯಿಂದ ಕಿತ್ತುಕೊಂಡಿ ಹೋಗಿ ಎಂದು ದಾವಣಗೆರೆಯಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದ್ದಾರೆ..

ಇಂದು ಶಕ್ತಿ ಯೋಜನೆ ಜಾರಿಯಾಗಿದೆ, ಮುಂದೇ ಎಲ್ಲಾ ಗ್ಯಾರಂಟಿಗಳು ಜಾರಿ ಆಗುತ್ತವೆ, ಎಲ್ಲಾ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸಿ ಎಂದು ಸೂಚನೆ ನೀಡಿದರು..

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸುತ್ತೇನೆ..

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸುತ್ತೇನೆ, 40% ಕಮಿಷನ್ ಹೊಡೆದು ಬಸ್ ನಿಲ್ದಾಣ ಕಾಮಗಾರಿ ಹಾಳು ಮಾಡಿದ್ದೀರಿ, ಅಶೋಕ್ ಟಾಕೀಸ್ ಬಳಿ ಅಂಡರ್ ಪಾಸ್ ಅವ್ಯವಸ್ಥೆ ಮಾಡಿದ್ದಾರೆ ಎಂದು ದಾವಣಗೆರೆಯಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆ ನೀಡಿದ್ದಾರೆ. ಎಲ್ಲವನ್ನು ತನಿಖೆಗೆ ಒಳಪಡಿಸುತ್ತೇನೆ, ಅವೈಜ್ಞಾನಿಕ ಕಾಮಗಾರಿಯಿಂದ ಊರನೆಲ್ಲ ಹದಗೆಡಿಸಿದ್ದಾರೆ, ಇವೆಲ್ಲ ಸರಿ ಮಾಡಲು ಐದು ವರ್ಷ ಬೇಕು ಎಂದು ಕಿಡಿಕಾರಿದರು..