POWER SAMACHARA | KANNADA NEWS | BREKING NEWS| 14-05-2025..
ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ನಲ್ಲಿದ್ದ ಚಿನ್ನಾಭರಣವನ್ನೆಲ್ಲ ಕದ್ದು ಬಿಟ್ಟಿದ್ದಾನೆ, ಬ್ಯಾಂಕ್ ನಲ್ಲೇ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಈ ಕಳ್ಳತನ ಮಾಡಿದ್ದಾಗಿ ದೂರು ದಾಖಲಾಗಿದ್ದು, ಸಿಬ್ಬಂದಿಯನ್ನ ಅರೆಸ್ಟ್ ಮಾಡಿ ಆಭರಣಗಳನ್ನ ವಶಕ್ಕೆ ಪಡೆಯಲಾಗಿದೆ..
ದಾವಣಗೆರೆ ನಗರದ ಲಾಯರ್ ರಸ್ತೆಯಲ್ಲಿರುವ ಸಿಎಸ್ ಬಿ ಬ್ಯಾಂಕ್ ನಲ್ಲಿ ಈ ಕಳ್ಳತನ ಮಾಡಲಾಗಿದೆ, ಸಿಎಸ್ ಬಿ ಬ್ಯಾಂಕ್ ಸಿಬ್ಬಂದಿ ಸಂಜಯ್ ಟಿಪಿ ಬ್ಯಾಂಕ್ ಗೆ ವಂಚಿಸಿದ ಸಿಬ್ಬಂದಿಯಾಗಿದ್ದು ಬಂಧನವಾಗಿದೆ.
ಆನ್ ಲೈನ್ ಗೇಮಿಂಗ್ ಹುಚ್ಚು ಕಳ್ಳತನ ಮಾಡಿ ಮಜಾ..!
ಬ್ಯಾಂಕ್ ನಲ್ಲಿ ಸಂಜಯ್ ಅಡವಿಟ್ಟ ಚಿನ್ನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ, ಇವನ ಮೇಲೆ ಬ್ಯಾಂಕ್ ಅಧಿಕಾರಿಗಳು ಹೆಚ್ಚು ನಂಬಿದ್ದರು, ಆದರೆ ಬ್ಯಾಂಕ್ ನಲ್ಲಿ ಅಡಮಾನವಿಟ್ಟ 1.86 ಕೋಟಿ ಮೌಲ್ಯದ ಬರೋಬ್ಬರಿ 3ಕೆಜಿ ಚಿನ್ನವನ್ನ ಸಿಎಸ್ ಬಿ ಬ್ಯಾಂಕ್ ನಲ್ಲಿ ಕಳ್ಳತನ ಮಾಡಿದ್ದಾನೆ, ಇದಕ್ಕೂ ಮುನ್ನ ಸ್ನೇಹಿತರಿಂದ ನಕಲಿ ಚಿನ್ನ ಇಡಿಸಿ ಒಂದುವರೆ ಕೋಟಿಗೂ ಹೆಚ್ಚು ಲೋನ್ ಕೊಡಿಸಿದ್ದ, ಈ ರೀತಿ ಹಣ ಪಡೆದು ಆನ್ ಲೈನ್ ಗೇಮಿಂಗ್ ನಲ್ಲಿ ತೊಡಗಿಸಿದ್ದ, ಜೊತೆಗೆ ಗೋವಾ ಸೇರಿದಂತೆ ಹಲವು ಕಡೇ ಹೋಗಿ ಮಜಾ ಮಾಡುವುದು ಖಯಾಲಿಯಾಗಿತ್ತು, ಬ್ಯಾಂಕ್ ನ ಮುಖ್ಯ ಸಿಬ್ಬಂದಿ ಲೆಕ್ಕ ಪರಿಶೀಲನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ, ಇನ್ನೂ ಲೆಕ್ಕ ಪರಿಶೀಲನೆ ಬಂದಾಗ ಲಾಕರ್ ಕೀ ನೀಡದೆ ಬ್ಯಾಂಕ್ ಬಿಟ್ಟು ಸಂಜಯ್ ಓಡಿ ಹೋಗಿದ್ದ, ನಂತರ ಬ್ಯಾಂಕ್ ನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ, ಈ ಬಗ್ಗೆ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬ್ಯಾಂಕ್ ವಂಚಿಸಿರುವ ಸಿಬ್ಬಂದಿ ಸಂಜಯ್ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ, ಒಟ್ಟಾರೆ ಲಕ್ಕಿ ಬಾಸ್ಕರ್ ಸಿನಿಮಾ ಮಾದರಿಯಲ್ಲೇ ಈ ಕಳ್ಳತನ ನಡೆದಿದೆ ಎನ್ನಲಾಗಿದೆ, ಸಿನಿಮಾದಲ್ಲಿ ಹಣವನ್ನ ತೆಗೆದುಕೊಂಡು ಹೋಗಿ ಬೇರೆ ಕಡೇ ಹೂಡಿಕೆ ಮಾಡುವುದು ಸಿನಿಮಾದ ತಿರುಳಾಗಿದೆ, ಅದೇ ಮಾದರಿ ಬಳಸಿಕೊಂಡ ಲಕ್ಕಿ ಸಂಜಯ್ ಬ್ಯಾಂಕ್‌ನಲ್ಲಿರುವ ಚಿನ್ನಾಭರಣ ಕದ್ದು ಪಂಗನಾಮ ಹಾಕಿದ್ದ, ಕದ್ದ ಚಿನ್ನವನ್ನ ಬೇರೆ ಬೇರೆ ಬ್ಯಾಂಕ್ ನಲ್ಲಿ ಅಡವಿಟ್ಟು ಹಣ ಪಡೆದಿದ್ದ, ಸದ್ಯ ಆರೋಪಿ ಹಾಗೂ ಚಿನ್ನಾಭರಣ ವಶಕ್ಕೆ ಪಡೆದಿರುವ ಕೆಟಿಜೆ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನೂ ಪ್ರಕರಣ ಭೇದಿಸಿದ ಕೆಟಿಜೆ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಉಮಾ ಪ್ರಶಾಂತ್ ಅವರು ಅಭಿನಂದನೆ ಸಲ್ಲಿಸಿದ್ದಾರೆ..