Sunday, July 6, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
Power Samachara
  • Home
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಜ್ಯ
  • ರಾಷ್ಟ್ರೀಯ ಸುದ್ದಿ
  • Login
No Result
View All Result
Power Samachara
Home ಪ್ರಮುಖ ಸುದ್ದಿ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

Power Samachara News by Power Samachara News
April 25, 2025
in ಪ್ರಮುಖ ಸುದ್ದಿ, Home, ದಾವಣಗೆರೆ
0
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ
0
SHARES
0
VIEWS
Share on WhatsappShare on FacebookShare on Twitter

POWER SAMACHARA | KANNADA NEWS | BREKING NEWS| 25-04-2025

ಚಾಮರಾಜನಗರ : ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದ ಬಡವರಿಗೆ ನೆರವಾಗುವ ರೀತಿಯಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ. ಇದರಿಂದ ಅಂಬೇಡ್ಕರ್ ಅವರ ಸಮಾನತೆಯ ಅವಕಾಶ ಈಡೇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

Related posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

May 14, 2025
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025

ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕನಕ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ 2 ಕೋಟಿ ರೂಪಾಯಿಯಲ್ಲಿ 50 ಲಕ್ಷ ರೂಪಾಯಿ ಬಿಡುಗಡೆ ಆಗಿದೆ. ಹಲವರು ದೇಣಿಗೆ ಕೂಡ ಕೊಟ್ಟಿದ್ದಾರೆ. ಇವರೆಲ್ಲರಿಗೂ ಒಳ್ಳೆಯದಾಗಲಿ ಎಂದರು.

ಸಮುದಾಯ ಭವನ ಕಟ್ಟಿ. ಆದರೆ, ಇದಕ್ಕಿಂತ ಹೆಚ್ಚಾಗಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆ ನಿರ್ಮಿಸಿ, ಜಿಲ್ಲೆಯ ಎಲ್ಲಾ ಹಿಂದುಳಿದ ಸಮುದಾಯಗಳ ಬಡ ಮಕ್ಕಳಿಗೆ ಶೈಕ್ಷಣಿಕ ನೆರವು ದೊರಕುವಂತೆ ಮಾಡಿ ಎಂದು ಕರೆ ನೀಡಿದರು. ಚಾಮರಾಜನಗರ ಜಿಲ್ಲೆ ಅತ್ಯಂತ ಹಿಂದುಳಿದಿರುವ ಜಿಲ್ಲೆ. ಇಲ್ಲಿ ಶಿಕ್ಷಣ ಹೆಚ್ಚೆಚ್ಚು ಸಿಗಬೇಕಿದೆ. ಶಿಕ್ಷಣ ಕಲಿಯಬೇಕಿದ್ದರೆ ಹಾಸ್ಟೆಲ್ ಗಳ ಅಗತ್ಯವೂ ಇದೆ. ನಮ್ಮ ಸರ್ಕಾರ ಎಲ್ಲಾ ಜಾತಿಯ ಬಡವರಿಗೂ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೆ ತಂದಿದೆ. ಶಕ್ತಿ ಯೋಜನೆ ಸೇರಿ ನಮ್ಮ ಐದೂ ಗ್ಯಾರಂಟಿಗಳು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡ ಮಹಿಳೆಯರಿಗೂ ಅನುಕೂಲ ಆಗುತ್ತಿದೆ. ಕೆಲಸಕ್ಕೆ ಹೋಗುವ ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಇದರಿಂದ ಹೆಚ್ಚು ಸಮಾಧಾನ ಆಗಿದೆ. ವಿದ್ಯಾರ್ಥಿನಿಯರಿಗೂ ಸಮಾಧಾನ ಆಗಿದೆ. ಹೀಗೆ ಎಲ್ಲಾ ಜಾತಿಯ ಬಡವರು, ಮಧ್ಯಮ ವರ್ಗದವರಿಗೆ ನೆರವಾಗುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

“ಸಾಮಾಜಿಕ ಸಮೀಕ್ಷೆ:

ಸಂವಿಧಾನ ಬಂದು 75 ವರ್ಷ ಆದರೂ ಸಾಮಾಜಿಕ ನ್ಯಾಯ ಈಡೇರಿಲ್ಲ. ಅವಕಾಶ ವಂಚಿತ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ಅರಿಯಲು ಸಮೀಕ್ಷೆ ನಡೆಸಿದ್ದೇವೆ. 2015 ರಲ್ಲಿ ನಡೆಸಿದ ಸಮೀಕ್ಷೆ ಬಳಿಕ ಬಂದ ಸಿಎಂ ಗಳು ಸ್ವೀಕರಿಸಿಲ್ಲ. ನಾನು ಸ್ವೀಕರಿಸಿ ಕ್ಯಾಬಿನೆಟ್ ಮುಂದೆ ಇಟ್ಟಿದ್ದೀನಿ. ಇದು ಯಾರ ವಿರುದ್ಧವೂ ಇರುವ ಸಮೀಕ್ಷೆ ಅಲ್ಲ. ಎಲ್ಲರ ಸ್ಥಿತಿ ಗತಿ ತಿಳಿಯುವ ಸಮೀಕ್ಷೆ ಮಾತ್ರ ಆಗಿದೆ ಎಂದರು.

ಬಿಜೆಪಿಯ ರಾಮಾ ಜೋಯಿಸ್ ಅವರು ಮೀಸಲಾತಿ ವಿರೋಧಿಸಿ ಕೋರ್ಟ್ ಗೆ ಹೋಗಿದ್ದರು. ನಿಮಗೆ ಸೈದ್ಧಾಂತಿಕವಾಗಿ ಸ್ಪಷ್ಟ ತಿಳಿವಳಿಕೆ ಇರಬೇಕು. ನೀವು ನನಗೂ ಚಪ್ಪಾಳೆ ತಟ್ಟೋದು, ಸಾಮಾಜಿಕ ನ್ಯಾಯದ ವಿರೋಧಿ ಆಗಿರುವ ಬಿಜೆಪಿಯವರ ಮಾತಿಗೂ ಚಪ್ಪಾಳೆ ತಟ್ಟೋದನ್ನು ನಿಲ್ಲಿಸಿ. ನಮ್ಮ ಪರವಾಗಿ ಇರುವವರು ಯಾರು ಎಂದು ತಿಳಿದು ಆಶೀರ್ವಾದ ಮಾಡಿ ಎಂದರು.

ಚಾಮರಾಜನಗರ ಇಷ್ಟವಾದ ಜಿಲ್ಲೆ

ನನಗೆ ಚಾಮರಾಜನಗರ ಅತ್ಯಂತ ಇಷ್ಟವಾದ ಜಿಲ್ಲೆ. ಚಾಮರಾಜನಗರಕ್ಕೆ 20 ಸಾರಿ ಬಂದು-ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಎಂದರು..

Tags: 2crorechamarajanagarcm siddaramyadistrict kanaka communityhosteljilla kanaka samudhayaಚಾಮರಾಜನಗರಜಿಲ್ಲಾ ಕನಕ ಸಮುದಾಯ ಭವನಸಮುದಾಯ ಭವನ ಕಟ್ಟಿಸಿ.ಎಂ.ಸಿದ್ದರಾಮಯ್ಯಹಾಸ್ಟೆಲ್

Related Posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..!  ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..! ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

April 25, 2025
ನರೇಂದ್ರ ಮೋದಿ ಯಾವುದನ್ನೂ ಬಾಕಿ‌ ಇಟ್ಟುಕೊಳ್ಳಲ್ಲ, ಉಗ್ರರ ಉಡೀಸ್ ಗ್ಯಾರಂಟಿ..!  ದಾವಣಗೆರೆಯಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು..

ನರೇಂದ್ರ ಮೋದಿ ಯಾವುದನ್ನೂ ಬಾಕಿ‌ ಇಟ್ಟುಕೊಳ್ಳಲ್ಲ, ಉಗ್ರರ ಉಡೀಸ್ ಗ್ಯಾರಂಟಿ..! ದಾವಣಗೆರೆಯಲ್ಲಿ ಹಿಂದೂ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್ ಗುಡುಗು..

April 23, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ

© 2023 Power Samachara -Design by Newbie Techy.

No Result
View All Result
  • Power Samachara

© 2023 Power Samachara -Design by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In