POWER SAMACHARA | KANNADA NEWS | BREKING NEWS| 11-06-2023
ದಾವಣಗೆರೆ : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭ ಆಗಿದೆ, ಆದ್ರೆ ಯಾಕೆ ಸರ್ಕಾರ ಕಂಡಿಷನ್ ಗಳನ್ನ ಹಾಕ್ತಿದ್ದಾರೋ ಗೊತ್ತಾಗಲಿಲ್ಲ ಎಂದು ದಾವಣಗೆರೆಯಲ್ಲಿ ಸರ್ಕಾರದ ವಿರುದ್ದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ..

ದಾವಣಗೆರೆ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರು, ಪುರುಷರು ಅಂತಾ ನೋಡಿದ್ರೆ ಎಲ್ಲರಿಗೂ ಗೊತ್ತಾಗುತ್ತೆ, ಆ ಚೀಟಿ ತೋರಿಸಿ ಈ ಚೀಟಿ ತೋರಿಸಿ ಅಂತಾ ಕಂಡಿಶನ್ ಹಾಕಿದ್ದಾರೆ, ಬೇರೆ ಗ್ಯಾರಂಟಿಗೂ ಕಂಡಿಷನ್ ಹಾಕ್ತಾ ಇದ್ದಾರೆ, ಯಾಕೆ ಇಷ್ಟೊಂದು ಕಂಡಿಷನ್ ಹಾಕ್ತಾ ಇದ್ದಾರೆ ಗೊತ್ತಾಗುತ್ತಿಲ್ಲ, ಇಷ್ಟೊಂದು ಕಂಡಿಷನ್ ಹಾಕೋದು ಸರಿಯಲ್ಲ, ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ..

ಹಳ್ಳಿ ಗಾಡಿನಲ್ಲಿ ಬಸ್ ಸೌಕರ್ಯ ಕಲ್ಪಿಸಬೇಕಿದೆ, ಹಳ್ಳಿಗರು ಸರ್ಕಾರದ ಸೌಲಭ್ಯ ಪಡೆಯಬೇಕು, ಮಹಿಳೆಯರಿಗೆ ಮೀಸಲಾತಿ ತಂದಿದ್ದು ನಾವು, ನಮ್ಮ ಸರ್ಕಾರ ಮಹಿಳಾ ಸಬಲೀಕರಣದತ್ತ ಹೆಜ್ಜೆ ಇಡುತ್ತಿದೆ ಎಂದು ತಿಳಿಸಿದರು..