POWER SAMACHARA | KANNADA NEWS | BREKING NEWS| 15-07-2023..

ದಾವಣಗೆರೆ : ಪೊಲೀಸ್ ಕಾಟಕ್ಕೆ ಬೇಸತ್ತು ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಮಹಿಳೆಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ..

ಆಸ್ತಿ ವಿವಾದ ವಿಚಾರವಾಗಿ ತನಗೆ ನ್ಯಾಯ ದೊರೆಯುತ್ತಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ, ಚನ್ನಗಿರಿ ತಾಲ್ಲೂಕಿನ ಶಿವಕುಳೆನೂರ ಗ್ರಾಮದ ವೇದಾವತಿ ಎಂಬಾಕೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದು, ಆಸ್ತಿ ವಿವಾದದಲ್ಲಿ ಪೊಲೀಸ್ ಸಿಬ್ಬಂದಿ ವೆಂಕಟೇಶ್ ಎಂಬಾತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ, ಎಸ್ಪಿ ಕಚೇರಿಗೆ ದೂರು ಕೊಡಲು ಬಂದಾಗ ಕಚೇರಿ ಹೊರಗಡೆ ಘಟನೆ ನಡೆದಿದೆ ಎಂದು ಮಾಹಿತಿ ಬಂದಿದೆ..

ಪೊಲೀಸರು ತಕ್ಷಣ ಗಮನಿಸಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ..

ತಾವು ಸಾಗುವಳಿ ಮಾಡುತ್ತಿರುವ ಐದು ಎಕರೆ ಜಮೀನು ವಿಚಾರವಾಗಿ ಸಂಬಂಧಿಕರ ನಡುವೆ ಜಗಳ ಇತ್ತು, ಸಂಬಂಧಿಕರೇ ಆದ ವೆಂಕಟೇಶ ಎಂಬಾತ ಪೊಲೀಸ್ ಸಿಬ್ಬಂದಿಯಾಗಿದ್ದು, ಪೊಲೀಸ್ ಪ್ರಭಾವ ಬಳಸಿ ತಮಗೆ ಬಿತ್ತನೆ ಮಾಡಲು ಬಿಡುತ್ತಿಲ್ಲ, ಪೊಲೀಸ್ ಸಿಬ್ಬಂದಿ ವೆಂಕಟೇಶ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ದೂರು ನೀಡಲು ವೇದಾವತಿ ಬಂದಿದ್ದರು ಎನ್ನಲಾಗಿದೆ,

ಎಸ್ಪಿ ಬಳಿ ಹೋಗುವ ಮೊದಲೇ ತಾನು ತಂದಿದ್ದ ವಿಷವನ್ನ ವೇದಾವತಿ ಕುಡಿದಿದ್ದಾಳೆ, ಶಿವಕುಳೆನೂರು ಗ್ರಾಮದಲ್ಲಿ ಐದು ಎಕರೆ ಜಮೀನನ್ನು ನಾವು ಸಾಗುವಳಿ ಮಾಡುತ್ತಿದ್ದು, ಸಂಬಂಧಿಕರಾದ ತುಕೋಜಿ ಹಾಗೂ ಪೊಲೀಸ್ ಸಿಬ್ಬಂದಿಯಾದ ವೆಂಕಟೇಶ್ ಇಬ್ಬರು ಸೇರಿ ಆಸ್ತಿ ಕಬಳಿಕೆಗೆ ಹೊಂಚು ಹಾಕಿದ್ದಾರೆ ಎಂದು ವೇದಾವತಿ ಆರೋಪಿಸಿದ್ದಾರೆ.

ಇನ್ನೂ ಈ ಹಿಂದೆಯೆ ಎರಡು ಕಡೆಯಿಂದ ಪರಸ್ಪರ ಪ್ರಕರಣ ದಾಖಲಾಗಿದೆ. ಪ್ರಕರಣ ಬಗ್ಗೆ ಎಸ್ಪಿ ಡಾ.ಕೆ ಅರುಣ್ ಸೂಕ್ತ ಕ್ರಮದ ಭರವಸೆ ನೀಡಿದ್ದು, ದಾವಣಗೆರೆ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..