POWER SAMACHARA | KANNADA NEWS | BREKING NEWS| 14-07-2023..

ದಾವಣಗೆರೆ: ನಾನು ಮತ್ತು ನನ್ನ ಮಾವ ಶಾಮನೂರು ಶಿವಶಂಕರಪ್ಪ ತುಂಬಾ ಚೆನ್ನಾಗಿ ಇದ್ದೆವು, 1994 ರಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ತಂದೆ ಶಾಮನೂರು ಶಿವಶಂಕರಪ್ಪಗೆ ಸಾಲ ಕೊಟ್ಟಿದ್ದೆ, ವಾಪಸ್ ಕೊಡುವುದಕ್ಕೆ ಕಾಡಿಸಿದ್ದರು, ಬಳಿಕ ಬಡ್ಡಿ ಸಮೇತ ವಸೂಲಿ ಮಾಡಿದ್ದೆ ಎಂದು ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ..

ಶಾಮನೂರು ಶಿವಶಂಕರಪ್ಪ ಲಕ್ಷ್ಮೀ ಪ್ಲೋರ್ ಮಿಲ್ ತೆಗೆದುಕೊಳ್ಳುವುದಕ್ಕೆ ಸಾಲ ಕೊಟ್ಟಿದ್ದೆ, ಇವರ ಕಾರ್ಖಾನೆಯ ಶುಗರ್ ರಫ್ತು ಆಗ್ತಿತ್ತು, ಆಗ ಸಾಲ ಕೊಟ್ಟಿದ್ದೆ, 1997 ರಲ್ಲಿ ಆಸ್ತಿ ಸೆಲ್ಫ್ ಡೆಕ್ಲರೆಷನ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು, ಆಗ ನಾನು 6 ಕೋಟಿ ಡಿಕ್ಲೆಯರ್ ಮಾಡ್ಕೊಂಡು, 1.80 ಕೋಟಿ ತೆರಿಗೆ ಕಟ್ಟಿದ್ದೆ, ಆಗ ಶಾಮನೂರು ಶಿವಶಂಕರಪ್ಪ ಮಾವನೂ ಟ್ಯಾಕ್ಸ್ ಕಟ್ಟೊಕೆ ಅಂತ ಸಾಲ ಇಸ್ಕೊಂಡಿದ್ದರು, ಚುನಾವಣೆ ವೇಳೆ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ ಕೊಡಲಿಲ್ಲ, ನಂತರ ಬಡ್ಡಿ ಸಮೇತ ವಸೂಲಿ ಮಾಡಿದ್ದೆ ಎಂದರು..

ಇವರ್ಯಾರು ಕೇಳೊಕೆ..!?

ಕಾಲೇಜು ಮೇಲೆ ಕಾಲೇಜು, ಜಮೀನು ಮೇಲೆ ಜಮೀನು ತೆಗೆದುಕೊಳ್ತಾ ಇದ್ದೀನಿ ಅಂತ ಆರೋಪ ಮಾಡಿದ್ದಾರೆ, ಹೌದು, ತಗೊಳ್ತಿನಿ, ದುಡಿದಿದ್ದೀನಿ ತೆಗೆದುಕೊಳ್ತಿನಿ, ಇನ್ಕಮ್ ಟ್ಯಾಕ್ಸ್ ನೋಡಿಕೊಳ್ಳುತ್ತೆ ಇವರ್ಯಾರು ಕೇಳೊಕೆ, ನಾನು ಭ್ರಷ್ಟಾಚಾರ ಮಾಡಿಲ್ಲ, ದುಡ್ಡು ಹೊಡೆದಿಲ್ಲ, ಆದಾಯ, ತೆರಿಗೆ ಇಲಾಖೆ ಇದ್ದಾವೆ, ಅವು ನೋಡಿಕೊಳ್ತಾವೆ, ದಾವಣಗೆರೆಲೀ ಸ್ಮಾರ್ಟ್ ಸಿಟಿ, ಆಶ್ರಯ ಮನೆ ಹಂಚಿಕೆ ತನಿಖೆ ಮಾಡಿಸ್ತಾರಂತೆ, ಅವನು ಮಲ್ಲಿಕಾರ್ಜುನ್ ಹಿಂದೆ ಮಂತ್ರಿ ಆಗಿದ್ದಾಗನಿಂದಲೂ ತನಿಖೆ ಮಾಡಲಿ, ಎಲ್ಲವೂ ತನಿಖೆ ಮಾಡಲಿ, ನನಗೇನು ಭಯ ಇಲ್ಲ ಎಂದು ವಾಗ್ದಾಳಿ ನಡೆಸಿದರು..

ಆನೆ ಹೋಗುವಾಗ ನಾಯಿ ಬೊಗಳೋದು ಸಹಜ

ಆನೆ ಹೋಗುವಾಗ ನಾಯಿ ಬೊಗುಳುತ್ತೆ, ಆನೆ ಅದರ ಪಾಡಿಗೆ ಅದು ಹೋಗುತ್ತೆ ಎಂದು ಪರೋಕ್ಷವಾಗಿ ಸಚಿವ ಮಲ್ಲಿಕಾರ್ಜುನ್ ರಿಗೆ ಸಂಸದ ಸಿದ್ದೇಶ್ವರ್ ವಾಗ್ದಾಳಿ ನಡೆಸಿದ್ದಾರೆ..

ಮಲ್ಲಿಕಾರ್ಜುನ್ ನನ್ನ ಆಸ್ತಿ ಬಗ್ಗೆ ಕೇಳ್ತಾರೆ, ಬೇಲಿಕೆರೆ ಅದಿರು ಬಗ್ಗೆ ಮಾತನಾಡುತ್ತಾರೆ, ಅಲ್ಲಿ ಒಂದು ಕೆಜಿ ನೂ ವ್ಯತ್ಯಾಸ ಆಗಿಲ್ಲ, ಒಂದು ರೂಪಾಯಿ ಕೂಡ ವ್ಯತ್ಯಾಸ ಇಲ್ಲ, ಗೂಬೆ ಕೂರಿಸಲು ನನ್ನ ತಮ್ಮನನ್ನು ಹಿಡಿಸಿ ತೊಂದರೆ ಕೊಟ್ಟರು, ಆ ಕೇಸ್ ಕೋರ್ಟ್ ನಲ್ಲಿ ವಜಾ ಆಗಿದೆ.. ಭ್ರಷ್ಟಾಚಾರ ಮಾಡಿ ಹಣ ಹೊಡೆದಿಲ್ಲ, ನಮ್ಮ ಮನೆಯಲ್ಲಿ ಆರು ಜನ ದುಡಿಯುತ್ತಾರೆ, ಪ್ರಾಮಾಣಿಕವಾಗಿ ದುಡಿಯುತ್ತೇವೆ, ಅವನು ಒಬ್ಬನೇ ದುಡಿಯುತ್ತಾನೆ ಅವರದು ಎಷ್ಟಿದೆ ಆಸ್ತಿ ನೋಡಿ ಎಂದು ಪ್ರಶ್ನಿಸಿದರು..