POWER SAMACHARA | KANNADA NEWS | BREKING NEWS| 04-07-2023..

ಕರ್ನಾಟಕ ಹೊರತು ಪಡಿಸಿ ನಾಲ್ಕು ರಾಜ್ಯಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ..!

ಬೆಂಗಳೂರು: ಪಂಚರಾಜ್ಯ ಚುನಾವಣೆ ಸೇರಿದಂತೆ ಲೋಕಸಭೆ ಚುನಾವಣೆ ದೃಷ್ಠಿಕೋನ ಇಟ್ಟುಕೊಂಡು ಬಿಜೆಪಿ ಅಲರ್ಟ್ ಆಗಿದ್ದು ಕರ್ನಾಟಕ ಹೊರತುಪಡಿಸಿ ನಾಲ್ಕು ರಾಜ್ಯಗಳಿಗೆ ರಾಜ್ಯಾಧ್ಯಕ್ಷರ ನೇಮಕ ಮಾಡಲಾಗಿದೆ..

ನಾಲ್ಕು ರಾಜ್ಯಗಳಿಗೆ ಅಧ್ಯಕ್ಷರ ನೇಮಕ..!

ನಾಲ್ಕು ರಾಜ್ಯಗಳಿಗೆ ಬಿಜೆಪಿ ನೂತನ ಅಧ್ಯಕ್ಷರನ್ನ ನೇಮಕ ಮಾಡಿದೆ, ವಿಧಾನಸಭೆ ಚುನಾವಣೆ ಎದುರಿಸಲಿರುವ ತೆಲಂಗಾಣದಲ್ಲಿ ಸಹ ರಾಜ್ಯಾಧ್ಯಕ್ಷರ ಬದಲಾವಣೆಯಾಗಿದ್ದು, ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಿಶನ್ ರೆಡ್ಡಿ, ಆಂಧ್ರ ಪ್ರದೇಶ ರಾಜ್ಯಾಧ್ಯಕ್ಷರಾಗಿ ಡಿ ಪುರಂದೇಶ್ವರಿ, ಪಂಜಾಬ್ ಪಕ್ಷದ ರಾಜ್ಯಾಧ್ಯಕ್ಷ ಸುನೀಲ್ ಜಾಖರ್, ಜಾರ್ಖಂಡ್ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಬಾಬುಲಾಲ್ ಮರಾಂಡಿ ನೇಮಕ ಮಾಡಲಾಗಿದೆ. ಇದರ ಜೊತೆ ಚುನಾವಣೆ ಹಿನ್ನಲೆ ತೆಲಂಗಾಣ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಇಟಾಲ ರಾಜೇಂದರ್ ಅವರನ್ನು ನೇಮಕಗೊಳಿಸಲಾಗಿದೆ..

*ಕರ್ನಾಟಕದ ಅಧ್ಯಕ್ಷರ ಆಯ್ಕೆ ಜಟಿಲ..!?*

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ಹಿನ್ನಲೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬದಲಾವಣೆಗೆ ಕೂಗು ಕೇಳಿ ಬಂದಿತ್ತು, ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸಹಿತ ಕೆಲವರು ಕಟೀಲ್ ವಿರುದ್ದ ಅಪಸ್ವರ ಎತ್ತಿದ್ದರು, ಈ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದರು, ಈ ಹಿನ್ನಲೆ ಬಳ್ಳಾರಿಯಲ್ಲಿ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಕಟೀಲ್ ಸಹ ಹೇಳಿದ್ದರು. ವಿ ಸೋಮಣ್ಣ ಸೇರಿ ಹಲವರು ಅಧ್ಯಕ್ಷ ಪಟ್ಟಕ್ಕೆ ಉತ್ಸುಕತೆ ತೋರಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಇದುವರೆಗೆ ಯಾರನ್ನೂ ಅಂತಿಮಗೊಳಿಸಿಲ್ಲ. ಕರ್ನಾಟಕ ವಿಧಾನಸಭೆ ಅಧಿವೇಶನ ಆರಂಭವಾದರೂ ಸಹ ಇನ್ನೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಪಕ್ಷದ ವೀಕ್ಷಕರು ಬೆಂಗಳೂರಿಗೆ ಬಂದು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮೊದಲು ವಿಪಕ್ಷ ನಾಯಕನ ನೇಮಕವಾಗಿ ಬಳಿಕ ರಾಜ್ಯಾಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ..

*ಶೋಭಾ ಕರಂದ್ಲಾಜೆ ನೂತನ ಅಧ್ಯಕ್ಷೆ..!?*

ವಿಪಕ್ಷ ನಾಯಕರ ರೇಸ್ ನಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಬಸವನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್, ಅಶ್ವಥ್ ನಾರಾಯಣ್ ಹೆಸರು ಕೇಳಿ ಬಂದಿವೆ ಆದರೆ ಅಂತಿಮ ಆಗಿಲ್ಲ, ಇತ್ತ ರಾಜ್ಯಾಧ್ಯಕ್ಷರ ರೇಸ್ ನಲ್ಲಿ ಶೋಭಾ ಕರಂದ್ಲಾಂಜೆ ಹೆಸರು ಬಲವಾಗಿ ಕೇಳಿ ಬರುತ್ತಿದೆ, ಇವರೇ ಮುಂದಿನ ಅಧ್ಯಕ್ಷರು ಎಂದು ಪೋಸ್ಟ್ ಗಳು ಹರಿದಾಡುತ್ತಿವೆ, ಇದರ ಜೊತೆಯಲ್ಲಿ, ಬಸವನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ, ಅಶ್ವತ್ಥ್ ನಾರಾಯಣ್, ಸುನೀಲ್ ಕುಮಾರ್ ರೇಸ್ ನಲ್ಲಿರುವ ಪ್ರಮುಖರು, ಇತ್ತ ಯತ್ನಾಳ್ ಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಗುಸು ಗುಸು ಚರ್ಚೆ ಬೆನ್ನಲ್ಲೆ ಬಿಎಸ್ ವೈ ಟೀಂ ಅಲರ್ಟ್ ಆಗಿದ್ದು ಜಟೀಲಗೊಳ್ಳಲು ಕಾರಣವಾಗಿತ್ತು ಎನ್ನಲಾಗ್ತಿದೆ, ಹೀಗಾಗಿ ಬಿಎಸ್ ವೈ ದೆಹಲಿಗೆ ಆಗಮಿಸುವಂತೆ ಹೈಕಮಾಂಡ್ ಬುಲಾವ್ ನೀಡಿತ್ತು, ಆದರೆ ಇಂದು ಅಂತಿಮಗೊಳ್ಳಬೇಕಿದ್ದ ನೇಮಕ ಮತ್ತೆ ಮುಂದೂಡಿಕೆ ಆಗಿದ್ದು ಚರ್ಚೆಗೆ ಕಾರಣವಾಗಿದೆ..