POWER SAMACHARA | KANNADA NEWS | BREKING NEWS| 21-08-2023..

ದಾವಣಗೆರೆ: ಅಮೆರಿಕದಲ್ಲಿ ದಾವಣಗೆರೆ ಮೂಲದ ಮೂವರು ಅಸ್ವಾಭಿಕ ಸಾವು ಪ್ರಕರಣ ಸಂಬಂಧ ಯೋಗೇಶ್ ಅವರ ಕುಟುಂಬ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದರು..

ಸಿಎಂ ಸಿದ್ದರಾಮಯ್ಯ ಅವರ ಮುಂದೆ ಯೋಗೇಶ್ ತಾಯಿ ಶೋಭಾ ಕಣ್ಣಿರಿಟ್ಟು, ಮೃತದೇಹಗಳನ್ನು ತಾಯಿನಾಡಿಗೆ ತರಿಸುವಂತೆ ಮನವಿ ಮಾಡಿದರು, ಅಗತ್ಯ ನೆರವು ಒದಗಿಸುವುದಾಗಿ ಸಿಎಂ ಭರವಸೆ ನೀಡಿದರು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಸಿಎಂ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಮೃತ ದೇಹ ತರಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು..

ಅಮೇರಿಕಾದ ಬಾಲ್ಟಿಮೋರ್ ಸಿಟಿಯಲ್ಲಿ ಶ್ರದ್ಧಾಂಜಲಿ..

ಅಮೆರಿಕದಲ್ಲಿ ಮೂವರು ಸಾವನ್ನಪ್ಪಿದ ಹಿನ್ನಲೆ ಅಮೇರಿಕಾದ ಬಾಲ್ಟಿಮೋರ್ ಸಿಟಿಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಮೃತ ಯೋಗೇಶ್ ವಾಸವಿದ್ದ ಏರಿಯಾದ ಸಾರ್ವಜನಿಕರು ಮತ್ತು ಸಹೋದ್ಯೋಗಿಗಳಿಂದ ಮೃತರ ಭಾವಚಿತ್ರದ ಮುಂದೆ ಕ್ಯಾಂಡಲ್ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಿದರು. ಯೋಗೇಶ್ ಮತ್ತು ಆತನ ಕುಟುಂಬ ಮೃತಪಟ್ಟ ಮನೆಯ ಮುಂದೆ ನೂರಾರು ಜನ ಸ್ಥಳೀಯರು ಮತ್ತು ಸಹೋದ್ಯೋಗಿಗಳು ಸಂತಾಪ ಸೂಚಿಸಿದರು..