POWER SAMACHARA | KANNADA NEWS | BREKING NEWS| 21-08-2023..

ದಾವಣಗೆರೆ: ಹಿಂದೂ ಪರ ಹೋರಾಟಗಾರ ಸತೀಶ್ ಪೂಜಾರಿ ಬಂಧನ ಖಂಡಿಸಿ ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪೊಲೀಸರು-ಕಾರ್ಯಕರ್ತರ ಮಧ್ಯೆ ವಾಗ್ವಾದ, ತಳ್ಳಾಟ, ನೂಕಾಟ ನಡೆದ ಘಟನೆ ದಾವಣಗೆರೆ ನಗರದ ಎಸಿ ಕಚೇರಿ ಮುಂಭಾಗ ನಡೆದಿದೆ..

ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ಸತೀಶ್ ಪೂಜಾರಿ ಬಂಧನ ಹಿನ್ನಲೆ ದಾವಣಗೆರೆಯಲ್ಲಿ ಹಿಂದೂ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು, ದಾವಣಗೆರೆ ಎಸಿ ಕಚೇರಿ ಮುಂಭಾಗ ಹಿಂದೂ ಕಾರ್ಯಕರ್ತರು ಪೊಲೀಸರ ಮಧ್ಯೆ ಗಲಾಟೆ ನಡೆದಿದೆ, ಟೈರ್ ಗೆ ಬೆಂಕಿ ಹಚ್ಚುವ ವಿಚಾರಕ್ಕೆ ಪೊಲೀಸರು-ಹಿಂದೂ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ, ಪೊಲೀಸರು ಟೈರ್ ಗೆ ಬೆಂಕಿ ಹಚ್ಚಬೇಡಿ ಎಂದು ಸೂಚನೆ ನೀಡಿದ್ದರು ಸಹ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಲು ಮುಂದಾದಾಗ ವಾಗ್ವಾದ, ತಳ್ಳಾಟ ನಡೆದಿದೆ, ಕೊನೆಗೂ ಕಾರ್ಯಕರ್ತರು ಟೈಯರ್ ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..

ನೆಹರು, ಗಾಂಧಿಜಿ ಕುರಿತು ವಿವಾದಾತ್ಮಕ ಹೇಳಿಕೆ..

ಅಗಸ್ಟ್ 14 ರಂದು ಚಿಕ್ಕಬಳ್ಳಾಪುರದ ಗೌರಿ ಬಿದನೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಸತೀಶ್ ಪೂಜಾರಿ ಪ್ರಚೋಧನಾಕಾರಿ ಭಾಷಣ ಮಾಡಿದ್ದಾರೆ ಎಂದು ಎಫ್ ಐಆರ್ ದಾಖಲಾಗಿತ್ತು, ಗೌರಿಬಿದನೂರು ಪೊಲೀಸರು ದಾವಣಗೆರೆಯಲ್ಲಿದ್ದ ಸತೀಶ್ ಪೂಜಾರಿ ಅವರನ್ನು ಬಂಧಿಸಿದ್ದರು. ಬಂಧನ ಖಂಡಿಸಿ ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗಿದೆ. ನೆಹರೂ, ಗಾಂಧಿಯಷ್ಟೆ ಸ್ವಾತಂತ್ರ್ಯ ಹೋರಾಟಗಾರರು ಎಂದು ಕಂಠ ಪಾಠ ಮಾಡಿ ಹೇಳಿಸಲಾಗುತ್ತದೆ, ಜಮ್ಮು ಕಾಶ್ಮೀರದ 30% ಭಾಗವನ್ನ ಮೊದಲ ಪ್ರಧಾನಿ ರಣಹೇಡಿ ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟ. ಅಖಂಡ ಭಾರತವನ್ನ ತುಂಡು ತುಂಡಾಗಿ ಮಾಡಿದರು. ಭಾರತವನ್ನು ತುಂಡರಿಸಲು ಬಿಡುವುದಿಲ್ಲ, ನನ್ನನ್ನು ಬೇಕಾದರೆ ತುಂಡರಿಸಿ ಎಂದಿದ್ದ ಗಾಂಧಿಜಿ ಅವರು ಸ್ವಾತಂತ್ರ್ಯದ ಬಳಿಕ ಇದೇ ಭೂಮಿಯಲ್ಲಿ ಐಶಾರಾಮಿ ಜೀವನ ಮಾಡಿದರು, ಯಾರನ್ನ ನಂಬಬೇಕು ನೋವಾಗುತ್ತದೆ ಎಂದು ಭಾಷಣದುದ್ದಕ್ಕೂ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಸತೀಶ್ ಪೂಜಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ..