POWER SAMACHARA | KANNADA NEWS | BREKING NEWS| 22-04-2024
ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಸ್ಪರ್ಧೆ ಖಚಿತವಾಗಿದ್ದು, ದಾವಣಗೆರೆಯಲ್ಲಿ ತ್ರಿಕೋನ ಸ್ಪರ್ಧೆ ನಿಶ್ಚಯವಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ವಾಪಸ್ ತೆಗೆದುಕೊಳ್ಳಲು ಅವಕಾಶ ಇದ್ದು, ಮೂವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ವಾಪಾಸ್ ಪಡೆದಿದ್ದು , ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ನಾಮಪತ್ರ ವಾಪಾಸ್ ಪಡೆಯದೇ ಕಣದಲ್ಲೆ ಉಳಿದಿದ್ದಾರೆ..
ಗಾಸಿಪ್ ಗೆ ಫುಲ್ ಸ್ಟಾಪ್, ಸ್ಪರ್ಧೆ ಖಚಿತ..
ವಿನಯ್ ಕುಮಾರ್ ನಾಮಪತ್ರ ವಿಚಾರವಾಗಿ ಹಲವು ಗಾಸಿಪ್ ಹರಿದಾಡಿದ್ದವು, ಎಲ್ಲಾ ಗಾಸಿಪ್ ಸುಳ್ಳು, ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ವಿನಯ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದರು, ಅದರಂತೆ ಕಣದಲ್ಲೇ ಉಳಿದಿದ್ದು, ವಿನಯ್ ಕುಮಾರ್ ಅವರಿಗೆ ಸಿಲಿಂಡರ್ ಸಿಂಬಲ್ ಸಿಕ್ಕಿದೆ ಎನ್ನಲಾಗಿದೆ. ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್, ಕಾಂಗ್ರೆಸ್ ನಿಂದ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ನಡೆಸಿದ್ದು ದಾವಣಗೆರೆ ಹೈವೋಲ್ಟೇಜ್ ತ್ರಿಕೋನ ಕದನವಾಗಿ ಮಾರ್ಪಟ್ಟಿದೆ..
ಕಾಂಗ್ರೆಸ್ ಟಿಕೆಟ್ ಸಿಗದೇ ವಿನಯ್ ಕುಮಾರ್ ಬಂಡಾಯ ಎದ್ದಿದ್ದರು, ಸಿಎಂ ಸಿದ್ದರಾಮಯ್ಯ ಸಂಧಾನ ಮಾಡಿದ್ದರು ನಾಮಪತ್ರ ಸಲ್ಲಿಕೆ ಮಾಡಿ ವಿನಯ್ ಕುಮಾರ್ ಸುದ್ದಿಯಾಗಿದ್ದರು, ಇಂದು ನಾಮಪತ್ರ ವಾಪಸ್ ಅವಧಿ ಮುಕ್ತಾಯಗೊಂಡಿದ್ದು, ನಾಮಪತ್ರ ವಾಪಸ್ ಪಡೆಯದೇ ಕಣದಲ್ಲಿ ಮುಂದುವರಿದಿದ್ದು, ಕಾಂಗ್ರೆಸ್ ಗೆ ಟೆನ್ಶನ್ ತರಿಸಿದೆ, ಏಕಂದ್ರೆ ಅಹಿಂದ ಮತಗಳು ಹೆಚ್ಚಿರೋ ಕ್ಷೇತ್ರದಲ್ಲಿ ವಿನಯ್ ಕುಮಾರ್ ಸಂಚಲನ ಮೂಡಿಸಿದ್ದಾರೆ, ಅಹಿಂದ ಮತಗಳು ನಂಬಿ ಕೂತಿರೋ ಕಾಂಗ್ರೆಸ್ ಗೆ ವಿನಯ್ ಸ್ಪರ್ಧೆಯಿಂದ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ, ಕಾಂಗ್ರೆಸ್ ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ನಡೆಸಿದ್ದು, ಸತತ ಆರು ಭಾರೀ ಸೋತಿರೋ ಕಾಂಗ್ರೆಸ್ ಗೆ ಪಕ್ಷೇತರ ಸ್ಪರ್ಧೆಯಿಂದ ಈ ಭಾರೀಯೂ ಹಾದಿ ಕಠಿಣ ಎನ್ನಲಾಗ್ತಿದೆ, ಆದರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಭಿವೃದ್ದಿ ಆಡಳಿತ, ಪ್ರಭಾ ಮಲ್ಲಿಕಾರ್ಜುನ ಅವರ ಆರೋಗ್ಯ ಸೇವೆ ವಿಚಾರ ಇಟ್ಟುಕೊಂಡು ಗೆದ್ದೆ ಗೆಲ್ತಿವಿ ಎಂದು ಕಾಂಗ್ರೆಸ್ ಕಾನ್ಫಿಡೆಂಟಾಗಿ ಮೂವ್ ಆಗ್ತಿದೆ, ಇತ್ತ ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್ ಸ್ಪರ್ಧೆ ನಡೆಸಿದ್ದಾರೆ, ಬಿಜೆಪಿ ಅಭ್ಯರ್ಥಿಗೆ ಒಳಗೊಳಗೆ ರೆಬೆಲ್ಸ್ ಟೆನ್ಶನ್ ಇದ್ದೆ ಇದೇ ಎನ್ನಲಾಗ್ತಿದ್ದು, ದಾವಣಗೆರೆಯಲ್ಲಿ ತ್ರಿಕೋನ ಸ್ಪರ್ಧೆ ಫಿಕ್ಸಂತು ಆಗಿದೆ..
ಮೂರು ನಾಮಪತ್ರ ವಾಪಸ್, ಮೂವತ್ತು ಅಭ್ಯರ್ಥಿಗಳು ಕಣದಲ್ಲಿ.
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಏಪ್ರಿಲ್ 22, ರಂದು 3 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು ಚುನಾವಣಾ ಅಂತಿಮ ಕಣದಲ್ಲಿ 30 ಅಭ್ಯರ್ಥಿಗಳಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏ.19 ಕೊನೆಯ ದಿನವಾಗಿತ್ತು, ಒಟ್ಟು 40 ಅಭ್ಯರ್ಥಿಗಳಿಂದ 54 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಏ.20 ರಂದು ನಡೆದ ನಾಮಪತ್ರ ಪರಿಶೀಲನೆಯಲ್ಲಿ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕ್ರತವಾಗಿ 33 ಅಭ್ಯರ್ಥಿಗಳ ನಾಮಪತ್ರ ಕ್ರಮ ಬದ್ದವಾಗಿದ್ದವು. ಏ.22ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಏ.22 ರಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಇರ್ಫಾನ್ ಮುಲ್ಲಾ, ಅಲ್ಲಾಭಕಾಷ್ ಬಿ ಹಾಗೂ ಕೆ.ಜಿ ಅಜ್ಜಪ್ಪ ಸೇರಿ 3 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಚುನಾವಣಾ ಅಂತಿಮ ಕಣದಲ್ಲಿ ಎಲ್ಲಾ ಪಕ್ಷ, ಪಕ್ಷೇತರರು ಸೇರಿದಂತೆ ಕಣದಲ್ಲಿ 30 ಅಭ್ಯರ್ಥಿಗಳು ಉಳಿದಿದ್ದಾರೆ.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ..
ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ ತಿಪ್ಪೇಸ್ವಾಮಿ ಎ.ಕೆ, ಭಾರತೀಯ ಕಾಂಗ್ರೆಸ್ ಪಕ್ಷದ ಡಾ; ಪ್ರಭಾ ಮಲ್ಲಿಕಾರ್ಜುನ್, ಉತ್ತಮ ಪ್ರಜಾಕೀಯ ಪಕ್ಷದ ಈಶ್ವರ, ಭಾರತೀಯ ಜನತಾ ಪಾರ್ಟಿ ಜಿ.ಎಸ್.ಗಾಯಿತ್ರಿ, ಬಿ.ಎಸ್.ಪಿ ಹನುಮಂತಪ್ಪ, ಸಮಾಜ ವಿಕಾಸ ಕ್ರಾಂತಿ ರುದ್ರೇಶ್ ಕೆ.ಹೆಚ್, ರಾಣಿ ಚೆನ್ನಮ್ಮ ಪಾರ್ಟಿ ವೀರೇಶ್.ಎಸ್, ಕಂಟ್ರಿ ಸಿಟಿಜನ್ ಪಾರ್ಟಿ ಎ.ಟಿ.ದಾದಾ ಖಲಂದರ್, ನವಭಾರತ ಸೇನಾ ಎಂ.ಜಿ.ಶ್ರೀಕಾಂತ್, ಜನಹಿತ ಪಕ್ಷ ದೊಡ್ಡೇಶ್ ಹೆಚ್.ಎಸ್, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ ಶ್ರೀನಿವಾಸ ಎಂ.ಸಿ, ಕೆ.ಆರ್.ಎಸ್.ನಿಂದ ಕೆ.ಎಸ್.ವೀರಭದ್ರಪ್ಪ.
ಪಕ್ಷೇತರರಾಗಿ ವಿನಯ್ ಕುಮಾರ್ ಜಿ.ಬಿ, ಟಿ.ಜಬೀನ್ ತಾಜ್, ಎ.ಕೆ.ಗಣೇಶ್, ಬರ್ಕತ್ ಅಲಿ, ಮೊಹಮದ್ ಹಯಾತ್ ಎಂ, ಎಂ.ಟಿ.ಚಂದ್ರಣ್ಣ, ಸೈಯದ್ ಜಬೀವುಲ್ಲಾ.ಕೆ, ರವಿನಾಯ್ಕ್ ಬಿ, ತಸ್ಲಿಮ್ ಬಾನು, ಪರ್ವೇಜ್ ಹೆಚ್, ರಶೀದ್ ಖಾನ್, ಸಲೀಮ್ ಎಸ್, ಮಂಜುನಾಥ ಎ.ಕೆ, ಅಬ್ದುಲ್ ನಜೀರ್ ಅಹ್ಮದ್, ಪೆದ್ದಪ್ಪ ಎಸ್, ಮೆಹಬೂಬ್ ಬಾಷಾ, ಜಿ.ಎಂ.ಬರ್ಕತ್ ಅಲಿ ಬಾಷಾ, ಜಿ.ಎಂ.ಗಾಯಿತ್ರಿ, ಇವರು ಅಂತಿಮ ಕಣದಲ್ಲಿದ್ದಾರೆ..