POWER SAMACHARA | KANNADA NEWS | BREKING NEWS| 13-09-2023.. ದಾವಣಗೆರೆ: ಅಲ್ಲಿ ಬಣ್ಣದ ಲೋಕವೇ ನಿರ್ಮಾಣ ಆಗಿತ್ತು, ಬೆರುಗು ಮೂಡಿಸುವಂತಹ ವೈವಿಧ್ಯಮಯ ಕಲಾಕೃತಿಗಳು ಒಂದೇ ಸೂರಿನಡಿ ಪ್ರದರ್ಶನಗೊಂಡಿದ್ದವು, ಚಿತ್ರಗಳ ಮುಖೇನವೇ ಬದುಕು, ಬವಣೆ, ವಿಡಂಬನೆ ಎಲ್ಲವು ರೂಪಿತಗೊಂಡಿದ್ದವು, ಜೀವನದ ಅನುಭವ ಮೂಡಿಸುವ ಚಿತ್ರಗಳು ಮನಸೂರೆಗೊಂಡವು..
ಕಲಾ ಮೆರಗು, ಬಣ್ಣದ ಲೋಕ
ಕಲಾ ಮೆರಗು, ಬಣ್ಣದ ಲೋಕ ಅನಾವರಣ, ಒಂದೇ ಸೂರಿನಡಿ ವೈವಿಧ್ಯಮಯ ಪ್ರಪಂಚ, ಪರಿಸರ ಕಾಳಜಿ, ಜೀವನ ಮೌಲ್ಯ, ವಿಡಂಭನೆ ತಿಳಿಸುವ ಚಿತ್ರಗಳು.. ಈ ಎಲ್ಲಾ ಬಗೆಬಗೆಯ ವೈವಿಧ್ಯಮಯ ಚಿತ್ರಗಳು, ದೃಶ್ಯಗಳು ಕಂಡು ಬಂದಿದ್ದು ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ.. ಹೌದು.. ಹೈ ಟ್ರೆಂಡ್ ಪ್ರಪಂಚದಲ್ಲಿ ನಮಗೆ ಸಿಗೋದೆಲ್ಲವು ಜೆರಾಕ್ಸ್ ಕಾಪಿ, ಫೋಟೊ ಜಗತ್ತು, ಅಂಗೈಯಲ್ಲಿನ ಮೊಬೈಲ್ ನಲ್ಲಿ ಕ್ಲಿಕ್ ಕ್ಲಿಕ್ ಅಂತಾ ಒತ್ತಿದ್ರೆ ಸಾಕು ಫೋಟೊ ಕೈ ಸೇರೆ ಬಿಡುತ್ತೆ, ಈ ಒಂದು ಓಡುತ್ತಿರುವ ಪ್ರಪಂಚದಲ್ಲಿ ಕೈ ಪೇಟಿಂಗ್, ಚಿತ್ರಗಳು, ಬಣ್ಣದ ಲೋಕ ಮರೆಯಾಗುತ್ತಿದೆ, ಆದರೆ ಈ ಒಂದು ಕೈ ಬರವಣಿಗೆ ಚಿತ್ರಗಳನ್ನು ಉಳಿಸಿ ಬೆಳೆಸಲು ದಾವಣಗೆರೆಯ ದೃಶ್ಯ ಕಲಾ ವಿದ್ಯಾಲಯ ಶ್ರಮಿಸುತ್ತಿದೆ, ಪ್ರತಿ ವರ್ಷ ಚಿತ್ರ ಪ್ರದರ್ಶನ ನಡೆಸುತ್ತಿದೆ, ಅದರಂತೆ ಈ ವರ್ಷವು ಸಹ ಕಾಲೇಜ್ ನಲ್ಲಿ ಚಿತ್ರೋತ್ಸವ ಕಾರ್ಯಕ್ರಮ ಆಯೋಜಿಸಿತ್ತು, ಸುಮಾರು 70ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಂಡವು, ಎಲ್ಲಾ ಚಿತ್ರಗಳನ್ನೂ ಕಾಲೇಜಿನ ವಿದ್ಯಾರ್ಥಿಗಳು ಕೈ ಬರವಣಿಗೆಯಿಂದ ಬಿಡಿಸಿ ಬಣ್ಣ ತುಂಬಿದ್ದರು, ಒಂದೊಂದು ಚಿತ್ರವನ್ನೂ ನೋಡುತ್ತಾ ಹೋದರೆ ಮೈ ಮರೆಯೋದು ಗ್ಯಾರಂಟಿಯಾಗಿತ್ತು, ಯಾಕಂದರೆ ಅಷ್ಟರ ಮಟ್ಟಿಗೆ ಚೆಂದನೇ ಚಿತ್ರಗಳು ಮೂಡಿ ಬಂದಿದ್ದವು : ಕಲಾ ವಿದ್ಯಾರ್ಥಿನಿ ಮೊನಿಕಾ ಬಿಡಿಸಿದ ಕ್ಯಾನವಸ್ ಪೇಟಿಂಗ್, ಸಪ್ರಿಲ್ ತಾಜ್ ಅವರು ಬಿಡಿಸಿದ ಜೀವನದ ಬಗೆಬಗೆನ ಚಿತ್ರ ಕಣ್ಣಿಗೆ ಕಟ್ಟುವಂತಿತ್ತು.
ಚಿತ್ರಕೃತಿ ನೋಡುವುದೇ ಉಲ್ಲಾಸಮಯ
ಬೆಣ್ಣೆನಗರಿಯಲ್ಲಿ ಬೆರಗು ಮೂಡಿಸುವ ಬಣ್ಣದ ಲೋಕ ನಿರ್ಮಾಣ ಆಗಿತ್ತು, ಚಿತ್ರಗಳೆಂದರೆ ಅರಳಿ ನಿಲ್ಲುವ ಲೋಕ, ಇಲ್ಲಿ ಸಾಂಪ್ರದಾಯಿಕ ಚಿತ್ರಕಲೆ, ಸಮಕಾಲೀನ ಚಿತ್ರಶೈಲಿ, ತೈಲವರ್ಣ, ಕೋಲೇಜ್, ಲಿಥೋಗ್ರಾಫ್, ಡೂಡಲ್, ಉಬ್ಬು ಚಿತ್ರಗಳು, ಗ್ರಾಫಿಕ್, ಛಾಯಾಚಿತ್ರ, ಪೆನ್ಸಿಲ್ ಚಿತ್ರ ಸೇರಿದಂತೆ ತರೇವಾರಿ ಚಿತ್ರಗಳು ಪ್ರದರ್ಶನಗೊಂಡವು, ಅನುಭವ ನುಡಿ ಜೀವನ ಅನುಭವದಿಂದ ವ್ಯಕ್ತವಾಗುವ ಚಿತ್ರಕೃತಿಗಳನ್ನು ನೋಡುವುದೇ ಉಲ್ಲಾಸಮಯಮಯವಾಗಿತ್ತು, ಗಿಡ ಮರ ಬೆಳೆಸಿ ಉಳಿಸಿ, ಪಾಪು ಲೇಷನ್ ಕಂಟ್ರೋಲ್, ಪ್ರಾಣಿ ಸಂಕುಲ ಉಳಿಸುವ ಮಾರ್ಗ, ರೈತರ ಕೃಷಿ ಮಾರುಕಟ್ಟೆ ಚಿತ್ರಗಳು ಗಮನ ಸೆಳೆದವು, ನಂಗು ಫ್ರೀ ನಿಂಗು ಫ್ರೀ, ಕೊನೆಯಲ್ಲಿ ಯಾರಿಗಿಲ್ಲ ಫ್ರೀ ಎಂಬ ಚಿತ್ರ ಸರ್ಕಾರದ ಕಿವಿ ಹಿಂಡಿದಂತಿತ್ತು, ಕೆಎಸ್ ಆರ್ ಟಿಸಿ ಬಸ್ ಚಿತ್ರ, ಸ್ಯಾಟ್ ಲೈಟ್ ಚಿತ್ರಗಳು ಅದ್ಭುತವಾಗಿ ಮೂಡಿಬಂದಿದ್ದವು, ಕಲಾ ವಿದ್ಯಾರ್ಥಿ ಅರಣ್ ಬಿಡಿಸಿದ ಹಬ್ಬ ಹರಿದಿನಗಳಲ್ಲಿ ಹೂ ಮಾರುವ ಮಹಿಳೆಯದ್ದು ಹೂ ಮಾರುವುದೇ ಅವಳ ಹಬ್ಬ ಎಂಬ ಚಿತ್ರ ಮನಕಲುಕುವಂತಿತ್ತು, ಕೊನೆಯಲ್ಲಿ ಚಂದ್ರಯಾನ-3 ಮಾದರಿ ಪ್ರದರ್ಶನ ಎಲ್ಲರ ಗಮನ ಸೆಳೆಯಿತು..
ಕಲಾ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ
ಒಟ್ಟಾರೆ ಬೆಣ್ಣಿನಗರಿಯಲ್ಲಿ ಬಣ್ಣದ ಲೋಕವೇ ನಿರ್ಮಾಣ ಆಗಿತ್ತು, ಕಲಾ ವಿದ್ಯಾರ್ಥಿಗಳ ಕಲೆಗೆ ಬೆಲೆ ಕಟ್ಟಲಾಗದು, ಕಲಾ ಲೋಕದಲ್ಲಿ ಮನಸ್ಸನ್ನು ಪ್ರಪುಲ್ಲಗೊಳಿಸುವ ಸನ್ನಿವೇಶ ಕಂಡು ಬಂದಿದ್ದು, ಕಲಾ ವಿದ್ಯಾರ್ಥಿಗಳಿಗೆ ಇದೊಂದು ಸೂಕ್ತ ವೇದಿಕೆಯಾಗಿದ್ದಂತು ಸತ್ಯ..