POWER SAMACHARA | KANNADA NEWS | BREKING NEWS| 11-06-2023

ದಾವಣಗೆರೆ: ನೋಯ್ಡಾದಲ್ಲಿ ನಡೆದ ಮಿಸ್ಸೆಸ್ ಯೂನಿವರ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನ ದಾವಣಗೆರೆಯ ಕೆಸಿ ಮೇಘಾ ಮುಡಿಗೇರಿಸಿಕೊಂಡಿದ್ದಾರೆ..

ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೆಬಿಜೆ ಸಂಸ್ಥೆ ಖಜಾಂಚಿ ಬಿ. ಪಂಚಾಕ್ಷರಿ, ಕೆಬಿಜೆ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ಆಗಿರುವ ಮೇಘಾ ಅವರು, ಗ್ರೇಟರ್ ನೊಯ್ದಾದಲ್ಲಿ ಜೂನ್ 3 ರಂದು ನಡೆದ ಎಸ್.ಕೆ. ಎಂಟರ್ಟೈನ್ಮೆಂಟ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು..

ಪ್ರಶಸ್ತಿ ವಿಜೇತೆ ಕೆಸಿ ಮೇಘಾ ಅವರು ಮಾತನಾಡಿ, ಮೂರು ವರ್ಷದಿಂದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ, ಹುಬ್ಬಳ್ಳಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಯಾವುದೇ ಪ್ರಶಸ್ತಿ ಪಡೆಯಲು ಆಗಲಿಲ್ಲ. ಹುಬ್ಬಳ್ಳಿಯಲ್ಲೇ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ನಂತರ ವಿಶ್ವಾಸ ಬಂದಿತು, ಆರ್ಥಿಕ ಕಾರಣದಿಂದ ಮಿಸ್ಸೆಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ. ನಂತರ ನಡೆದ ಸ್ಪರ್ಧೆಯಲ್ಲಿ ಭಾಗವಹಿಸ ಲಾರಂಭಿಸಿದೆ. ಅಂತಿಮವಾಗಿ ನೋಯ್ದಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಯಿತು. ಈ ಮೂಲಕ ದಾವಣಗೆರೆ ಜಿಲ್ಲೆಗೆ ಮತ್ತು ಕರ್ನಾಟಕ ಕೀರ್ತಿ ತಂದಿರುವ ಖುಷಿ ತಂದಿದೆ ಎಂದು ಸಂತಸ ತಂದಿದೆ ಎಂದರು..