POWER SAMACHARA | KANNADA NEWS | BREKING NEWS| 17-08-2023..
ದಾವಣಗೆರೆ : ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿ, ಅದೇ ರೀತಿ ಆರೋಗ್ಯ ಇಲಾಖೆ ನೌಕರರು ಜನರ ಆರೋಗ್ಯ ಕಾಪಾಡಲು ಹೋರಾಡುವ ಅವಶ್ಯಕತೆ ಇದೆ ಎಂದು ಲೋಕಾಯುಕ್ತ ದಾವಣಗೆರೆ ಎಸ್ಪಿ ಮಲ್ಲಿಕಾರ್ಜುನ ಎಸ್ ಕೌಲಾಪುರೆ ಹೇಳಿದರು..
ನಗರದ ಸರ್ಕಾರಿ ನೌಕರರ ಭವನದಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜನ್ಮದಿನೋತ್ಸವ ಅಂಗವಾಗಿ ಏರ್ಪಡಿಸಿದ್ದ ಕನಕ ನೌಕರರ ಸಮ್ಮಿಲನ, ಆರೋಗ್ಯ ಇಲಾಖೆ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು, ಆರೋಗ್ಯ ಇಲಾಖೆ ನೌಕರರು, ನಿಮಗೆ ನೀಡಿರುವ ಕರ್ತವ್ಯವನ್ನು ಗೌರವದಿಂದ ನೆರವೇರಿಸಿ ತೃಪ್ತಿ ಪಡೆಯಬೇಕು, ರಾಯಣ್ಣನ ನಾಡಿನಲ್ಲಿ ಇರುವವರು ನಾವು, ರಾಯಣ್ಣ ಸ್ವಾತಂತ್ರ್ಯ ಪಡೆಯಲು ಮಾಡಿದ ಕೆಚ್ಚೆದೆಯ ಹೋರಾಟವೇ ನಮಗೆ ಸ್ಪೂರ್ತಿ, ಆರೋಗ್ಯ ಇಲಾಖೆ ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರಿದು ಮಾಡಿದ ಕೆಲಸ ನಿಜಕ್ಕೂ ಅವಿಸ್ಮರಣೀಯ, ಅಂತಹ ನೌಕರರಿಗೆ ಶಿವಾನಂದ ದಳವಾಯಿ ಅವರು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದರು..
ಕನಕ ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ, ಶಿವಾನಂದ ದಳವಾಯಿ ಮಾತನಾಡಿ, ನಿಮ್ಮೆಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಈ ಕಾರ್ಯಕ್ರಮ ರೂಪಿಸಬೇಕು ಎಂದು ಮಾತನಾಡಿ ಕಾರ್ಯಕ್ರಮ ಮಾಡಲಾಗಿದೆ, ಬಹಳಷ್ಟು ಜನ ನಮ್ಮ ಸಮಾಜದವರು ಕೊರೊನಾ ಸಂದರ್ಭದಲ್ಲಿ ಸೇವೆ ಸಲ್ಲಿಸಿದ್ದಾರೆ, ಅಂತಹವರನ್ನು ಗುರುತಿಸಬೇಕು ಮತ್ತು ಸನ್ಮಾನ ಮಾಡಿ ಗೌರವಿಸಬೇಕು, ಈ ಮೂಲಕ ಸಂಗೊಳ್ಳಿ ರಾಯಣ್ಣರ ಹುಟ್ಟು ಹಬ್ಬ ಮತ್ತು ಸ್ವಾತಂತ್ರ್ಯ ದಿನಾಚರಣೆ ಆಚರಿಸಬಹುದು ಎಂದು ಕಾರ್ಯಕ್ರಮ ರೂಪಿಸಿದ್ದೆವು, ಜೊತೆಗೆ ಆರೋಗ್ಯ ಇಲಾಖೆ ನೌಕರರು ಒಂದೆಡೆ ಸೇರಲು ಸಹಕಾರಿ ಆಯಿತು, ಮುಂದೆ ಹೆಚ್ಚಿನ ಕಾರ್ಯಕ್ರಮ ರೂಪಿಸುವ ಮೂಲಕ ಸಂಘವನ್ನು ಇನ್ನಷ್ಟು ಬಲಪಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ನೌಕರರನ್ನು ಹಾಗೂ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹರಿಹರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ನ್ಯಾಮತಿ ತಾಲ್ಲೂಕು ಅಧಿಕಾರಿ ಡಾ. ಶಿವಕುಮಾರ್, ಹೊನ್ನಾಳಿ ತಾಲ್ಲೂಕು ಆರೋಗ್ಯ ಅಧಿಕಾರ ಡಾ.ಕೆಂಚಪ್ಪ, ಶುಶ್ರುಷಣಾಧಿಕಾರಿಗಳಾದ ಕುಬೇಂದ್ರ, ಜಿಲ್ಲಾ ಸರ್ಕಾರಿ ವಿಕಿರಣ ಶಸ್ತ್ರ ಚಿತ್ರಣ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ನಾಗಪ್ಪ, ಹೊನ್ನಾಳಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಆರ್ ಎಸ್ ಪಟೇಲ್,ಲ ಚನ್ನಗಿರಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಎಂ ಬಿ. ಡಿ ಆನಂದಪ್ಪ, ಗುಡದಯ್ಯ, ಚಂದ್ರಕಾಂತ್ ಸ್ವಾಗತಿಸಿದರು. ಶಿಕ್ಷಕ ಪದ್ದಪ್ಪ ನಿರೂಪಿಸಿದರು. ಪ್ರಾಸ್ತಾವಿಕವಾಗಿ ಉಮಾಪತಿ ಮಾತನಾಡಿದರು..