POWER SAMACHARA | KANNADA NEWS | BREKING NEWS| 11-07-2023..

ರೈಲು ಹತ್ತಿರವಿದ್ದಾಗ ಹಳಿ ದಾಟಲು ಮುಂದಾದ ವೃದ್ದ.. ಮುಂದೇನಾಯ್ತು ಗೊತ್ತಾ..?

ದಾವಣಗೆರೆ: ರೈಲು ಆಗಮಿಸುತ್ತಿದ್ದ ವೇಳೆ ರೈಲ್ವೆ ಹಳಿ ದಾಟುತ್ತಿದ್ದ ವೃದ್ದನನ್ನು ಆರ್ ಪಿ ಎಫ್ ಕಾನಸ್ಟೇಬಲ್ ಕೂದಲೆಳೆಯಲ್ಲಿ ಕಾಪಾಡಿದ ಘಟನೆ ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ..

ಟ್ರೈನ್ ಬರುತ್ತಿದ್ದಾಗ ಗಮನಿಸದೇ ಹಳಿ ದಾಟಲು ವೃದ್ದ ರಂಗಪ್ಪ ಹೋಗುತ್ತಿದ್ದರು, ಹಳಿ ದಾಟುತ್ತಿದ್ದ ವೃದ್ದನನ್ನು ಗಮನಿಸಿದ ಗಸ್ತಿನಲ್ಲಿದ್ದ ಆರ್ ಪಿ ಎಫ್ ಕಾನಿಸ್ಟೇಬಲ್ ಶಿವಾನಂದ, ಓಡಿಬಂದು ವೃದ್ದನನ್ನು ರಕ್ಷಣೆ ಮಾಡಿದ್ದಾರೆ. ಕಾನಸ್ಟೇಬಲ್ ಶಿವಾನಂದ ಸಮಯಪ್ರಜ್ಙೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಕಾನಿಸ್ಟೇಬಲ್ ಶಿವಾನಂದ ರನ್ನು ಆರ್ ಪಿ ಎಫ್ ಹಾಗೂ ರೈಲ್ವೆ ಪೊಲೀಸರು ಅಭಿನಂದಿಸಿದ್ದಾರೆ..

ಕೊಚವಲ್ಲಿ ಟು ಹುಬ್ಬಳ್ಳಿ ಎಕ್ಸ್ಪ್ರೆಸ್ ಟ್ರೈನ್ ಇದಾಗಿದ್ದು, ಕೊಚವಲ್ಲಿಯಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗ ಮಧ್ಯೆ ದಾವಣಗೆರೆ ರೈಲು ನಿಲ್ದಾಣಕ್ಕೆ ಆಗಮಿಸುವ ವೇಳೆ ರೈಲನ್ನು ಗಮನಿಸದ ವೃದ್ಧ ರಂಗಪ್ಪನವರು ರೈಲ್ವೆ ಹಳಿ ದಾಟುವ ಸಾಹಸ ಮಾಡಿದ್ದಾರೆ. ಇದನ್ನ ಗಮನಿಸಿದ ಆರ್ ಪಿ ಎಫ್ ಕಾನ್ಸ್ ಟೇಬಲ್ ಶಿವಾನಂದರವರು ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಹಾರಿ ವೃದ್ಧನನ್ನು ರೈಲಿನಿಂದ ಕಾಪಾಡುವ ಮೂಲಕ ಸಾಹಸ ಮೆರೆದಿದ್ದಾರೆ. ವೃದ್ದನನ್ನು ರಕ್ಷಣೆ ಮಾಡಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ...