POWER SAMACHARA | KANNADA NEWS | BREKING NEWS| 12-07-2023..

ದಾವಣಗೆರೆ: ಎಲ್ಲಾ ಮನೆಗಳಿಗೂ ಆ ಕೆಂಪು ಸುಂದರಿ ಅವಶ್ಯಕ, ಆದರೆ ಈ ಕೆಂಪು ಬಂಗಾರಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ, ಕಳ್ಳರು ಖದೀಯಲು ಶುರು ಮಾಡಿದ್ದು, ಮಾಲೀಕರಿಗೆ ತಲೆ ಬಿಸಿಯಾಗಿದೆ, ಹೀಗಾಗಿ ದೊಣ್ಣೆ ಹಿಡಿದು ನಾಯಿಗಳ ಜೊತೆ ಕಾವಲಾಗಿ ನಿಂತಿದ್ದಾರೆ..

ಹೌದು.. ಕೆಂಪು ಸುಂದರಿ ಬೆಲೆ ಗಗನಕ್ಕೆ ಏರಿದೆ, ಅಯ್ಯೋ ಇದೇನಿದು ಅಂದುಕೊಳ್ಳಬೇಡಿ, ನಾವು ಈಗ ಹೇಳ್ತಾ ಇರೋದು ಕೆಂಪು ಸುಂದರಿ ಟೊಮ್ಯಾಟೊ ಕಥೆ, ಯೆಸ್ ಟೊಮ್ಯಾಟೊಗೆ ಬಂಗಾರದ ಬೆಲೆ ಬಂದಿದೆ, ತರಕಾರಿಗಳಿಗೆಲ್ಲ ರಾಜ ಎನ್ನಿಸಿಕೊಂಡಿದೆ. ಬೆಲೆ ಗಗನಕ್ಕೇರಿದ್ದರಿಂದ ರೈತನಿಗೆ ಬೇಡಿಕೆ ಹೆಚ್ಚಿದೆ. ಟೊಮ್ಯಾಟೊಗೆ ಚಿನ್ನದ ಬೆಲೆ ಬಂದಿರುವ ಬೆನ್ನಲ್ಲೇ ರೈತರು ಜಮೀನುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಳ್ಳಕಾಕರ ಕಾಟದಿಂದ ಬೇಸತ್ತಿರುವ ರೈತರು ಟೊಮ್ಯಾಟೊ ಬೆಳೆ ಕಾಯುವುದೇ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಟೊಮ್ಯಾಟೊ ಬೆಳೆಯನ್ನು ಕಳ್ಳರು ಕದಿಯುತ್ತಿದ್ದು, ದಾವಣಗೆರೆಯ ರೈತ ಕೂಡ ಎರಡೆರಡು ನಾಯಿಗಳೊಂದಿಗೆ ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾನೆ.

ರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡಿರುವ ಹೆಗ್ಗಳಿಕೆ

ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯಲ್ಲಿ ಟೊಮ್ಯಾಟೊ ಬೆಳೆ ಹೆಚ್ಚಾಗಿ ಬೆಳೆಯುತ್ತಾರೆ, ಇಲ್ಲಿಯ ಸುತ್ತಮುತ್ತಲಿನ ಗ್ರಾಮದ ಜಮೀನುಗಳಲ್ಲಿ ರೈತರು ಬೆಳೆಯುವ ಟೊಮ್ಯಾಟೊವನ್ನು ರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡಿರುವ ಹೆಗ್ಗಳಿಕೆ ಇದೆ. ಅದರೆ ಇದೀಗ ಟೊಮ್ಯಾಟೊಗೆ ಬಂಗಾರದ ಬೆಲೆ ಬಂದಿರುವುದ್ದರಿಂದ ಬೇಡಿಕೆ ಹೆಚ್ಚಿದೆ. ಟೊಮ್ಯಾಟೊ ಬೆಲೆ 80 ರಿಂದ 100 ರೂಪಾಯಿಯ ಗಡಿ ದಾಟಿದ್ದರಿಂದ ರೈತರ ಟೊಮ್ಯಾಟೊ ಬೆಳೆದ ಜಮೀನುಗಳಲ್ಲಿ ಕಳ್ಳ ಕಾಕರು ಕಾಟ ಹೆಚ್ಚಾಗಿದೆ. ಇದರಿಂದ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಕೊಡಗನೂರು ಗ್ರಾಮದ ರೈತರು ಎರಡೇರಡು ಶ್ವಾನಗಳೊಂದಿಗೆ ಹಗಲು ರಾತ್ರಿ ಟೊಮ್ಯಾಟೊ ಕಾಯುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಕೊಡಗನೂರು ಗ್ರಾಮದ ಶರಣಪ್ಪ ಹಾಗು ಶರತ್ ಎಂಬವರು ಇಬ್ಬರು ರೈತರು ತಲ ಒಂದೊಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆ ಬೆಳೆದಿದ್ದಾರೆ. ಬೆಲೆ ಏನೋ ಚೆನ್ನಾಗಿಯೇ ಇದ್ದು, ಕಳ್ಳಕಾಕರ ಕಾಟಕ್ಕೆ ಈ ರೈತರು ಬೇಸತ್ತು ಹೋಗಿದ್ದಾರೆ. ರೈತ ಶರಣಪ್ಪ ಬೆಳೆದಿರುವ ಟೊಮ್ಯಾಟೊನ್ನು ಕಾಯಲು ಎರಡು ಶ್ವಾನಗಳೊಂದಿಗೆ ಕಾಯುತ್ತಿದ್ದಾರೆ. ಈ ಹೊಲದ ಬಳಿ ರಾತ್ರಿ ಯಾರೇ ಬರಲಿ ಈ ಶ್ವಾನಗಳು ಬಿಟ್ಟುಕೊಳ್ಳುತ್ತಿಲ್ಲವಂತೆ. ಶ್ವಾನ ಹಾಗು ರೈತ ಶರಣಪ್ಪನವರ ಕುಟುಂಬ ಕಾವಲು ಇದ್ರು ಕೂಡ ಐದಾರು ಬಾಕ್ಸ್ ಟೊಮ್ಯಾಟೊ ಕಳ್ಳತನ ಮಾಡಿದ್ದರಂತೆ ಇದರಿಂದ ರೈತ ಶರಣಪ್ಪ ಭಯದಲ್ಲೇ ವಾತಾವರಣದಲ್ಲಿ ಟೊಮ್ಯಾಟೊ ಕಾಯುತ್ತಿದ್ದಾರೆ. ಈ ವೇಳೆ ರೈತ ಶರಣಪ್ಪ ಮಾತನಾಡಿದ್ದು, ಎರಡು ನಾಯಿಗಳೊಂದಿಗೆ ಕಾವಲು ಟೊಮ್ಯಾಟೊ ಕಾಯುತ್ತಿದ್ದೇನೆ, ಆದ್ರು ಕೂಡ ಐದಾರು ಬಾಕ್ಸ್ ಟೊಮ್ಯಾಟೊವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಅಂಗೈಯಲ್ಲಿ ಜೀವ ಹಿಡಿದು ಟೊಮ್ಯಾಟೊ ಕಾಯುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.

ಕೊಡಗನೂರು ಗ್ರಾಮದ ರೈತ ಮಹಿಳೆ ಪ್ರೇಮ ಎನ್ನುವರು ಕೂಡ ತಮ್ಮ ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆದು ಭಯದಿಂದ ಕಾಯುತ್ತಲೇ ಜೀವನ ಸಾಗಿಸುತ್ತಿದ್ದಾರೆ. ಕಳ್ಳರ ಕಾಟದಿಂದ ಬೇಸತ್ತು ಈಗಾಗಲೇ ಇನ್ನೂರು ಬಾಕ್ಸ್ ಟೊಮ್ಯಾಟೊವನ್ನು ಮಾರುಕಟ್ಟೆಗೆ ರಫ್ತು ಮಾಡಿದ್ದರಂತೆ. ಇನ್ನು ಈ ಪ್ರೇಮರವರ ಹೊಲವನ್ನು ಅವರ ಪತಿ ಮಕ್ಕಳು ಒಬ್ಬೊಬ್ಬರು ಒಂದೊಂದು ಪಾಳಿಯಂತೆ ಕಾಯುತ್ತಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ರೈತ ಮಹಿಳೆ ಪ್ರೇಮರವರು ಒಂದು ಬಾಕ್ಸ್ ಟೊಮ್ಯಾಟೊ 1800 ರಿಂದ 2000 ರೂಪಾಯಿದ್ದು, ಟೊಮ್ಯಾಟೊ ಉಳಿಸಿಕೊಳ್ಳುವುದೇ ಒಂದು ಸವಾಲಿನ ಕೆಲಸವಾಗಿದೆ. ಈ ವರ್ಷ ಬೆಳೆ ಚೆನ್ನಾಗಿದ್ದು, ಕಳ್ಳರ ಕಾಟ ಹೆಚ್ಚಾಗಿದೆ, ಒಬ್ಬೊಬ್ಬರಂತೆ ಕಾಯಬೇಕಾಗಿದೆ. ಕಾಯ್ತಾ ಇದ್ರು ಹೊಲದ ಕೊನೆ ಭಾಗದಲ್ಲಿ ಈಗಾಗಲೇ ಕಳ್ಳರು ಟೊಮ್ಯಾಟೊ ಕಳ್ಳತನ ಮಾಡಿದ್ದಾರೆ ಎಂದರು.

ಕೊಡಗನೂರಿನಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೊಮ್ಯಾಟೊ ಫೇಮಸ್...

ಹೌದು ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದ ಸುತ್ತಮುತ್ತ ಬೆಳೆಯುವ ಟೊಮ್ಯಾಟೊಗೆ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತಿತ್ತು. ರೈತ ಶರಣಪ್ಪ ನವರು ಏಜೆಂಟ್ ಆಗಿ ಕೆಲಸ ಮಾಡುವ ವೇಳೆ ಇಲ್ಲಿನ ಟೊಮ್ಯಾಟೊ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ತಮಿಳುನಾಡು, ದೆಹಲಿ ಸೇರಿದಂತೆ ದೇಶದಂತ್ಯ ರಫ್ತಾಗುತ್ತಿತ್ತು, ಅದ್ರೇ ಇದೀಗ ಇಲ್ಲೇ ಟೊಮ್ಯಾಟೊ ಗೆ ಬಂಗಾರದ ಬೆಲೆ ಬಂದಿದ್ದರಿಂದ ದಾವಣಗೆರೆ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ ಎಂದರು.