POWER SAMACHARA | KANNADA NEWS | BREKING NEWS| 20-08-2023..

ದಾವಣಗೆರೆ: ದೂರದ ಅಮೆರಿಕದಲ್ಲಿ ಆ ಸುಂದರ ಕುಟುಂಬ ಒಳ್ಳೆಯ ಸ್ಯಾಲರಿ ಪಡೆದು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿತ್ತು, ಆದರೆ ಅದೇನಾಯ್ತು ಗೊತ್ತಿಲ್ಲ, ಆ ಮೂವರು ನಿಗೂಢವಾಗಿ ಸಾವು ಕಂಡಿದ್ರು, ಸಾವಿನ ಸುತ್ತ ಅನುಮಾನಗಳ ಹುತ್ತ ಬೆಳಿತಾ ಇರುವಾಗಲೇ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕು ಪತಿಯೇ ಪತ್ನಿ, ಮಗುವನ್ನ ಮುಗಿಸಿ ಕೊನೆಯಲ್ಲಿ ತಾನೂ ಸಾವಿಗೆ ಶರಣಾಗಿದ್ದ..

ಹೌದು.. ಈ ಸಂಸಾರಕ್ಕೆ ಯಾರದ್ದಾದರು ದುಷ್ಟರ ಕಣ್ಣು ಬೀಳುತ್ತೇನೊ ಅನ್ನೋ ಮಟ್ಟಿಗೆ ಇರುವ ಸುಂದರ ಸಂಸಾರ, ನೋಡಿದ್ರೆ ಎಷ್ಟು ಚೆಂದ ಇದೇ ಕ್ಯೂಟ್ ಫ್ಯಾಮಿಲಿ ಕಣ್ರಿ ಎಂದೆನ್ನಬೇಕು, ಈ ಕುಟುಂಬ ಮೂಲತ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೇಕಲ್ಲು ಗ್ರಾಮದವರು, ದಂಪತಿಗಳಿಬ್ಬರು ಸಾಫ್ಟವೇರ್ ಇಂಜಿನಿಯರ್, ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ಎಂಬಲ್ಲಿ ಮನೆ ಮಾಡಿ ಪುಟ್ಟ ಕಂದನೊಂದಿಗೆ ಸುಖ ಜೀವನ ನಡೆಸ್ತಾ ಇದ್ದರು, ಆದರೆ ಅದೇನಾಯ್ತು ಗೊತ್ತಿಲ್ಲ ಮಗುವಿನ ಜೊತೆ ಮೂವರು ಹೆಣವಾಗಿ ಹೋಗಿದ್ರು. ಸಾವು ಸಂಶಯಕ್ಕೆ ಕಾರಣವಾಗಿತ್ತು, ಸಾವಾಗಿ ಎರಡ್ಮೂರು ದಿನಗಳ ಬಳಿಕ ಸ್ಥಳಿಯ ಪೊಲೀಸರಿಗೆ ವಿಷಯ ತಿಳಿದಿದ್ದು, ಕದ ಹೊಡೆದು ನೋಡಿದಾಗ ಶಾಕ್ ಕಾದಿತ್ತು. ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ರು, ಯಾಕೆ, ಹೇಗೆ ಸಾವಾಯ್ತು ಅನ್ನೋ ಮಾಹಿತಿ ಹೊರ ಬಂದಿರಲಿಲ್ಲ..

ಮೂವರ ಸಾವಿಗೆ ಬಿಗ್ ಟ್ವಿಸ್ಟ್..!

ಸುಂದರ ಕುಟುಂಬದ ಸಾವು ಹೇಗಾಯ್ತು ಅನ್ನೋ ಹಲವು ಪ್ರಶ್ನೆಗಳಿಗೆ ಅಮೇರಿಕಾ ಬಾಲ್ಟಿಮೋರ್ ಕೌಂಟಿ ಪೊಲೀಸರು ಪ್ರಾಥಾಮಿಕ ಮಾಹಿತಿಯನ್ನ ಸ್ಥಳಿಯ ವಾಹಿನಿಯೊಂದಕ್ಕೆ ನೀಡಿದ್ದು, ದಾವಣಗೆರೆ ಮೂಲದ ಮೂವರು ನಿಗೂಢ ಸಾವಿನ ವಿಚಾರ ಬಹಿರಂಗಗೊಂಡಿದ್ದು, ಆರು ವರ್ಷದ ಪುತ್ರ ಯಶ್, ಪತ್ನಿ ಪ್ರತಿಭಾರನ್ನ ಕೊಂದು ಕೊನೆಯಲ್ಲಿ ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಾಮಿಕ ಮಾಹಿತಿ ಹೊರ ಬಿದ್ದಿದೆ. ಮೂವರು ಗುಂಡೇಟಿನಿಂದ ಸಾವನ್ನಪ್ಪಿರುವ ಬಗ್ಗೆ ಅಮೇರಿಕದ ಬಾಲ್ಟಿಮೋರ್ ಕೌಂಟಿ ಪೊಲೀಸರು ಪ್ರಾಥಾಮಿಕ ಮಾಹಿತಿ ಬಿಡುಗಡೆ ಮಾಡಿದ್ದಾರೆ, ಮರಣೋತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ.. ಆಗಸ್ಟ್ 15ರಂದು ರಾತ್ರಿ ಘಟನೆ ನಡೆದಿರಬಹುದು ಎಂದು ಊಹಿಸಲಾಗಿದ್ದು, ಆಗಸ್ಟ್ 18ರಂದು ಬಾಲ್ಟಿಮೋರ್ ಪೊಲೀಸರಿಂದ ಘಟನೆ ಕುರಿತು ಮಾಹಿತಿ ಹೊರಬಿದ್ದಿತ್ತು.

988ನಂಬರ್ ಸಹಾಯವಾಣಿ ಕರೆ ಮಾಡುವಂತೆ ಮನವಿ..

ಬಾಲ್ಟಿಮೋರ್ ಕೌಂಟಿಯ ಕಾರ್ಯನಿರ್ವಾಹಕ ಜಾನಿ ಓಲ್ಸ್ಜೆವ್ಸ್ಕಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ, ಎರಡು ಕೊಲೆ ಮಾಡಿ ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷಕರು ಸಾವಿನ ವಿಧಾನ ಮತ್ತು ಕಾರಣಗಳನ್ನು ನಿರ್ಧರಿಸುತ್ತಾರೆ ಎಂದಿದ್ದಾರೆ, ಈ ಭೀಕರ ಕೃತ್ಯದಿಂದ ಪ್ರಾಣ ಕಳೆದುಕೊಂಡ ಅಮಾಯಕ ಬಲಿಪಶುಗಳಿಗಾಗಿ ನಾನು ಎದೆಗುಂದಿದ್ದೇನೆ ಮತ್ತು ತೀವ್ರವಾಗಿ ದುಃಖಿತನಾಗಿದ್ದೇನೆ. ಈ ದುರಂತ ಘಟನೆಯ ನಂತರ ಕುಟುಂಬ ಮತ್ತು ಸಮುದಾಯದ ಸದಸ್ಯರಿಗೆ ಸಹಾಯ ಮಾಡಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ. ಬಾಲ್ಟಿಮೋರ್ ಕೌಂಟಿಯು ಬಿಕ್ಕಟ್ಟಿನಲ್ಲಿರುವವರಿಗೆ 24/7 ಉಚಿತ ಸಹಾಯವನ್ನು ನೀಡುತ್ತದೆ, ಮತ್ತು ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಅನುಭವಿಸುತ್ತಿರುವ ಯಾರಿಗಾದರೂ 988ಗೆ ಕರೆ ಮಾಡಲು ಮತ್ತು ತರಬೇತಿ ಪಡೆದ ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಮಾತನಾಡಲು ನಾವು ಪ್ರೋತ್ಸಾಹಿಸುತ್ತೇವೆ ಮತ್ತು ಅವರು ಅಗತ್ಯವಿರುವ ಸಂಪನ್ಮೂಲಗಳೊಂದಿಗೆ ತೊಂದರೆಯಲ್ಲಿರುವವರನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ..

ಯಾವುದೇ ಗಲಾಟೆ, ಸಮಸ್ಯೆ ಇರಲಿಲ್ಲ..

ಯೋಗೇಶ್ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಇತ್ತೀಚೆಗಷ್ಟೆ ಕರೆ ಮಾಡಿ ಡಿಸೆಂಬರ್ ನಲ್ಲಿ ಬರುವುದಾಗಿ ಹೇಳಿಕೆ ನೀಡಿದ್ದರು, ಆದರೆ ಈ ಸಾವು ಸಂಶಯಾಸ್ಪದವಾಗಿದೆ, ಈ ಹಿನ್ನಲೆ ತನಿಖೆಗೆ ಒಳಪಡಿಸಬೇಕು ಎಂದು ಯೋಗೇಶ್ ಅವರ ತಾಯಿ ಶೋಭ ಆಗ್ರಹಿಸಿದ್ದಾರೆ. ಮೃತ ದೇಹ ತಾಯ್ನಾಡಿಗೆ ತರಿಸಿಕೊಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮೃತರ ಕುಟುಂಬಸ್ಥರು ಮನವಿ ಮಾಡಿದ್ದಾರೆ, ಇನ್ನೂ ಘಟನೆ ಹಿನ್ನಲೆ ದಾವಣಗೆರೆಯಲ್ಲಿರುವ ಯೋಗೇಶ್ ಅವರ ತಾಯಿ ಇದ್ದ ಮನೆಗೆ ಡಿಸಿ ಡಾ. ಎಂವಿ ವೆಂಕಟೇಶ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಬಳಿಕ ಮಾತನಾಡಿ, ಅಮೆರಿಕದ ಬಾಲ್ಟಿಮೋರ್ ನಲ್ಲಿ ಅಸ್ವಾಭಾವಿಕ ಸಾವು ಸಂಭವಿಸಿದೆ. ಕುಟುಂಬದ ಕೋರಿಕೆ ಮೇರೆಗೆ ಅಮೆರಿಕದಲ್ಲಿರುವ ಕನ್ಸಲ್ ಜನರಲ್ ಮಂಜುನಾಥ್, ಡೆಪ್ಯೂಟಿ ಜನರಲ್ ವರುಣ್ ಅವರನ್ನ ಸಂಪರ್ಕ ಮಾಡಿದ್ದೇವೆ. ಬಾಡಿಯನ್ನ ದಾವಣಗೆರೆಗೆ ತರಬೇಕಾ ಅಥವಾ ಅಲ್ಲಿಯೇ ಅಂತ್ಯಕ್ರಿಯೆ ಮಾಡಬೇಕಾ ಎಂಬುದರ ಕುರಿತು ಕುಟುಂಬಸ್ಥರ ನಿರ್ಧಾರಕ್ಕೆ ಬಿಡಲಾಗಿದೆ, ಸ್ಥಳಿಯ ಪೊಲೀಸರು ಅಸ್ವಾಭಾವಿಕ ಸಾವು ಎಂದು ಮಾಹಿತಿ ನೀಡಿದ್ದಾರೆ. ಪ್ರತಿ ಎರಡು ಗಂಟೆಗೊಮ್ಮೆ ಅಮೆರಿಕ ಕೌನ್ಸಿಲ್ ಸಂಪರ್ಕ ಮಾಡಲಾಗುತ್ತಿದ್ದು, ಜಿಲ್ಲಾಡಳಿತ ಸಂಪೂರ್ಣ ಸ್ಪಂದನೆ ಮಾಡುತ್ತಿದೆ ಎಂದಿದ್ದಾರೆ..

ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದೇನು..?

ಘಟನೆ ಕುರಿತಂತೆ ದಾವಣಗೆರೆಯಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆ ನೀಡಿದ್ದು, ಅಮೇರಿಕಾದ ದಲ್ಲಿ ದಾವಣಗೆರೆಯ ಮೂಲದ ದಂಪತಿಗಳು ಮಗು ಸಮೇತಾ ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರ ಮೃತದೇಹವನ್ನು ದಾವಣಗೆರೆಗೆ ತರಿಸಲು ಜಿಲ್ಲಾಧಿಕಾರಿ ಗಳು ಪ್ರಯತ್ನ ಮಾಡುತ್ತಿದ್ದಾರೆ. ಅವರ ಸಂಬಂಧಿಕರು ಅಲ್ಲೇ ಇದ್ದಾರೆ ಅವರು ನೋಡಿ ಹೇಳುತ್ತಾರಂತೆ, ಅದು ಆತ್ಮಹತ್ಯೆಯಾಗಿದೆಯೋ ಇಲ್ಲವೋ ಎನ್ನುವುದು ಅಲ್ಲಿನ ಪೊಲೀಸರು ತನಿಖೆ ಮಾಡುತ್ತಾರೆ, ಅಲ್ಲಿನ ಕಾನೂನು ಪ್ರಕ್ರಿಯೆ ನಂತರ ಮಾಹಿತಿ ನೀಡುತ್ತಾರೆ, ನಾವು ಕೂಡ ಅವರ ಕುಟುಂಬದ ಜೊತೆ ಇದ್ದೇವೆ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ..

ಒಟ್ಟಾರೆ ಸುಂದರ ಕುಟುಂಬದ ಸಾವು ನಿಜಕ್ಕೂ ಮರುಕ ಪಡುವಂತಿದೆ, ಕುಟುಂಬ ಕಲಹವೊ, ಕೊಲೆಯೋ, ಅವಘಡವೊ ಅನ್ನೋದ ಮಾತ್ರ ಯಕ್ಷ ಪ್ರಶ್ನೆಯಾಗಿ ಉಳಿದಿದ್ದು ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ..