POWER SAMACHARA | KANNADA NEWS | BREKING NEWS| 09-08-2023..

ದಾವಣಗೆರೆ: ಸದ್ಯ ಬೆಣ್ಣೆನಗರಿಯಲ್ಲಿ ಈಕೆಯದ್ದೆ ಸದ್ದು, ಈಕೆ ಕಾಲಿಟ್ಟರೆ ದುಷ್ಟರು ಥರ ಥರ ನಡುಗುತ್ತಾರೆ, ದುರ್ಗಿ ತರ ಅವತಾರ ಎತ್ತಿರೋ ಇವಳು ದುಷ್ಟರ ಪಾಲಿಗೆ ಸಿಂಹಸ್ವಪ್ನ, ಇವಳಿಗ್ಯಾಕೆ ಇಷ್ಟು ಬಿಲ್ಡಪ್ಪು, ಇವಳು ಮಾಡಿದ್ದಾದರೂ ಏನೂ, ಯಾರು ಈಕೆ, ಇವಳು ಹುಟ್ಟಿದ್ದಾದರು ಹೇಗೆ..? ಇವಳ ಕೆಲಸವೇನು ಅಂತೀರ.. ಈ ಇಂಟರೆಸ್ಟಿಂಗ್ ಸ್ಟೋರಿ ಓದಿ.. ನಿಮಗೆ ಗೊತ್ತಾಗುತ್ತೆ..

ಹೌದು.. ಬೆಣ್ಣೆನಗರಿ ದಾವಣಗೆರೆಯಲ್ಲಿ ಈಕೆ ಸಖತ್ ಮಿಂಚುತ್ತಿದ್ದಾಳೆ, ಇವಳನ್ನ ಕಂಡರೇ ದುಷ್ಟರು ನಡುಗುತ್ತಿದ್ದಾರೆ, ದುಷ್ಟ ಕೆಲಸ ಮಾಡಿದರೆ ಇವಳಿಂದ ಸಿಕ್ಕಿ ಹಾಕಿಕೊಳ್ಳೋದು ತಪ್ಪಿದ್ದಲ್ಲ ಎಂದು ಕ್ರಿಮಿನಲ್ ಗಳು ಸಹ ಭಯ ಬೀಳುತ್ತಿದ್ದಾರೆ.. ಇವಳು ಬೇರೆ ಯಾರು ಅಲ್ಲ ಇವಳೇ 'ತಾರಾ' ಅಯ್ಯೋ ಇವಳಿಗೆ ಇಷ್ಟು ಬಿಲ್ಡಪ್ಪಾ ಅಂತಾ ನೀವು ಒಮ್ಮೆ ಪ್ರಶ್ನೆ ಮಾಡಬಹುದು, ಇವಳಿಗೆ ಈ ಬಿಲ್ಡಪ್ಪ ಕಮ್ಮಿನೇ ಆಯ್ತು, ಯಾಕಂದ್ರೆ ಇವಳು ಮಾಡಿದ ಕೆಲಸಗಳು ಒಂದಲ್ಲ, ಎರಡಲ್ಲ, ಇನ್ನೂ ಇವಳಿಂದ ಆಗೋ ಕೆಲಸಗಳು ಸಹ ಬಹಳಷ್ಟಿವೆ, ಮೊದಲು ಇವಳು ಮಾಡಿದ ಕೆಲಸಗಳ ಬಗ್ಗೆ ನೋಡುತ್ತಾ ಹೋಗಿ, ಬಳಿಕ ಇವಳು ಹುಟ್ಟಿದ ರೋಚಕ ಕಥೆ ಬಗ್ಗೆ ನೋಡೋದು ಮಾತ್ರ ಮರೀಬೇಡಿ..

ಮಲ್ಲಶೆಟ್ಟಿ ಪ್ರಕರಣ ಭೇದಿಸಿದ ತಾರಾ..!

ದಾವಣಗೆರೆಯ ರಾಮನಗರ ನಿವಾಸಿ ನರಸಿಂಹ(26) ಇತ್ತೀಚೆಗಷ್ಟೆ ಕೊಲೆಗೀಡಾಗಿದ್ದ, ರಾಮನಗರದಲ್ಲಿ ತರಗಾರ ಗಾರೆ ಕೆಲಸ ಮಾಡುತ್ತಿದ್ದ, ಆದರೆ ಆಗಸ್ಟ್ 6ರಂದು ರಾತ್ರಿ ಮಲ್ಲಶೆಟ್ಟಿಹಳ್ಳಿ ಬಳಿ ಭೀಕರವಾಗಿ ಹತ್ಯೆಗೀಡಾಗಿದ್ದ, ಪ್ರಕರಣ ಮರುದಿನ ಬೆಳಕಿಗೆ ಬಂದಿತ್ತು, ಕೊಲೆ ಯಾಕಾಯ್ತು ಅಂತಾ ಯಾರಿಗೂ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಆದರೆ ಆಕೆಗೆ ಮಾತ್ರ ಆ ಸುಳಿವು ಸಿಕ್ಕಿತ್ತು..

ಆಕೆಯೇ 'ತಾರಾ'

ಹೌದು.. ಬರ್ಬರವಾಗಿ ಹತ್ಯೆಗೀಡಾಗಿದ್ದ ನರಸಿಂಹನ ಪ್ರಕರಣ ಭೇದಿಸಲು ಆಕೆ ಎಂಟ್ರಿಯಾಗಿದ್ದಳು, ಆಕೆ ಬೇರೆ ಯಾರು ಅಲ್ಲ 'ತಾರಾ', ತಾರಾ ಬೇರೆ ಯಾರು ಅಲ್ಲ ಪೊಲೀಸ್ ಡಾಗ್ ಸ್ಕ್ವಾಡ್, ಚಾಣಾಕ್ಷ ಡಾಗ್ ಅಂತಲೇ ಫೇಮಸ್ಸ್ ಸದ್ಯ ದಾವಣಗೆರೆಯಲ್ಲಿ ಕಳ್ಳರು ಕಾಕರು, ಕೊಲೆಗಡುಕರು ತಾರಾ ಎಂದರೆ ಪತರುಗುಟ್ಟುತ್ತಿದ್ದಾರೆ.. ಆರೋಪಿಗಳನ್ನ ಪತ್ತೆ ಹಚ್ಚಲು ತಾರಾ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದಾಳೆ, ಈ ಹಿಂದೆ ದಾವಣಗೆರೆಯಲ್ಲಿ ತುಂಗಾ ಡಾಗ್ ರಾಜ್ಯದಾದ್ಯಂತ ಹೆಸರು ಮಾಡಿತ್ತು, ಹೀಗ ಅದರ ಸ್ಥಾನವನ್ನು ತಾರಾ ತುಂಬುತ್ತಿದ್ದಾಳೆ, ಸದ್ಯ ದಾವಣಗೆರೆಯಲ್ಲಿ ನಡೆದ ನರಸಿಂಹನ ಕೊಲೆಯಲ್ಲಿ ತಾರಾ ಪ್ರಮುಖ ಪಾತ್ರ ವಹಿಸಿದ್ದಾಳೆ. ಎಂಟ್ರಿಯಾಗಿದ್ದು ಇತ್ತೀಚೆಗೆ ಆದರು 14 ಪ್ರಕರಣಗಳಿಗೆ ಸುಳಿವು ನೀಡಿ ಶೆಹಬ್ಬಾಶ್ ಗಿರಿ ಪಡೆದಿದೆ..

8ಕಿಲೋ ಕ್ರಮಿಸಿ ಆರೋಪಿ ಪತ್ತೆ ಹಚ್ಚಿದ ತಾರಾ..

ಆಗಸ್ಟ್ 7ರಂದು ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ ಆಗಮಿಸಿತ್ತು, ನರಸಿಂಹ ಕೊಲೆಯಾಗಿದ್ದ ಮಲ್ಲಶೆಟ್ಟಿಹಳ್ಳಿ ಗ್ರಾಮದಿಂದ ರಾಮನಗರ ತನಕ ಬರೋಬ್ಬರಿ 8 ಕಿಲೋ ಮೀಟರ್ ನಷ್ಟು ಡಾಗ್ ಓಡಿದೆ, ಡಾಗ್ ಓಡೋದು ನೋಡಿದ ಪೊಲೀಸರಿಗೂ ಶಾಕ್ ಕಾದಿತ್ತು, ಸೀದಾ ಮನೆಯೊಂದರ ಮುಂದೆ ತಾರಾ ನಿಂತಿದ್ದಳು, ಇಲ್ಲೇಕೆ ತಾರಾ ನಿಂತಿದ್ದಾಳೆ ಅಂತ ನೋಡಿದರೆ ಆ ಮನೆ ಶಿವಯೋಗಿಶ್ ಅಲಿಯಾಸ್ ಯೋಗಿ ಅವನದಾಗಿತ್ತು, ಇತ ನರಸಿಂಹನ ಸ್ನೇಹಿತನಾಗಿದ್ದವನು, ಅಂದು ಆ ಮನೆ ಬಾಗಿಲು ಹಾಕಿತ್ತು, ಬಳಿಕ ಆ ಮನೆ ಮಾಲೀಕ ಶಿವಯೋಗಿಶ್ ನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದು ಕೊನೆಯಲ್ಲಿ ಕೊಲೆ ಮಾಡಿರುವುದಾಗಿ ಗೊತ್ತಾಗಿದೆ..

ನರಿ ಅಲ್ಲ ಇದು ನಾಯಿನೇ...!

ತಾರಾ ಬೆಲ್ಜಿಯನ್ ಮಾಲಿನೊಯಿಸ್ ಎಂಬ ತಳಿಯ ನಾಯಿಯಾಗಿದೆ, ಈ ಬ್ರೀಡ್ ಹುಟ್ಟಿದ್ದು ಬೆಲ್ಜಿಯಂ ದೇಶದಲ್ಲಿ, ಬೆಲ್ಜಿಯನ್ ಮಾಲಿನೊಯಿಸ್ ತಳಿಯ ನಾಯಿ ವಿಭಿನ್ನವಾದ ಭೌತಿಕ ನೋಟ ಹೊಂದಿದೆ, ಚದರ ದೇಹದ ಬಾಹ್ಯ ರೇಖೆ ಮತ್ತು ಹಗರುವಾದ ರಚನೆ ಹೊಂದಿದೆ, ವ್ಯಕ್ತಿತ್ವ ಮತ್ತು ಡ್ರೈವ್ ನಲ್ಲಿ ಹೆಚ್ಚು ತೀವ್ರತೆ ಹೊಂದಿದೆ, ತುಂಬಾ ಚಾಣಾಕ್ಷನ ಹೊಂದಿರುವ ಡಾಗ್ ತಳಿಯನ್ನ ಬೆಲ್ಜಿಯಂ ದೇಶದಲ್ಲಿ ಕುರಿ ಕಾಯಲು ಅಭಿವೃದ್ದಿಪಡಿಸಲಾಗಿತ್ತು, ಬಳಿಕ ಇದರ ಚಾಕ್ಯತೆ ನೋಡಿ ಮಿಲಿಟರಿಯಲ್ಲಿ ಬಳಸಿಕೊಳ್ಳಲಾಗಿದೆ..

ತೋಳ-ನರಿಯ ಮಗಳು 'ತಾರಾ'..!?

ಅಯ್ಯೋ ಇದೇನಿದು ತೋಳ ಮತ್ತು ನರಿಯ ಮಗಳು ಎಂದು ಭಾವಿಸಬೇಡಿ, ಬೆಲ್ಜಿಯಂ ನ ಮಾಲೀಸ್ ನಲ್ಲಿ ಈ ಬ್ರೀಡ್ ತಯಾರಿಸಲಾಗಿದೆ, ತೋಳ ಮತ್ತು ನರಿಯ ಜೀನ್ಸ್ ಮೂಲಕ ಬೆಲ್ಜಿಯನ್ ಮಾಲಿನೊಯಿಸ್ ತಳಿ ಅಭಿವೃದ್ದಿಪಡಿಸಲಾಗಿದೆ, ತೋಳನಂತೆ ಶಕ್ತಿ, ವೇಗ, ಜಾಗೃತಿ ನರಿಯಂತಹ ಸೂಕ್ಷ್ಮ ಹಾಗೂ ಪ್ರಖರ ಬುದ್ದಿ, ಈ ಎರಡು ಪ್ರಾಣಿಗಳ ಸಮ್ಮಿಶ್ರಣವೇ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಗುಣಲಕ್ಷಣವಾಗಿದೆ..

ರಾಜ್ಯದಲ್ಲಿ ಇರೋದು ಮೂರೇ ಡಾಗ್..

ಇನ್ನೂ ಈ ತಳಿಯ ನಾಯಿಗಳು ಕರ್ನಾಟಕದಲ್ಲಿ ಮೂರೇ ಮೂರು ಇವೆ, ಬೆಂಗಳೂರಿನಲ್ಲಿ ಒಂದು, ಮೈಸೂರಿನಲ್ಲಿ ಒಂದು, ದಾವಣಗೆರೆಯಲ್ಲಿ ಒಂದು ನಾಯಿ ಇವೆ, ದಾವಣಗೆರೆಯಲ್ಲಿರೋದು ವಿನಾಯಕ ಮೋಟರ್ಸ್ ನ ಮಾಲೀಕ ಹರೀಶ್ ಅವರ ಬಳಿ ಇತ್ತು, ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ ಡಿಟೆಕ್ಟಿವ್ ತುಂಗಾ ಸಾವನ್ನಪ್ಪಿದ ಮೇಲೆ ದಾವಣಗೆರೆ ಡಾಗ್ ಸ್ಕ್ವಾಡ್ ಕೊಂಚ ಮಂಕಾಗಿತ್ತು, ಚಾಣಾಕ್ಷತನ ಹೊಂದಿರುವ ತಾರಾ, ಹರೀಶ್ ಅವರ ಬಳಿ ಇತ್ತು ಎಂದು ಗೊತ್ತಾದ ತಕ್ಷಣ ಇಲಾಖೆ ಸಂಪರ್ಕಿಸಿ ಅವರ ಒಪ್ಪಿಗೆ ಮೇರೆಗೆ ತಾರಾಳನ್ನ ಡಾಗ್ ಸ್ಕ್ವಾಡ್ ಗೆ ಸೇರ್ಪಡೆಗೊಳಿಸಿ, ಬಳಿಕ ಬೆಂಗಳೂರಿನಲ್ಲಿ ತರಬೇತಿಗೊಳಿಸಲಾಗಿದೆ, ಒಂಬತ್ತು ತಿಂಗಳ ಹಿಂದೆ ದಾವಣಗೆರೆ ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಲಾಗಿದ್ದು ಅತೀ ಕಡಿಮೆ ಅವಧಿಯಲ್ಲಿ 14ಪ್ರಕರಣ ಭೇದಿಸಿದ್ದು, ಮುಂದೆ ಹಲವು ಪ್ರಕರಣ ಭೇದಿಸುವ ಸವಾಲಿದೆ..