POWER SAMACHARA | KANNADA NEWS | BREKING NEWS| 12-08-2023..

ದಾವಣಗೆರೆ: ಕವಾಡಿಗರ ಹಟ್ಟಿ ಕಲುಷಿತ ನೀರು ಪ್ರಕರಣಕ್ಕೆ ಆರು ಬಲಿಯಾಗಿದ್ದು, 200ಜನ ಅಸ್ವಸ್ಥಗೊಂಡಿದ್ದಾರೆ, ಈ ಹಿನ್ನಲೆ ಜನರು ಟ್ಯಾಂಕ್, ಕೆರೆ ನೀರು ಕುಡಿಯಲು ಭಯ ಪಡುತ್ತಿದ್ದಾರೆ, ಇತ್ತ ಏಷ್ಯಾದ ಎರಡನೇ ಅತೀ ದೊಡ್ಡ ಕೆರೆ ಕಲುಷಿತ ಆಗಿದಿಯಾ ಅನ್ನೋ ಅನುಮಾನ ಕೂಡ ಮೂಡಿದ್ದು, ತಾತ್ಕಾಲಿಕವಾಗಿ ನೀರು ಪೂರೈಕೆ ಬಂದ್ ಮಾಡಲಾಗಿದೆ..

ಹೌದು.. ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿ ಕಲುಷಿತ ನೀರು ಪ್ರಕರಣ ಇಡೀ ರಾಜ್ಯವನ್ನೆ ಬೆಚ್ಚಿ ಬೀಳಿಸಿತ್ತು, ಟ್ಯಾಂಕ್ ಕಲುಷಿತ ನೀರು ಕುಡಿದು ಆರು ಜನ ಸಾವನ್ನಪ್ಪಿ ಇನ್ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು, ಕವಾಡಿಗರಹಟ್ಟಿ ಟ್ಯಾಂಕ್ ಗೆ ಸೂಳೆಕೆರೆ ನೀರು ಪೂರೈಕೆ ಆಗಿತ್ತು. ಇನ್ನೂ ಈ ಪ್ರಕರಣದಿಂದ ರಾಜ್ಯದ ಜನ ಟ್ಯಾಂಕ್, ಕೆರೆ ನೀರು ಕುಡಿಯಲು ಭಯ ಪಡುತ್ತಿದ್ದಾರೆ, ಎಚ್ಚೆತ್ತ ಆಡಳಿತ ವರ್ಗ ಹಲವೆಡೆ ಟ್ಯಾಂಕ್ ಗಳನ್ನು ಕ್ಲೀನ್ ಮಾಡಲಾಗುತ್ತಿದೆ, ಇನ್ನೂ ಇತ್ತ ಅತೀ ದೊಡ್ಡ ಕೆರೆ ಸೂಳೆಕೆರೆ ನೀರನ್ನು ಸಹ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ..

ಏನಾಗಿದೆ ಸೂಳೆಕೆರೆಗೆ..?

ಸೂಳೆ ಕೆರೆ ಏಷ್ಯಾದ ಎರಡನೇ ಹಾಗೂ ಭಾರತದ ಅತೀ ದೊಡ್ಡ ಕೆರೆ, ಕೆರೆ ನೋಡಿದರೆ ನದಿಯಂತೆ ಭಾಸವಾಗುತ್ತೆ, ದಾವಣಗೆರೆ ಚಿತ್ರದುರ್ಗ ಎರಡು ಜಿಲ್ಲೆಗಳಿಗೆ ಈ ಕೆರೆ ನೀರು ಪೂರೈಕೆ ಆಗುತ್ತೆ, ಆದರೆ ನೀರು ಕಲುಷಿತ ಆಗಿದೆಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ, ಕವಾಡಿಗರಹಟ್ಟಿ ಟ್ಯಾಂಕ್ ಗೂ ಸೂಳೆಕೆರೆ ನೀರೇ ಪೂರೈಕೆ ಆಗಿತ್ತು, ಚನ್ನಗಿರಿಯ ಬಿಲ್ಲಹಳ್ಳಿ ವಿವಿಧ ಗ್ರಾಮಗಳಿಗೆ ಬಣ್ಣದ ಕಲುಷಿತ ನೀರು ಪೂರೈಕೆ ಆಗಿತ್ತು, ಈ ಹಿನ್ನಲೆ ತಾಲ್ಲೂಕು ಆರೋಗ್ಯಧಿಕಾರಿ ಸೂಳೆಕೆರೆಯ ನೀರನ್ನು ಸಂಗ್ರಹಿಸಿ ಶಿವಮೊಗ್ಗ ಸರ್ವೇಕ್ಷಣಾ ಇಲಾಖೆ ಮೂಲಕ ಲ್ಯಾಬ್ ಟೆಸ್ಟ್ ಗೆ ಕಳುಹಿಸಲಾಗಿತ್ತು, ಕುಡಿಯಲು ಸೂಳೆಕೆರೆ ನೀರು ಯೋಗ್ಯವಲ್ಲ ಎಂದು ವರದಿ ಬಂದಿದೆ, ಕಲುಷಿತ ಬಣ್ಣದಿಂದ ಕೂಡಿರುವ ನೀರು, ಸರಿಯಾಗಿ ಶುದ್ದಿಕರಣ ಆಗಿಲ್ಲ, ಬ್ಯಾಕ್ಟಿರಿಯಾ ಅಂಶಗಳು ಇವೆ ಎನ್ನಲಾಗಿದೆ, ಇದು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದ ಹಿನ್ನಲೆ ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ ನೇತೃತ್ವದಲ್ಲಿ ತುರ್ತು ಸಭೆ ಕರೆದು ಮುಂಜಾಗ್ರತ ಕ್ರಮವಾಗಿ 14 ಗ್ರಾಮ ಪಂಚಾಯಿತಿ, ಚನ್ನಗಿರಿ ಪಟ್ಟಣ ಸೇರಿದಂತೆ ವಿವಿಧೆಡೆ ಪೂರೈಕೆ ಆಗುತ್ತಿದ್ದ ನೀರನ್ನು ಬಂದ್ ಮಾಡಲು ನಿರ್ಣಯಿಸಲಾಗಿದೆ, ಜೊತೆಗೆ ನೀರು ಶುದ್ದೀಕರಣ ಘಟಕಕ್ಕೆ ಒಂದು ಕೋಟಿ ರೂಪಾಯಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ.

ಸೂಳೆಕೆರೆಗೆ ಡಿಎಚ್ ಓ ಭೇಟಿ ಪರಿಶೀಲನೆ..

ಏಷ್ಯಾದ ಎರಡನೇ ಅತೀ ದೊಡ್ಡ ಕೆರೆ ಸೂಳೆಕೆರೆ ಕಲುಷಿತ ನೀರು ಪೂರೈಕೆ ತಾತ್ಕಾಲಿಕ ಬಂದ್ ಹಿನ್ನಲೆ ಸೂಳೆಕೆರೆಗೆ ಡಿಎಚ್ ಓ ಡಾ. ನಾಗರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು, ಐದು ಜ್ಯಾಕವೆಲ್ ನಲ್ಲಿ ನೀರು ಪೂರೈಕೆ ಆಗುತ್ತದೆ, ನೀರು ಸ್ಯಾಂಪಲ್ ಕಳುಹಿಸಲಾಗಿತ್ತು, ನೀರಿನಲ್ಲಿ ಬ್ಯಾಕ್ಟಿರಿಯಾ ಹೆಚ್ಚಾಗಿ ಕಾಣಿಸಿಕೊಂಡಿದೆ, ಹೆಚ್ಚಿನ ಪರೀಕ್ಷೆಗೆ ಶಿವಮೊಗ್ಗದ ಮೈಕ್ರೋ ಬಯಾಲಜಿ ಗೆ ಕಳುಹಿಸಲಾಗಿದೆ, ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತೆ ವಹಿಸಲಾಗಿದೆ, ನೀರು ಪೂರೈಕೆ ತಾತ್ಕಾಲಿಕ ಬಂದ್ ಮಾಡಲಾಗಿದ್ದು, ಟ್ಯಾಂಕರ್ ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಗ್ರಾಮೀಣದಲ್ಲಿ ಎಲ್ಲಾ ಟ್ಯಾಂಕರ್ ಸ್ವಚ್ಚತೆ ಮಾಡಿ ಕ್ಲೋರಿನೇಷನ್ ಮಾಡಲಾಗುತ್ತಿದೆ, ಆಶಾ ಕಾರ್ಯಕರ್ತೆಯರಿಗೆ ಮನೆ ಮನೆ ಭೇಟಿ ಮಾಡುತ್ತಿದ್ದಾರೆ, ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಲಾಗಿದೆ, ಇಲ್ಲಿಯವರೆಗೆ ಯಾವುದೇ ತೊಂದರೆ ಆಗಿಲ್ಲ, ಶುದ್ದೀಕರಣ ಘಟಕಗಳಿಂದ ನೀರು ಕುಡಿಯಿರಿ ಎಂದು ಜಾಗೃತಿ ವಹಿಸಲಾಗಿದ್ದು, ಕುಡಿಯಲು ಯೋಗ್ಯವಾದ ಬಳಿಕ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದರು..

ಒಟ್ಟಾರೆ ಕವಾಡಿಗಹಟ್ಟಿ ಪ್ರಕರಣದಿಂದ ನೀರು ಕುಡಿಯಲು ಜನ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದ್ದು, ಏಷ್ಯಾದ ಎರಡನೇ ಕೆರೆಯೂ ಕಲುಷಿತವಾಗಿದೆ, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಶುದ್ದಿಕರಣ ಘಟಕ ನಿರ್ಮಿಸಿ ಶುದ್ದಿಕರಿಸಿ ನೀರು ಪೂರೈಕೆ ಮಾಡಬೇಕಿದೆ..