POWER SAMACHARA | KANNADA NEWS | BREKING NEWS| 20-07-2023..

ದಾವಣಗೆರೆ: ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಇತ್ತ ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನವಾಗಿದೆ ಎನ್ನಲಾಗಿದೆ.

ದಾವಣಗೆರೆಯ ಆಜಾದ್ ನಗರದಲ್ಲಿ ಆಜಾದ್ ನಗರ ಪೊಲೀಸರ ಸಹಾಯದೊಂದಿದೆ ಫಯಾಜ್ ವುಲ್ಲಾ(30) ಎಂಬ ವ್ಯಕ್ತಿಯನ್ನ ಗುರುವಾರ ಬೆಳಿಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ..

ದಾವಣಗೆರೆ ಅಜಾದ್ ನಗರದ ನಿವಾಸಿ ಫಯಾಜ್ ವುಲ್ಲಾನನ್ನ ವಶಕ್ಕೆ ಪಡೆದಿದ್ದು, ಇವನು ಮೂಲತಃ ಬೆಂಗಳೂರಿನವನಾಗಿದ್ದಾನೆ ಎಂದು ತಿಳಿದು ಬಂದಿದೆ, ಈ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್, ಆಯುಧ ಮಾರಾಟ ವಿಚಾರವಾಗಿ ಇತನ ಮೇಲೆ ಐದು ಪ್ರಕರಣ ದಾಖಲಾಗಿದ್ದವು, ಈಗ ಶಂಕಿತ ಉಗ್ರರ ಬಂಧನವಾದ ಹಿನ್ನಲೆ ಫಯಾಜ್ ವುಲ್ಲಾ ನನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ..

ಫಯಾಜ್ ವುಲ್ಲಾ ವಿರುದ್ಧ ಅಕ್ರಮ ಆಯುಧ ಮಾರಾಟ ಮಾಡಿದ ಪ್ರಕರಣ ದಾಖಲಾಗಿತ್ತು, ಜಾಮೀನು ಮೇಲೆ ಹೊರಗಿದ್ದ ಎನ್ನಲಾಗಿದೆ, ಇನ್ನೂ ಈ ಬಗ್ಗೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ, ದಾವಣಗೆರೆಯಲ್ಲಿ ಮತ್ತೋರ್ವ ಶಂಕಿತ ಉಗ್ರನನ್ನ ಬಂಧಿಸಲಾಗಿದ್ದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ..