<strong>ದಾವಣಗೆರೆ:</strong> ಎಸ್.ಎಸ್.ಎಲ್.ಸಿ. ಮೌಲ್ಯಮಾಪನವು ಏಪ್ರಿಲ್ 17 ರಿಂದ ದಾವಣಗೆರೆ ನಗರದ 7 ಕಡೆ ಮೌಲ್ಯಮಾಪನ ನಡೆಯುತ್ತಿರುವುದರಿಂದ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಅನ್ವಯ 200 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಶಿವಾನಂದ ಕಾಪಶಿ ಆದೇಶಿಸಿದ್ದಾರೆ. <img class="alignnone size-medium wp-image-1018" src="https://powersamachara.com/wp-content/uploads/2023/04/davanagere-file1-1-300x163.jpg" alt="" width="300" height="163" /> ಈ ಆದೇಶವು ಮೌಲ್ಯಮಾಪನ ಮುಕ್ತಾಯವಾಗುವರೆಗೆ ಜಾರಿಯಲ್ಲಿರುತ್ತದೆ. ದಾವಣಗೆರೆ ನಗರದಲ್ಲಿ ರಾಜನಹಳ್ಳಿ ಸೀತಮ್ಮ ಬಾಲಕೀಯರ ಪ.ಪೂ.ಕಾಜೇಜು, ಪಿ.ಜೆ.ಬಡಾವಣೆ. ಅಥಣಿ ಪ್ರೌಢಶಾಲೆ, ಬಾಲಕರ ಸರ್ಕಾರಿ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ, ಪಿ.ಜೆ.ಬಡಾವಣೆ, ಎಂ.ಸಿ.ಸಿ. ಬಿ.ಬ್ಲಾಕ್, ಡಿ.ಆರ್.ಆರ್.ಪ್ರೌಢಶಾಲೆ ಪಿ.ಜೆ.ಬಡಾವಣೆ, ಶ್ರೀ ಸೋಮೇಶ್ವರ ವಿದ್ಯಾಲಯ, ಶ್ರೀ ಮಾಗನೂರು ಬಸಪ್ಪ ಪ್ರೌಢಶಾಲೆ, ವಿದ್ಯಾನಗರ, ಬಾಪೂಜಿ ಪ್ರೌಢಶಾಲೆ, ಪಿ.ಜೆ.ಬಡಾವಣೆ, ದಾವಣಗೆರೆ ಇಲ್ಲಿ ಪರೀಕ್ಷಾ ಮೌಲ್ಯಮಾಪನ ನಡೆಯಲಿದೆ....