POWER SAMACHARA | KANNADA NEWS | BREKING NEWS| 20-06-2023..

ದಾವಣಗೆರೆ: ಮುಂಗಾರು ಕೈ ಕೊಟ್ಟ ಹಿನ್ನಲೆ ರೈತನ ಬದುಕು ಮುರಾಬಟ್ಟೆ ಆಗಿ ಹೋಗಿದೆ, ಕುಡಿಯುವ ನೀರಿಗೂ ಸಹ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ, ಈಗಾಗಲೇ ಗೊಬ್ಬರ, ಬಿತ್ತನೆ ಬೀಜ ಖರೀದಿ ಮಾಡಿರುವ ಅನ್ನದಾತ ಭೂಮಿ ಹದ ಮಾಡುವ ಮುಖೇನಾ ಮಳೆರಾಯನಿಗಾಗಿ ಕಾದು ಕೂತಿದ್ದಾನೆ. ಬೆಣ್ಣೆನಗರಿ ದಾವಣಗೆರೆಯಲ್ಲಿ ಮಳೆಗಾಗಿ ನಗರ ದೇವತೆಗೆ ಎಡೆ ಹಾಕಿ ಪೂಜೆ ನಡೆಸಿ, ದೇವರ ಮೊರೆ ಹೋಗಿದ್ದಾರೆ.. ನಂಬಿಕೆಯಂತೆ ಮಳೆ ಬಂತಾ, ಇಲ್ವಾ ಅನ್ನೋದು ಮಾತ್ರ ಇಂಟರೆಸ್ಟಿಂಗ್..

ಹೌದು.. ಮಳೆಗಾಗಿ ಎಲ್ಲಾ ಪ್ರಾರ್ಥನೆ, ಬೇಡಿಕೆ, ಹರಕೆ ನಡೆದಿದ್ದು ದಾವಣಗೆರೆಯ ನಗರ ದೇವತೆ ದುಗ್ಗಮ್ಮ ದೇವಿಯ ಸನ್ನಿದಾನದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ ರೈತರು ಬೆಳೆ ಬೆಳೆಯದೇ ಮಳೆಗಾಗಿ ಆಕಾಶ ನೋಡುವ ಸ್ಥಿತಿಗೆ ತಲುಪಿದ್ದಾರೆ. ಮೋಡ ಕಟ್ಟದೇ, ಮಳೆ ಸುರಿಯದೇ ರೈತ ಕಂಗಾಲಾಗಿ ಹೋಗಿದ್ದಾನೆ, ಇದರಿಂದ ದಶಕಗಳ ಕಾಲದಿಂದ ನಡೆದುಕೊಂಡ ಸಂಪ್ರದಾಯದಂತೆ ದುಗ್ಗಮ್ಮ ದೇವಿಗೆ ಎಡೆ ಜಾತ್ರೆ ಮಾಡಿದ್ದು, ಇದರಿಂದ ಬೆಳಿಗ್ಗೆಯಿಂದ ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ ತಾಯಿಗೆ ಎಡೆ ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ.

ದುಗ್ಗಮ್ಮ ದೇವಿಗೆ ಹೋಳಿಗೆ, ಮೊಸರನ್ನ, ಕಡಬು ಹೀಗೆ ಸಾಕಷ್ಟು ಖಾದ್ಯಗಳನ್ನು ಸಿದ್ದಪಡಿಸಿ ಎಡೆ ಇಟ್ಟು ಎಡೆ ಜಾತ್ರೆ ಆಚರಿಸಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಭಕ್ತ ಗಣ ದೇವಿಗೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಇನ್ನು ಎಡೆ ತಂದು ಪೂಜೆ ಸಲ್ಲಿಸಿದ ಭಕ್ತರು ಮಳೆ ಬರಿಸುವಂತೆ, ಸುರಿಸುವಂತೆ ಕೈ ಮುಗಿದು ಬೇಡಿಕೊಂಡಿದ್ದಾರೆ, ಇದೊಂದು ವಿಶಿಷ್ಠವಾದ ಆಚರಣೆಯಾಗಿದೆ. ದಾವಣಗೆರೆ ಜಿಲ್ಲೆ ಅಲ್ಲದೆ ರಾಜ್ಯದಲ್ಲಿ ಮಳೆಯಾಗಲಿ ಕೆರೆ, ಕಟ್ಟೆಗಳು ತುಂಬಲಿ ಎಂದು ಈ ಆಚರಣೆಯನ್ನು ಮಾಡಲಾಗುತ್ತದೆ.

ಮಳೆ ಬರದೇ ಇದ್ದರೆ ಎಡೆ ಜಾತ್ರೆ..

ವಿಶೇಷವಾಗಿ ಮಳೆಗಾಲದಲ್ಲಿ ಮಳೆ ಇಲ್ಲದೆ ಬರ ಆವರಿಸಿದಾಗ ಈ ವಿಶಿಷ್ಠವಾದ ಪದ್ದತಿಯನ್ನು ದೇವಾಲಯದ ಕಮಿಟಿಯವರು, ಜಾತ್ರೆ ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಎಡೆ ಜಾತ್ರೆ ಮಾಡಿದ ಎರಡು ಮೂರು ದಿನಗಳಲ್ಲಿ ಮಳೆ ಆಗುತ್ತದೆ ಎನ್ನುವ ನಿದರ್ಶನಗಳು ಕೂಡ ಇವೆ ಎಂದು ದೇವಸ್ಥಾನ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ಅಭಿಪ್ರಾಯಿಸಿದ್ದಾರೆ...

ಬೇಡಿಕೊಂಡರೇ ಇಷ್ಟಾರ್ಥ ಸಿದ್ದಿ..!

ಇನ್ನು ರಾಜ್ಯದ ವಿವಿಧ ಕಡೆಗಳಿಂದ ದೇವಿಯ ದರ್ಶನಕ್ಕೆ ಭಕ್ತರು ಬರುತ್ತಿದ್ದು, ಹರಕೆ ಮಾಡಿಕೊಂಡರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ, ಯಾವ ವರ್ಷ ಮಳೆಬಾರದೆ ಬರ ಕಾಣಿಸುತ್ತದೆಯೋ ಆಗ ದುಗ್ಗಮ್ಮ ದೇವಿಗೆ ಮೊದಲು ಅಭಿಷೇಕ ಮಾಡುತ್ತಾರೆ.. ನಂತರ ಎಡೆ ಜಾತ್ರೆ ಮೂಲಕ ಸಾವಿರಾರು ಮಹಿಳೆಯರು ದೇವಿಗೆ ಎಡೆ ಇಟ್ಟು ಪ್ರಾರ್ಥನೆ ಮಾಡುತ್ತಾರೆ. ಅದಾಗ್ಯೂ ಮಳೆ ಬಾರದಿದ್ದರೆ ಐದು ದಿನಗಳ ಕಾಲ ದೇವಸ್ಥಾನದ ಆವರಣದಲ್ಲಿ ಸಂತೆ ಮಾಡುತ್ತಾರೆ, ಆಗ ಮಳೆ ಬಂದೇ ಬರುತ್ತದೆ ಎನ್ನುವ ನಂಬಿಕೆ ಇದೆ ಭಕ್ತರಲ್ಲಿದೆ..

ಏನೇ ಆಗಲಿ ಪ್ರಪಂಚ ಎಷ್ಟೇ ಮುಂದುವರೆದರೂ, ಕಂಪ್ಯೂಟರ್ ಯುಗವಾದರೂ ಕೂಡ ಕೆಲವೊಂದು ನಂಬಿಕೆಗಳು ಮಾತ್ರ ನಿಬ್ಬೆರಗಾಗುವಂತೆ ಮಾಡುತ್ತವೆ.. ನಂಬಿಕೆಯೋ, ಕಾಕತಾಳಿಯವೋ ಕೈ ಕೊಟ್ಟಿದ್ದ ಮಳೆರಾಯ ಎಡೆ ಜಾತ್ರೆ ಮಾಡಿ ಮೂರ್ನಾಲ್ಕು ಗಂಟೆ ಕಳೆಯುತ್ತಿದ್ದಂತೆ ಸಂಜೆ ವೇಳೆ ಧರೆಗೆ ಇಳಿದು ಅಚ್ಚರಿಕೆ ಕಾರಣವಾಗಿದೆ, ದಾವಣಗೆರೆಯಲ್ಲಿ ಬೆಳಿಗ್ಗೆ ದೇವಿ ಎಡೆ ಜಾತ್ರೆ ನಡೆದು ಸಂಜೆ ವೇಳೆಗೆ ವರುಣದೇವ ಆಗಮಿಸಿ ಅಚ್ಚರಿ ಮೂಡಿಸಿದ್ದಾನೆ..

ಎಡೆ ಜಾತ್ರೆ ಬಳಿಕ ಎಡ ಬಿಡದೇ ಸುರಿದ ಮಳೆ..!

ಎಡೆ ಜಾತ್ರೆ ನಂಬಿಕೆ ಮತ್ತೆ ಸಾಬೀತಾಗಿದೆ, ಮಳೆಗಾಗಿ ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿತ್ತು, ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಎಡೆ ಹಾಕಿ ಭಕ್ತರು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದರು, ಹೋಳಿಗೆ, ಮೊಸರು ಅನ್ನ, ತಂದು ದುರ್ಗಾದೇವಿಗೆ ಪೂಜೆ ಮಾಡಿ ಮಳೆ ಬರಿಸವ್ವ ತಾಯೇ ಎಂದು ಭಕ್ತರು ಬೇಡಿಕೊಂಡಿದ್ದರು, ಮಳೆ ಇಲ್ಲದೆ ದಾವಣಗೆರೆ ಜಿಲ್ಲೆಯಲ್ಲಿ ಬಿತ್ತನೆಗೆ ಕುಂಠಿತವಾಗಿತ್ತು, ಆದರೆ ಸಂಜೆ ಮಳೆ ಬಂದ ಹಿನ್ನಲೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ, ಸತತ ಒಂದು ಗಂಟೆಯಿಂದ ಮಳೆ ಸುರಿದಿದೆ, ರಾತ್ರಿ ಕೂಡ ಮಳೆ ಮುಂದುವರೆದಿದೆ..

ಚನ್ನಗಿರಿಯಲ್ಲಿ ರೌದ್ರನರ್ತನ: ಬೈಕ್ ಗಳ ಮುಳುಗಡೆ..!

ದಾವಣಗೆರೆಯ ಚನ್ನಗಿರಿಯಲ್ಲಿ ಸಂಜೆ ಭಾರೀ ಮಳೆಯಾಗಿದ್ದು ಭಾರೀ ಮಳೆಗೆ ಬೈಕ್ ಗಳು ಮುಳುಗಡೆಯಾಗಿವೆ.

ಚನ್ನಗಿರಿ ಪಟ್ಟಣದ ಕೃಷಿ ಕಚೇರಿ ಮುಂಭಾಗ ಬೈಕ್ ಗಳು ಮುಳುಗಡೆಯಾಗಿದ್ದು, ವರುಣನ ರೌದ್ರನರ್ತನಕ್ಕೆ ಚನ್ನಗಿರಿಯಲ್ಲಿ ಅವಾಂತರಗಳು ಸೃಷ್ಟಿಯಾಗಿದೆ, ಮಳೆ ಆಗದ ಹಿನ್ನಲೆ ಕಂಗಾಲಾಗಿದ್ದ ರೈತರ ಮುಖದಲ್ಲಿ ಮಳೆ ಬಂದ ಮಂದಹಾಸ ಮೂಡಿದೆ, ಆದರೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಬೈಕ್ ಗಳು ಮುಳುಗಡೆಗೊಂಡಿವೆ..