<strong>POWER SAMACHARA | KANNADA NEWS | BREKING NEWS| 06-10-2023..</strong> <strong>ದಾವಣಗೆರೆ :</strong> ಲಿಂಗಾಯಿತ ಅಧಿಕಾರಿಗಳು ಮೂಲೆ ಗುಂಪು ವಿಚಾರ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ, ಸರ್ಕಾರದ ವಿರುದ್ದ ನಾನೇನು ಬಾಂಬ್ ಹಾಕಿಲ್ಲ, ಇರುವ ಸತ್ಯ ಸಂಗತಿಯನ್ನೆ ಹೇಳಿದ್ದೇನೆ, ನಾನು ಹೇಳಿರುವುದೆಲ್ಲವು ಸತ್ಯ ಎಂದು ಹೇಳಿಕೆ ನೀಡಿದ್ದಾರೆ.. <img class="aligncenter wp-image-2586 size-full" src="https://powersamachara.com/wp-content/uploads/2023/10/shamanuru-shivashankarappa-talk.jpg" alt="" width="870" height="570" /> ಸಿಎಂ ಜೊತೆ ಚರ್ಚಿಸುವ ವಿಚಾರ ಸಿಎಂ ಅನ್ನೇ ಕೇಳಿ, ಕೆಲವೊಂದು ಸಿಕ್ರೇಟ್ ವಿಚಾರ ಹೇಳೋಕೆ ಬರೋದಿಲ್ಲ, ಹೈಕಮಾಂಡ್ ಗೆ ದೂರು ವಿಚಾರ ನನಗೆ ಗೊತ್ತಿಲ್ಲ, ಯಾವ ಹೈಕಮಾಂಡ್ ಇಲ್ಲ, ಏನೂ ಇಲ್ಲ ಎಂದಿದ್ದು, ಪುತ್ರ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಏನೂ ಹೇಳಿದ್ದಾರೋ ಅವರನ್ನೆ ಕೇಳಿ ನನಗೆ ಗೊತ್ತಿಲ್ಲ ಎಂದಿದ್ದಾರೆ, ಲಿಂಗಾಯಿತ ಅಧಿಕಾರಿಗಳ ಬಗ್ಗೆ ಪಟ್ಟಿ ಬಿಡುಗಡೆ ವಿಚಾರ ಮಾತನಾಡಿರುವ ಶಾಮನೂರು, ಏನೇನು ಪಟ್ಟಿ ಹೇಳಬೇಡಿ, ಹುಚ್ಚುಚ್ಚಾಗಿ ಪ್ರಶ್ನೆ ಕೇಳಬೇಡ ಎಂದು ಶಾಮನೂರು ಗರಂ ಆಗಿದ್ದಾರೆ.. <strong>ಶಕ್ತಿ ಪ್ರದರ್ಶನವಲ್ಲ..!</strong> ಲಿಂಗಾಯತ ಮಹಾ ಅಧಿವೇಶನ ಲಿಂಗಾಯತರ ಶಕ್ತಿ ಪ್ರದರ್ಶನವಲ್ಲ, 10 ರಿಂದ 20ಲಕ್ಷಕ್ಕೂ ಹೆಚ್ಚು ಜನ ಸೇರಿದರೆ ಅದು ಶಕ್ತಿ ಪ್ರದರ್ಶನ, ಇದು ಶಕ್ತಿ ಪ್ರದರ್ಶನ ಅಲ್ಲ, ಜಾಗೃತಿ ಸಮಾವೇಶ, ಬರುವ ಡಿಸೆಂಬರ್ 23-24 ರಂದು ದಾವಣಗೆರೆಯಲ್ಲಿ ಮಹಾ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು..