POWER SAMACHARA | KANNADA NEWS | BREKING NEWS| 14-06-2023..

ದಾವಣಗೆರೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಬಿಜೆಪಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ರಹಸ್ಯ ಭೇಟಿ ಹಿನ್ನಲೆ ದಾವಣಗೆರೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಶಾಸಕ ಶಾಮನೂರು ಸ್ಪಷ್ಟನೆ ನೀಡಿದ್ದಾರೆ..

ನಾವು ಮತ್ತು ಬೊಮ್ಮಾಯಿಯವರು ಬೀಗರು, ಚುನಾವಣೆ ಆದಾಗಿನಿಂದ ನಾವು ಭೇಟಿಯಾಗಿರಲಿಲ್ಲ, ನಾನು ಗೆದ್ದಿದಿನಿ ಅವರು ಗೆದ್ದಿದ್ದಾರೆ, ಅದಕ್ಕೆ ಭೇಟಿಯಾದವು, ನನಗೆ ಅವರು ಹಾರ ಹಾಕಿದ್ರು, ನಾನು ಅವರಿಗೆ ಶಾಲು ಹೊದಿಸಿದೆ, ನಮ್ಮ ಸಂಬಂಧ ಹೀಗೆ ಮುಂದುವರಿಯಲಿ ಎಂದು ಹಾರೈಸಿದೆವು, ನಾವು ಚರ್ಚಿಸಿದ ಕೆಲವೊಂದು ವಿಚಾರಗಳನ್ನು ಹೇಳುವುದಕ್ಕೆ ಆಗುವುದಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ..

ಅವರು ಬಿಜೆಪಿಯವರು ನಾವು ಕಾಂಗ್ರೆಸ್ ನವರು, ಏನ್ ರಾಜಕೀಯ ಮಾತುಕತೆ ಇರುತ್ತೆ ಹೇಳಿ, ನಾವು ಹೊಂದಾಣಿಕೆ ರಾಜಕಾರಣ ಮಾಡೋದಕ್ಕೆ ಚುನಾವಣೆ ಪೂರ್ವವಾಗಿ ಭೇಟಿಯಾಗಿಲ್ಲ, ಚುನಾವಣೆ ನಂತರ ಭೇಟಿಯಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ, ಹೊಂದಾಣಿಕೆ ಬಗ್ಗೆ ಪ್ರತಾಪ ಸಿಂಹ ಬಾಯಿಗೆ ಬಂದಂಗೆ ಮಾತಾಡುತ್ತಾನೆ ಎಂದು ಕಿಡಿಕಾರಿದ್ದಾರೆ..

ಜಾತಿ ಗಣತಿ ಬಗ್ಗೆ ಚರ್ಚಿಸುತ್ತೇವೆ..

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಗ್ಗೆ ಶಾಮನೂರು ಪ್ರತಿಕ್ರಿಯೆ ನೀಡಿದ್ದು, ಅಖಿಲಭಾರತ ವೀರಶೈವ ಮಹಾಸಭೆಯ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ, ಸಾಮಾಜಿಕ ಸಮೀಕ್ಷೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಿದೆ, ಜಾಮದಾರ್ ಒಬ್ಬ ಮಾತ್ರ ಇದ್ದಾನೆ, ಅವನನ್ನ ಹುಚ್ಚಾಸ್ಪತ್ರೆಗೆ ಕಳಿಸಬೇಕು, ಇಲ್ಲಾ ಅಂದರೆ ನಾವೇ ಕಳಿಸುತ್ತೇವೆ, ಪ್ರತ್ಯೇಕ ಧರ್ಮದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು..

ಕಂಡಿಷನ್ ವಿರುದ್ದ ಮತ್ತೆ ಕಿಡಿಕಾರಿದ ಶಾಮನೂರು..!

ಕಾಂಗ್ರೆಸ್ ಗ್ಯಾರಂಟಿ ಯೋಜನೆ ಕಂಡಿಷನ್ ಬಗ್ಗೆ ಶಾಮನೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಸರ್ಕಾರ ಕಿತ್ತುಕೊಳ್ಳಬಾರದು, ಮಾತು ಕೊಟ್ಟಂತೆ ಸರ್ಕಾರ ನಡೆದುಕೊಳ್ಳಬೇಕು, ವಿದ್ಯುತ್ ದರ ಏರಿಕೆಯಿಂದ ಇಂಡಸ್ಟ್ರೀಸ್ ಗೆ ಹೊಡೆತ ಬಿದ್ದಿದೆ, ಇಂಡಸ್ಟ್ರಿಗಳು ಉಳಿಯುವುದು ಕಷ್ಟ ಆಗಿದೆ ಮಾತು ಕೊಟ್ಟಂತೆ ನಡೆದುಕೊಂಡು ವಿದ್ಯುತ್ ದರ ಏರಿಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ ಎಂದರು.

ವಿದ್ಯುತ್ ದರ ಏರಿಕೆ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾವು ಮಾಡಿಲ್ಲ ಎನ್ನುತ್ತಿದ್ದಾರೆ, ಕೆಆರ್ ಇ ಸಿ ದರ ಏರಿಕೆ ಬಗ್ಗೆ ಬಿಜೆಪಿ ಕಾಲದಲ್ಲೇ ಆಗಿತ್ತು, ಆದರೆ ಅವರು ಸಹಿ ಹಾಕಿಲ್ಲ, ಕಾಂಗ್ರೆಸ್ ನವರು ಸಹಿ ಮಾಡಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ, ಅದನ್ನು ಕಾಂಗ್ರೆಸ್ ನವರು ಒಪ್ಪಬಾರದು, ಹಿಂದೆ ದರ ಹೇಗಿತ್ತೋ ಅದೇ ರೀತಿ ಮುಂದುವರಿಸಬೇಕು, ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಗಳಿಗೆ ನಷ್ಟ ಆದರೆ ನಾವೇನು ಮಾಡೋಕೆ ಆಗುತ್ತೇ, ರೈಲು ಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಸಹ ಕಡಿಮೆ ಆಗಿದೆ ಎಂದರು.

ಬೀಗರಾಗ್ತಾರ ಆನಂದ ಸಿಂಗ್- ಶಾಮನೂರು..!

ಆನಂದ ಸಿಂಗ್ - ಶಾಮನೂರು ಕುಟುಂಬದ ನಡುವೆ ಸಂಬಂಧ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ, ಆನಂದ ಸಿಂಗ್ ಸಂಬಂಧಿಯ ಪುತ್ರಿ, ಶಾಮನೂರು ಬಕ್ಕೇಶ್ ಅವರ ಮಗನಿಗೂ ಮದುವೆ ಮಾತುಕತೆ ನಡೆಯುತ್ತಿದೆ, ಆನಂದ್ ಸಿಂಗ್ ನಮ್ಮ ಬೀಗರು ಇವತ್ತು ಅದೇ ಕಾರ್ಯಕ್ರಮ ಇದೆ ಎಂದು ಶಾಸಕ ಶಾಮನೂರು ಹೇಳಿಕೆ ನೀಡಿದ್ದಾರೆ..