POWER SAMACHARA | KANNADA NEWS | BREKING NEWS| 29-04-2024
ದಾವಣಗೆರೆ : “ಮಹಿಳೆಯರು ಅಡುಗೆ ಮಾಡೋಕೆ ಮಾತ್ರ ಲಾಯಕ್ಕು” ಎಂದು ಹೇಳುವ ಮೂಲಕ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತೆ ವಿವಾದಕ್ಕೀಡಾಗಿದ್ದಾರೆ..
ದಾವಣಗೆರೆ ನಗರದ ಬಂಟರ ಭವನದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ವಿಡಿಯೋ ವೈರಲ್ ಆಗಿದೆ, ಎದುರಾಳಿ ಅಭ್ಯರ್ಥಿಗೆ ಜನರ ಮಧ್ಯೆ ಮಾತನಾಡೋಕೆ ಬರಲ್ಲ, ಅವರು ಮನೆಯಲ್ಲಿ ಅಡುಗೆ ಮಾಡೋಕೆ ಮಾತ್ರ ಲಾಯಕ್ಕಿದ್ದಾರೆ, ಕಮಲ ಗೆಲ್ಲಿಸಿ ಮೋದಿಯವರಿಗೆ ಕೊಡೋಣ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಹೇಳುತ್ತಾರೆ, ಮತ್ತೆ ಈ ಹಿಂದೇ ಗೆದ್ದಿದ್ದು ನೀವೆ ಅಲ್ಲವೇ, ಆಗ ಕಮಲ ಹೂವನ್ನ ಕಳುಹಿಸಿದ್ರಾ, ಕಮಲ ಹೂವನ್ನ ಕಳುಹಿಸಿದರೆ ಅಭಿವೃದ್ದಿ ಆಗಲ್ಲ, ಇಲ್ಲಿ ಅಭಿವೃದ್ದಿ ಕೆಲಸಗಳನ್ನ ಮಾಡಬೇಕು, ಕೇವಲ ಮೋದಿ ಮೋದಿ ಎನ್ನುವುದಲ್ಲ, ಎದುರಾಳಿ ಅಭ್ಯರ್ಥಿಗೆ ಜನರ ಮಧ್ಯೆ ಮಾತನಾಡೋಕೆ ಬರಲ್ಲ, ಅವರು ಅಡುಗೆ ಮಾಡೋಕೆ ಮಾತ್ರ ಲಾಯಕ್ಕು ಎಂದು ವಿವಾದ ಸೃಷ್ಟಿಸಿದ್ದು, ಸ್ವತಃ ಸೊಸೆ ಪ್ರಭಾ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತಿದ್ದರು ಮಹಿಳೆಯರ ಬಗ್ಗೆ ಶಾಮನೂರು ಮಾತನಾಡಿದ್ದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ..
ಮಹಿಳೆ ಅಡುಗೆನೂ ಮಾಡ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ
ಶಾಮನೂರು ಹೇಳಿಕೆಗೆ ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ತಿರುಗೇಟು ನೀಡಿದ್ದಾರೆ, ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಮುನ್ನುಗ್ಗುತ್ತಿದ್ದಾರೆ, ಆಕಾಶದಲ್ಲಿ ಹಾರುವ ಹಂತಕ್ಕೂ ಹೋಗಿದ್ದಾರೆ, ಎಲ್ಲಾ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ವಿಚಾರ ಅಜ್ಜಗೆ ಗೊತ್ತಿಲ್ಲ ಅಂತಾ ಕಾಣಿಸುತ್ತಿದೆ, ಶಾಮನೂರು ಮಹಿಳೆಯರಿಗೆ ಅಗೌರವ ತೋರಿದ್ದಾರೆ, ಅಡುಗೆ ಮಾಡಿ ಕೈ ತುತ್ತು ಕೊಡೊ ಪ್ರೀತಿ ಅವರಿಗೆ ಗೊತ್ತಿಲ್ಲ, ನಾವೆಲ್ಲ ಮಹಿಳೆಯರು ಅಡುಗೆ ಮಾಡೋಕೆ ಮಾತ್ರ ಸೀಮಿತಾನಾ, ಮಹಿಳೆ ಅಡುಗೆನೂ ಮಾಡ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ, ಮೋದಿಜಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಹೊತ್ತು ಕೊಡುತ್ತಿದ್ದಾರೆ, ಆದರೆ ಇಂತಹವರು ಮಹಿಳೆಯರಿಗೆ ಅಪಮಾನ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ..