<strong>POWER SAMACHARA | KANNADA NEWS | BREKING NEWS| 02-10-2023..</strong> <strong>ದಾವಣಗೆರೆ:</strong> ಸಿಎಂ ಸಿದ್ದರಾಮಯ್ಯ ವಿರುದ್ದ ಶಾಮನೂರು ಮತ್ತೆ ಕೆಂಡಾಮಂಡಲರಾಗಿದ್ದು, ಮೂವತ್ತೊಂದು ಜಿಲ್ಲೆಗಳಲ್ಲಿ ಒಬ್ಬರಾದರು ಲಿಂಗಾಯಿತ ಜಿಲ್ಲಾಧಿಕಾರಿಗಳು ಇದ್ದಾರ ಎಲ್ಲಾದರೂ ಡಿಸಿ ಇದ್ದರೆ ತೋರಿಸಿಕೊಡಿ ಎಂದು ದಾವಣಗೆರೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕ, ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸವಾಲ್ ಎಸೆದಿದ್ದಾರೆ.. <img class="aligncenter wp-image-2572 size-full" src="https://powersamachara.com/wp-content/uploads/2023/10/shamanur-shivashankarappa.jpg" alt="" width="860" height="573" /> ಸಿಎಂ ಸಿದ್ದರಾಮಯ್ಯ ಏಳು ಮಂತ್ರಿ ಕೊಟ್ಟಿದ್ದೇವೆ ಎಂದಿದ್ದಾರೆ, ನಾವು ಮಂತ್ರಿ ಕೊಡು ಅಂತಾ ಎಲ್ಲೂ ಕೇಳಿಲ್ಲ, ನಾನು ಮಾತನಾಡಿದ್ದು ಅಧಿಕಾರಿಗಳನ್ನ ಮೂಲೆಗುಂಪು ಮಾಡಿದ್ದಾರೆ ಎಂದು ಹೇಳಿದ್ದೇನೆ, ಅಧಿಕಾರಿಗಳಿಗೆ ಸರಿಯಾದ ಸ್ಥಳ ಕೊಟ್ಟಿಲ್ಲ ಅನ್ನೋದು ನನ್ನ ಆರೋಪ, ಸಮಯ ಬಂದಾಗ ನಾವು ಎಲ್ಲವನ್ನೂ ತೋರಿಸಿಕೊಡುತ್ತೇವೆ, 31 ಜಿಲ್ಲೆಯಲ್ಲಿ ವೀರಶೈವ ಡಿಸಿಗಳು ಇದ್ದಾರ..? ಸಿಎಂ ಸಿದ್ದರಾಮಯ್ಯ ಕರೆದಾಗ ಹೋಗಿ ಮಾತನಾಡುತ್ತೇನೆ, ಎಲ್ಲವನ್ನೂ ತೋರಿಸಿಕೊಡುತ್ತೇನೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ. <h3><strong>ವಿಶ್ವನಾಥ್ ನಂತೆ ಬೆಣ್ಣೆ ಹೊಡೆದು, ಮಸಾಲೆ ಹೊಡೆದು, ಮಸ್ಕಾ ಹೊಡೆದು MLC ಆಗಿಲ್ಲ..</strong></h3> ಲಿಂಗಾಯಿತ ಅಧಿಕಾರಿಗಳ ವಿಚಾರವಾಗಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದ ಎಂಎಲ್ ಸಿ ಹೆಚ್ ವಿಶ್ವನಾಥ್ ವಿರುದ್ದ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದು, ಅವನಂಗೆ ಬೆಣ್ಣೆ ಹೊಡೆದು, ಮಸಾಲೆ ಹೊಡೆದು, ಮಸ್ಕಾ ಹೊಡೆದು MLC ಆಗಿಲ್ಲ, ನಾನು 7ಭಾರಿ ಜನರಿಂದ ಆಯ್ಕೆ ಆಗಿ ಬಂದಿದ್ದೇನೆ, ಅವನನ್ನ ಹುಚ್ಚಾಸ್ಪತ್ರೆ ಗೆ ಕಳಿಸಬೇಕು ಎಂದು ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ವಾಗ್ದಾಳಿ ನಡೆಸಿದ್ದಾರೆ.. ಸಿದ್ದರಾಮಯ್ಯ ಅವರಿಗೆ ತೋರಿಸುತ್ತೇನೆ ಎಲ್ಲೆಲ್ಲಿ ಏನೇನು ಕೊಟ್ಟಿದ್ದಾರೆ ಅಂತ, ಒಬ್ಬ DCನೂ ಇಲ್ಲ ಏನು ಇಲ್ಲ ಸುಮ್ಮನೆ ಮಾತನಾಡುತ್ತಾರೆ, ದಾವಣಗೆರೆ ಡಿಸಿ ಲಿಂಗಾಯಿತರ ಎಂದು ಶಾಮನೂರು ಪ್ರಶ್ನಿಸಿದ್ದಾರೆ, ನನ್ನ ಹತ್ತಿರ ಎಲ್ಲ ರೆಕಾರ್ಡಿಂಗ್ ಇದೆ, ಸತ್ಯ ಹೇಳಿದರೆ ಹಾಗೆ ಆಗೋದು, ನಾವು ಸಚಿವ ಸ್ಥಾನ ಕೇಳಿಲ್ಲ, ನಮ್ಮ ವಿದ್ಯಾವಂತರಿಗೆ ಕೆಎಎಸ್, ಐಎಎಸ್, ಐಪಿಎಸ್, ಆದವರಿಗೆ ಸರಿಯಾದ ಜಾಗ ಕೊಟ್ಟಿಲ್ಲ, ಯಾರಿಗ್ ಒಳ್ಳೆಯ ಜಾಗ ಕೊಟ್ಟಿದ್ದಾರೆ ತೋರಿಸಲಿ, ನಮ್ಮವರಿಗೆ ಕೀ ಪೋಸ್ಟ್ ಕೊಟ್ಟಿಲ್ಲ ಅಂತ ನಾವು ತೋರಿಸ್ತೀವಿ ಎಂದು ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಸವಾಲ್ ಎಸೆದಿದ್ದಾರೆ..