POWER SAMACHARA | KANNADA NEWS | BREKING NEWS| 09-09-2023..
ದಾವಣಗೆರೆ: ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆ ಮಾತಿದೆ, ಆದರೆ ಈಗಿನ ಮಾಡ್ರನ್ ಯುಗದಲ್ಲಿ ಉಂಡು ಮಲಗಿ ಬೆಳಿಗ್ಗೆ ಎದ್ದರು ಸಮಸ್ಯೆಗಳು ಮತ್ತಷ್ಟು ಜಟಿಲ ಆಗುತ್ತಲಿದ್ದು ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ, ಚಿಕ್ಕಪುಟ್ಟ ಜಗಳವನ್ನೆ ದೊಡ್ಡದು ಮಾಡಿಕೊಳ್ಳುತ್ತಾ, ಸ್ವಾರ್ಥ, ಅಸೂಹೆ, ಬದಲಾದ ಫ್ಯಾಶನ್ನೀಕರಣದಿಂದ ಪತಿ ಪತ್ನಿ ಸಂಬಂಧಗಳು ಮುರಿದು ಬೀಳುತ್ತಿವೆ, ಅದರಂತೆ ಇಲ್ಲೊಂದು ಕೋರ್ಟ್ ನಲ್ಲಿ 13 ಜೋಡಿಗಳು ಡೈವೋರ್ಸ್ ಗೆ ಅರ್ಜಿ ಹಾಕಿದ್ದರು, ಆದರೆ ಆ ಒಂದು ಬುದ್ದಿವಾದದ ಮಾತಿನಿಂದ ಆ ಎಲ್ಲಾ ಸತಿಪತಿಗಳು ಒಂದಾಗಿದ್ದಾರೆ..
ಹೌದು.. ಪತಿ, ಪತ್ನಿಯ ಜಗಳ ಉಂಡು ಮಲ್ಗೋ ತನಕ ಎಂಬ ಗಾದೆ ಮಾತಿದೆ, ಆದರೆ ದಾವಣಗೆರೆಯಲ್ಲಿ 13 ಜೋಡಿಗಳು ಚಿಕ್ಕಪುಟ್ಟ ವಿಚಾರಕ್ಕೆ ಜಗಳವಾಡಿ ಬಗೆಹರಿಸಿಕೊಳ್ಳದೇ ವಿಚ್ಛೇದನಕ್ಕಾಗಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲ್ಲು ಹತ್ತಿದ್ದರು, ಅದರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಅವರಿಗೆ ವಿಚ್ಛೇದನ ಕೊಡಿಸದೆ 13 ಜೋಡಿಗಳಿಗೆ ಮತ್ತೇ ಒಂದಾಗುವಂತೆ ಮಾಡಿ, ಸಂದೇಶ ರವಾನೆ ಮಾಡಿದೆ, ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ ಸತಪತಿಗಳು ನಾನೊಂದು ತೀರ ನೀನೊಂದು ತೀರ ಎನ್ನುವ ರೀತಿಯಲ್ಲಿ ಜೀವನ ಮಾಡ್ತಿದ್ದ ವೇಳೆ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಮಧ್ಯ ಪ್ರವೇಶಿಸಿ ಸತಿಪತಿಗಳು ಮತ್ತೇ ಒಂದಾಗಿದ್ದಾರೆ.
ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಬೆಣ್ಣೆನಗರಿ
ಸಣ್ಣಪುಟ್ಟ ಕಾರಣಗಳಿಗೆ ಸತಿಪತಿಗಳ ಮಧ್ಯೆ ಮನಸ್ತಾಪ ಬಂದು ದೂರ ದೂರವಾಗಿದ್ದ ದಂಪತಿಗಳು ಮತ್ತೇ ಒಗ್ಗೂಡಿದ ಅಪರೂಪದ ಕ್ಷಣಕ್ಷೆ ದಾವಣಗೆರೆ ಜಿಲ್ಲಾ ಕೋರ್ಟ್ ಸಾಕ್ಷಿಯಾಗಿತ್ತು. ದಾವಣಗೆರೆ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆರವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಲೋಕಾ ಆದಾಲತ್ ನಲ್ಲಿ 13 ಜೋಡಿಗಳು ನ್ಯಾಯಧೀಶರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ಸಿಹಿ ತಿನ್ನಿಸುವ ಮೂಲಕ ಮತ್ತೇ ಸತಿಪತಿಗಳಾಗಿದ್ದಾರೆ. ಇಂದು ದೇಶದಾದ್ಯಂತ ರಾಷ್ಟ್ರೀಯ ಲೋಕಾ ಆದಾಲತ್ ನಡೆಯುತ್ತಿದ್ದು 5 ಸಾವಿರ ಕೇಸ್ ಗಳು ವಿಚಾರಣೆ ನಡೆಯುತ್ತಿದ್ದು ಬೇರೆ ಬೇರೆ 2500 ವ್ಯಾಜ್ಯ ಪ್ರಕರಣದಲ್ಲಿ ಇತ್ಯರ್ಥ ಆಗಿದೆ. ಈ ಸಂದರ್ಭದಲ್ಲಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದ 13 ಜೋಡಿಗಳಿಗೆ ಕಾನೂನು ಸೇವಾ ಪ್ರಾಧಿಕಾರದಡಿಯಲ್ಲಿ ದಂಪತಿಗಳು ಮತ್ತೇ ಸತಿಪತಿಗಳಾಗುವಂತೆ ರಾಜೀ ಮಾಡಿಸಿ ಜೀವನಕ್ಕೆ ದಾರಿ ಮಾಡಿಕೊಡಲಾಯಿತು. ಸಣ್ಣಪುಟ್ಟ ಕಾರಣಗಳಿಗೆ ಮನಸ್ತಾಪವಾಗಿ 3 – 4 ವರ್ಷಗಳಿಂದ ದೂರವಿದ್ದ ಸತಿಪತಿಗಳು ವಿಚ್ಛೇಧನ ಮರೆತು ಮತ್ತೇ ಒಂದಾಗಿ ಜೀವನ ನಡೆಸಲು ಒಪ್ಪಿಕೊಂಡಿದ್ದಾರೆ. ಇದಕ್ಕೆ ಇಡೀ ದಾವಣಗೆರೆ ಜಿಲ್ಲಾ ನ್ಯಾಯಾಧೀಶರು, ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಸಾಕ್ಷಿಯಾಗಿದೆ. ಈ ವೇಳೆ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆರವರು ಮಾತನಾಡಿ ರಾಷ್ಟ್ರೀಯ ಲೋಕಾದಲತ್ ನಲ್ಲಿ ಎಲ್ಲರ ಪ್ರಯತ್ನದಿಂದ 13 ಜೋಡಿಗಳನ್ನು ಒಂದಾಗಿಸಿದ್ದೇವೆ, ಚಿಕ್ಕ ಪುಟ್ಟ ವಿಚಾರಕ್ಕೆ ಜಗಳವಾಡಿ ದಂಪತಿಗಳು ದೂರವಾಗಿದ್ದರು, ಅಂತಹವರಿಗೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸತಿಪತಿಗಳಿಗೆ ವಿಚ್ಛೇದನ ಕೊಡಿಸದೆ ರಾಜೀ ಮಾಡಿಸಿ ಒಂದಾಗುವಂತೆ ಮಾಡಿದ್ದೇವೆ, ನಾವು ಈ ದಿನ 5000 ಸಾವಿರ ಪ್ರಕರಣಗಳನ್ನು ಇತ್ಯರ್ಥ ಗೊಳಿಸಬೇಕೆಂದು ಕೊಂಡಿದ್ದೇವೆ ಅದರಲ್ಲಿ 2500 ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇವೆ ಎಂದರು.
ಒಂದಾದ ಒಂದೂ ವರ್ಷದಿಂದ ದೂರ ಇದ್ದ ದಂಪತಿಗಳು..
ಎರಡು ಮಕ್ಕಳಾದ ನಂತರ ಪತಿ ತೀವ್ರ ಕಿರಿಕಿರಿಯಿಂದ ಒಂದು ವರ್ಷ ಕಾಲ ದೂರವಿದ್ದ ಪತ್ನಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದರು. ಪತಿಯ ಮಾನಸಿಕ ರೋಗ ಈ ಸಂಸಾರದ ಕಿರಿಕಿರಿಗೆ ಕಾರಣ ಎಂಬುದನ್ನು ಕೋರ್ಟ್ ಪತ್ನಿಗೆ ಮನವರಿಕೆ ಮಾಡಿಕೊಟ್ಟಿತ್ತು. ನಂತರ ಪತಿಗೆ ವೈದ್ಯರು ನೀಡಿದ ಚಿಕಿತ್ಸೆಯಿಂದ ಗುಣಮುಖನಾಗಿದ್ದು ಮತ್ತೇ ಸತಿ ಪತಿಗಳು ಒಂದಾಗಿ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಿಸಿ ಹೊಸ ಜೀವನಕ್ಕೆ ನಾಂದಿ ಹಾಡಿದ್ದಾರೆ. ಹೀಗೆ 12 ಜೋಡಿಗಳದ್ದು ಒಂದೊಂದು ಕತೆ ಇದ್ದು ಎಲ್ಲಾ ವಿರಸ ಮನಸ್ತಾಪ ಮರೆತು ಪರಸ್ಪರ ಒಂದಾಗಿದ್ದಾರೆ. ಸತಿಪತಿಗಳ ಪರಸ್ಪರ ಸಿಹಿ ತಿನಿಸಿ ಅಪ್ಪುಗೆ ಆಗಿದ್ದು ಅವರ ಮಕ್ಕಳು ನ್ಯಾಯಾಧೀಶರಿಗು ಖುಷಿ ತಂದಿದೆ..
ಈ ವೇಳೆ ಒಂದಾದ ಜೋಡಿಯಲ್ಲಿ ಒಬ್ಬರಾದ ಹರ್ಷಿತ ಮಾತನಾಡಿ, ಒಂದು ವರ್ಷ ಎರಡು ತಿಂಗಳಿಂದ ದೂರವಾಗಿದ್ದೆವು, ತಮ್ಮ ಮಗನಿಗೋಸ್ಕರ ಒಂದಾಗಿದ್ದೇವೆ, ನಾನು ನಮ್ಮ ಗಂಡ ಹರೀಶ್ ರವರು ಒಂದಾಗಲು ನಮ್ಮ ವಕೀಲರು ಸಹಕಾರ ಇದೆ, ತುಂಬಾ ಖುಷಿಯಾಗುತ್ತಿದೆ, ತುಂಬಾ ಚೆನ್ನಾಗಿ ಇರಬೇಕೆಂದುಕೊಂಡಿದ್ದೇವೆ, ಮುಖ್ಯ ನ್ಯಾಯಮೂರ್ತಿಗಳಿಗೆ ಧನ್ಯವಾದಗಳು ಹೇಳ ಇಷ್ಟ ಪಡ್ತಿನಿ, ಅವರು ಕಾಲಾವಕಾಶ ಪಡೆದು ಪಂಚಾಯತಿ ಮಾಡಿ ನಮ್ಮನ್ನು ಒಂದಾಗಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಮನೆ ಮುರಿಯುವವರ ಮಾತನ್ನು ಕೇಳುವುದು ಮೊದಲು ಬಿಡಬೇಡು..
ಇನ್ನೂ ಸಣ್ಣ ಪುಟ್ಟ ಸಮಸ್ಯೆಗಳನ್ನೆ ದೊಡ್ಡದು ಮಾಡಿಕೊಂಡು ದೂರ ಆಗುವ ದಂಪತಿಗಳಿಗೆ ಈ ಲೋಕ ಅದಾಲತ್ ಮಾದರಿಯಾಗಿದೆ, ಇನ್ನೂ ಮನೆಯಲ್ಲಿ ಅತ್ತೆ, ಮಾವ ಸಂಬಂಧಿಕರಿಂದಲೇ ಸಂಬಂಧಗಳಲ್ಲಿ ಸಮಸ್ಯೆಗಳು ಉದ್ಭವ ಆಗುತ್ತವೇ, ಅವರು ನಮಗೆ ಮಾರ್ಗದರ್ಶನ ಮಾಡಬೇಕು, ಆದರೆ ಯಾರದೋ ಮಾತು ಕೇಳಿ ನಮಗೆ ಬೈಯುತ್ತಾರೆ, ನೋಯಿಸುತ್ತಾರೆ ಇದು ಸರಿಯಲ್ಲ, ಅವರು ಸಹ ಇಂದಿನ ಕಾಲಕ್ಕೆ ಅನುಗುಣವಾಗಿ ಹೊಂದಿಕೊಂಡು ಹೋಗಬೇಕಿದೆ, ನಾವುಗಳು ಸಹ ಇಂದಿನ ಮಾಡ್ರನ್ ಯುಗದಲ್ಲಿ ಹಿರಿಯರ ಜೊತೆ ಚೆನ್ನಾಗಿ ಮಾತನಾಡುತ್ತಾ ಪ್ರೀತಿಯಿಂದ ಇರುವುದು ಸಹ ಮುಖ್ಯವಾಗಿದೆ, ಬೇರೆಯವರ ಮಾತು ಕೇಳಿಯೆ ಸಂಬಂಧಗಳು ಮುರಿದು ಬೀಳುವುದು ಜಾಸ್ತಿ, ಬೇರೆಯವರ ಮಾತಿಗೆ ಕಿವಿಗೊಡಬಾರದು, ಏನೇ ಇದ್ದರು ಕೂತು ಬಗೆಹರಿಸಿಕೊಳ್ಳಬೇಕು ಎಂದು ಹೆಸರು ಹೇಳದ ಮಹಿಳೆಯೊಬ್ಬರು ಮಾತನಾಡುತ್ತಿದ್ದು ಕಂಡು ಬಂತು..
ಒಟ್ಟಾರೆ ರಾಷ್ಟ್ರೀಯ ಲೋಕಾ ಅದಾಲತ್ ಇಂತಹದೊಂದು ಅಪೂರ್ವ ಅವಕಾಶ ಕಲ್ಪಿಸಿತ್ತು. ಜೀವನ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಕೋರ್ಟ್ ಮಧ್ಯಪ್ರವೇಶ ಮತ್ತೇ ದಂಪತಿಗಳ ಬಾಳಲ್ಲಿ ಹೊಸ ಭರವಸೆ ಮೂಡಿದೆ. ಕೋರ್ಟ್ ನಲ್ಲಿ ಪ್ರಕರಣಗಳು ಬಗೆಹರಿಯುವುದು ಕಡಿಮೆ, ವಿಳಂಬ ಎನ್ನುವ ಮಾತಿಗೆ ದಾವಣಗೆರೆ ಕೌಟುಂಬಿಕ ನ್ಯಾಯಾಲಯ ಹೊಸ ಭಾಷ್ಯ ಬರೆದಿರುವುದಂತು ಸುಳ್ಳಲ್ಲ..