POWER SAMACHARA | KANNADA NEWS | BREKING NEWS| 18-06-2023..

ದಾವಣಗೆರೆ: ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸುತ್ತಾರೆ, ಅರ್ಧಕ್ಕೆ ಬಿಟ್ಟು ಕೊಡುವ ಮಾತು ಯಾರು ಹೇಳಿಲ್ಲ ಎಂದು ದಾವಣಗೆರೆ ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಂಚಲನ ಮೂಡಿಸಿದ್ದಾರೆ..

ಸಿಎಂ ಸ್ಥಾನ ಇದುವರೆಗೂ ಅರ್ಧಕ್ಕೆ ಅಂತ ಯಾರು ಹೇಳಿಲ್ಲ, ಅದ್ದರಿಂದ ಅವರೇ ಮುಂದುವರೆಯುತ್ತಾರೆ ಎನ್ನುವ ವಿಶ್ವಾಸ ಇದೆ, ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಅಕ್ಕಿ ಖರೀದಿ ಬಗ್ಗೆ ಎಲ್ಲವನ್ನು ಸರಿಪಡಿಸುತ್ತೇವೆ, ಬಿಜೆಪಿಯವರು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ, ಅದು ಬಿಜೆಪಿಯವರಿಗೆ ಸಂಬಂಧಪಟ್ಟ ವಿಚಾರವಲ್ಲ, ಮೋದಿ 15 ಲಕ್ಷ ಕೊಡ್ತಿನಿ ಅಂದ್ರು, ಅದು ಬರಲಿಲ್ಲ, ಅವರ 10 ಭರವಸೆ ಗಳು ಹಾಗೇ ಇದೆ, ಇನ್ನು ಕಾಲಾವಕಾಶ ಬೇಕು ಎಲ್ಲಾವನ್ನು ಸರಿ ಮಾಡುತ್ತೇವೆ ಎಂದರು..

ಪಠ್ಯ ಪುಸ್ತಕ ಶಿಕ್ಷಣ ವಿರುದ್ದವಾಗಿದೆ..

ಪಠ್ಯ ಪುಸ್ತಕ ಶಿಕ್ಷಣದ ವಿರುದ್ದವಾಗಿದೆ ಅದನ್ನು ಬದಲಾವಣೆ ಮಾಡ್ತಿವಿ ಎಂದು ಹೇಳಿದ್ದೇವೆ, ಬದಲಾವಣೆ ಮಾಡುತ್ತೇವೆ, ಇದರಲ್ಲಿ ಗೊಂದಲ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ..