POWER SAMACHARA | KANNADA NEWS | BREKING NEWS| 07-07-2023

ದಾವಣಗೆರೆ: ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಡಾ. ಜಿ.ಸಿ. ಬಸವರಾಜ್ ಅವರ ಕುರಿತು ಸಾಹಿತಿ ಡಾ. ಎನ್.ಜೆ. ಶಿವಕುಮಾರ್ ರಚಿಸಿರುವ 'ಸಾಧನೆಯ ಹಾದಿಯಲ್ಲಿ' ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಜು. ೯ ರಂದು ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎನ್.ಜೆ. ಶಿವಕುಮಾರ್ ತಿಳಿಸಿದರು.

ದಾವಣಗೆರೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಾ. ಜಿ.ಸಿ. ಬಸವರಾಜ್ ಅವರ ಸ್ನೇಹವೃಂದ ಬಳಗವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಡಂಬಳ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಬಸವಪ್ರಭು ಸ್ವಾಮೀಜಿ, ಡಾ. ಗುರುಬಸವ ಸ್ವಾಮೀಜಿ, ಡಾ. ಬಸವ ಜಯಚಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮವನ್ನು ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಉದ್ಘಾಟಿಸಲಿದ್ದು, ಕೃತಿ ಲೋಕಾರ್ಪಣೆಯನ್ನು ಜೆಜೆಎಂ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ಎಂ.ಜಿ. ರಾಜಶೇಖರ್ ಮಾಡಲಿದ್ದಾರೆ. ಕೃತಿ ಕುರಿತು ಸಾಹಿತಿ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಲಿದ್ದಾರೆ.

ಡಾ. ಸಿದ್ದಲಿಂಗಪ್ಪ ಎಲಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಜೆಜೆಎಂ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಶಾಮನೂರು ಮುರುಗೇಶ್, ಡಾ. ಸುಬ್ಬಾರೆಡ್ಡಿ, ಶಾಸಕ ಎನ್.ವೈ. ಗೋಪಾಲಕೃಷ್ಣ, ಪ್ರೊ. ಲಿಂಗಪ್ಪ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಕೃತಿಯಲ್ಲಿ ಬಸವರಾಜ್ ಅವರ ವೈದ್ಯಕೀಯ ಸಾಧನೆ ಹಾಗೂ ದೇವಸಮುದ್ರದ ಅವರ ಕುಟುಂಬದವರ ಸಾರ್ಥಕ ಬದುಕಿನ ಕುರಿತು ತಿಳಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ, ಡಾ. ಜಿ.ಸಿ. ಬಸವರಾಜ್, ಶಿವರುದ್ರಾಚಾರ್ ಹಾಗೂ ಚಂದ್ರಶೇಖರ್ ಸ್ವಾಮಿ ಉಪಸ್ಥಿತರಿದ್ದರು.