POWER SAMACHARA | KANNADA NEWS | BREKING NEWS| 28-05-202
ದಾವಣಗೆರೆ : ದಾವಣಗೆರೆಯಲ್ಲಿ ಎಲ್ಲರಿಗೂ ಚಿರಪರಿಚಿತನಾಗಿದ್ದ ಆರ್ ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ..
ದಾವಣಗೆರೆ ತಾಲ್ಲೂಕಿನ ತೋಳಹುಣಸೆ ಬ್ರಿಡ್ಜ್ ಬಳಿ ಆರ್ ಟಿ ಐ ಕಾರ್ಯಕರ್ತ ಹರೀಶ್ ಹಳ್ಳಿ(40) ಅನುಮಾನಸ್ಪದ ಸಾವನ್ನಪ್ಪಿದ್ದು, ಇದು ಕೊಲೆ ಎಂದು ಹರೀಶ್ ಪತ್ನಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ..
ಗಾಂಧಿನಗರ ಪಿಎಸ್ ಐ ಕೃಷ್ಣಪ್ಪ ಮತ್ತು ದೇವರಾಜ್, ಇರ್ಷದ್ ಮೇಲೆ 302ಪ್ರಕರಣ ದಾಖಲಿಸಿದ್ದು, ಈ ಕೊಲೆ ಹಿಂದೇ ಸೈಟ್ ಮಾಲೀಕ ಬಾಬುರಾವ್ ಇದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ..
ಕೊಲೆಯೋ.?, ಅವಘಡವೋ..?
ದಾವಣಗೆರೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಹರೀಶ್ ಹಳ್ಳಿ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು, ನಕಲಿ ದಾಖಲೆಗಳನ್ನು ಸೃಷ್ಟಿಸಿ 3 ನಿವೇಶನಗಳನ್ನು ಅಕ್ರಮವಾಗಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು..
ಈ ಸಂಬಂಧ ಕಳೆದ ರಾತ್ರಿ ಪೊಲೀಸರು ಬಂಧಿಸಿ ಕರೆತರುವಾಗ, ತಪ್ಪಿಸಿಕೊಳ್ಳುವ ಯತ್ನದಲ್ಲಿ ತೋಳಹುಣಸೆ ಸಮೀಪ ಪ್ಲೈ ಓವರ್ ಮೇಲಿಂದ ಬಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದು ದಾವಣಗೆರೆ ಖಾಸಗಿ ಆಸ್ಪತ್ರೆ ಸೇರಿದ್ದ ಹರೀಶ್ ಹಳ್ಳಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ..
ಎಸ್ಪಿ ಅರುಣ್ ಅವರ ಜೊತೆ ಸಂಬಂಧಿಕರ ವಾಗ್ವಾದ
ಇನ್ನೂ ಹರೀಶ್ ಹಳ್ಳಿ ಅವರನ್ನ ಕೊಲೆ ಮಾಡಿ ತಂದು ಹಾಕಲಾಗಿದೆ ಎಂದು ಹರೀಶ್ ಅವರ ತಂದೆ ಸೇರಿದಂತೆ ಸಂಬಂಧಿಕರು ಆರೋಪ ಮಾಡಿದ್ದು, ಈ ಸಂಬಂಧ ಪೊಲೀಸರನ್ನ ಈ ಕೂಡಲೇ ಬಂಧಿಸಿ, ಹರೀಶ್ ತಪ್ಪು ಮಾಡಿದ್ದರೆ ಜೈಲಿಗೆ ಹಾಕಬೇಕಿತ್ತು, ಆದರೆ ಕೊಲೆ ಮಾಡಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳಕ್ಕೆ ಆಗಮಿಸಿದ್ದ ಎಸ್ಪಿ ಅರುಣ್ ಅವರ ಜೊತೆ ವಾಗ್ವಾದಕ್ಕೆ ಇಳಿದಿದ್ದರು..
ಏನಿದು ಸೈಟ್ ವಿವಾದ..?