POWER SAMACHARA | KANNADA NEWS | 28-04-2023
ದಾವಣಗೆರೆ : ಶಾಸಕ ಎಂಪಿ ರೇಣುಕಾಚಾರ್ಯಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಗ್ರಾಮದಿಂದ ಹೊರ ಕಳುಹಿಸಿದ ಘಟನೆ ದಾವಣಗೆರೆ ಜಿ. ಹೊನ್ನಾಳಿಯ ಕಂಕನಹಳ್ಳಿಯಲ್ಲಿ ಘಟನೆ ನಡೆದಿದೆ..

ಎಲೆಕ್ಷನ್ ಪ್ರಚಾರಕ್ಕೆ ಬಿಡದೇ ಎಂಪಿ ರೇಣುಕಾಚಾರ್ಯರಿಗೆ ಕ್ಲಾಸ್ ತೆಗೆದುಕೊಂಡ ಯುವಕರು ಗ್ರಾಮದಿಂದಲೇ ಹೊರ ಕಳುಹಿಸಿದ್ದಾರೆ ಎನ್ನಲಾಗಿದೆ.

ಕ್ಯಾಮರ ಫೋಸ್ ಕೊಡಬೇಡಿ..!

ಗ್ರಾಮದಲ್ಲಿ ಅಭಿವೃದ್ದಿ ಕೆಲಸ ಮಾಡಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ, ಚರಂಡಿ ಇಲ್ಲ, ಎಸ್ ಸಿ ಜಾತಿ ಎಂದು ನಿಮ್ಮ ಮಕ್ಕಳು ನಿಮ್ಮ ಕುಟುಂಬದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೋಸ ಮಾಡಿದ್ದೀರಿ, ಒಳ ಮೀಸಲಾತಿ ತಂದು ಲಂಬಾಣಿ ಸಮುದಾಯದ ಮೀಸಲಾತಿ ಕಿತ್ತುಕೊಂಡಿದ್ದೀರಿ, ಕೆಲಸವನ್ನೆ ಮಾಡದೇ ಬರೀ ಫೋಟೊ, ವಿಡಿಯೋ ಪೋಸ್ ಕೊಡುತ್ತೀರಿ, ಹೀಗಾಗಿ ನೀವು ನಮ್ಮ ಊರಿಗೆ ಬರಲೇ ಬೇಡಿ ಎಂದು ಗ್ರಾಮದಿಂದ ಹೊರ ಕಳುಹಿಸಿದ್ದಾರೆ, ಇನ್ನೂ ಜನರಿಂದ ರೇಣುಕಾಚಾರ್ಯಗೆ ಭಾರೀ ಮುಖಭಂಗವಾಗಿದ್ದು, ಸಪ್ಪೆ ಮೊರೆ ಹಾಕಿ ಗ್ರಾಮದಿಂದ ಹೊರನಡೆದಿದ್ದಾರೆ ಎಂದು ತಿಳಿದು ಬಂದಿದೆ..