POWER SAMACHARA | KANNADA NEWS | BREKING NEWS| 09-08-2023..

ದಾವಣಗೆರೆ: ಅವರಿಬ್ಬರು ಸ್ನೇಹಿತರು, ಗಾರೆ ಕೆಲಸ ಮಾಡುತ್ತಾ ಚೆನ್ನಾಗಿಯೇ ಜೀವನ ಸಾಗಿಸುತ್ತಿದ್ದರು, ಆದರೆ ಆ ಇಬ್ಬರಲ್ಲಿ ಒಬ್ಬ ಬರ್ಬರವಾಗಿ ಸಾವನ್ನಪ್ಪಿದ್ದ, ಕೊಲೆ ಯಾಕಾಯ್ತು, ಹೇಗಾಯ್ತು ಅನ್ನೋದೆ ಯಕ್ಷ ಪ್ರಶ್ನೆಯಾಗಿ ಹೋಗಿತ್ತು, ಆದರೆ ಕೊಲೆಯ ಸುಳಿವು ಅವಳಿಗೆ ಮಾತ್ರ ಸಿಕ್ಕಿತ್ತು.. ಕೊಲೆ ಆಗಿದ್ದಾದರು ಹೇಗೆ, ಕೊಲೆಯ ಸುಳಿವು ಕೊಟ್ಟಿದ್ದಾಕೆ ಯಾರು.. ಅಂತೀರ.. ನೋಡಿ ಇಂಟರೆಸ್ಟಿಂಗ್ ಸ್ಟೋರಿ ಓದಿ..

ಹೌದು.. ದಾವಣಗೆರೆಯ ರಾಮನಗರ ನಿವಾಸಿ ನರಸಿಂಹ(26) ಕೊಲೆಯಾದ ಯುವಕ, ರಾಮನಗರದಲ್ಲಿ ತರಗಾರ ಗಾರೆ ಕೆಲಸ ಮಾಡುತ್ತಿದ್ದ, ಆದರೆ ಆಗಸ್ಟ್ 6ರಂದು ರಾತ್ರಿ ಮಲ್ಲಶೆಟ್ಟಿಹಳ್ಳಿ ಬಳಿ ಭೀಕರವಾಗಿ ಹತ್ಯೆಗೀಡಾಗಿದ್ದ, ಪ್ರಕರಣ ಮರುದಿನ ಬೆಳಕಿಗೆ ಬಂದಿತ್ತು, ಕೊಲೆ ಯಾಕಾಯ್ತು ಅಂತಾ ಯಾರಿಗೂ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಆದರೆ ಆಕೆಗೆ ಮಾತ್ರ ಆ ಸುಳಿವು ಸಿಕ್ಕಿತ್ತು..

ಆಕೆಯೇ 'ತಾರಾ'

ಹೌದು.. ಬರ್ಬರವಾಗಿ ಹತ್ಯೆಗೀಡಾಗಿದ್ದ ನರಸಿಂಹನ ಪ್ರಕರಣ ಭೇದಿಸಲು ಆಕೆ ಎಂಟ್ರಿಯಾಗಿದ್ದಳು, ಆಕೆ ಬೇರೆ ಯಾರು ಅಲ್ಲ 'ತಾರಾ', ತಾರಾ ಬೇರೆ ಯಾರು ಅಲ್ಲ ಪೊಲೀಸ್ ಡಾಗ್ ಸ್ಕ್ವಾಡ್, ಚಾಣಾಕ್ಷ ಡಾಗ್ ಅಂತಲೇ ಫೇಮಸ್ಸ್ ಸದ್ಯ ದಾವಣಗೆರೆಯಲ್ಲಿ ಕಳ್ಳರು ಕಾಕರು, ಕೊಲೆಗಡುಕರು ತಾರಾ ಎಂದರೆ ಪತರುಗುಟ್ಟುತ್ತಿದ್ದಾರೆ.. ಆರೋಪಿಗಳನ್ನ ಪತ್ತೆ ಹಚ್ಚಲು ತಾರಾ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದಾಳೆ, ಈ ಹಿಂದೆ ದಾವಣಗೆರೆಯಲ್ಲಿ ತುಂಗಾ ಡಾಗ್ ರಾಜ್ಯದಾದ್ಯಂತ ಹೆಸರು ಮಾಡಿತ್ತು, ಹೀಗ ಅದರ ಸ್ಥಾನವನ್ನು ತಾರಾ ತುಂಬುತ್ತಿದ್ದಾಳೆ, ಸದ್ಯ ದಾವಣಗೆರೆಯಲ್ಲಿ ನಡೆದ ನರಸಿಂಹನ ಕೊಲೆಯಲ್ಲಿ ತಾರಾ ಪ್ರಮುಖ ಪಾತ್ರ ವಹಿಸಿದ್ದಾಳೆ.

8ಕಿಲೋ ಕ್ರಮಿಸಿ ಆರೋಪಿ ಪತ್ತೆ ಹಚ್ಚಿದ ತಾರಾ..

ಆಗಸ್ಟ್ 7ರಂದು ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ ಆಗಮಿಸಿತ್ತು, ನರಸಿಂಹ ಕೊಲೆಯಾಗಿದ್ದ ಮಲ್ಲಶೆಟ್ಟಿಹಳ್ಳಿ ಗ್ರಾಮದಿಂದ ರಾಮನಗರ ತನಕ ಬರೋಬ್ಬರಿ 8 ಕಿಲೋ ಮೀಟರ್ ನಷ್ಟು ಡಾಗ್ ಓಡಿದೆ, ಡಾಗ್ ಓಡೋದು ನೋಡಿದ ಪೊಲೀಸರಿಗೂ ಶಾಕ್ ಕಾದಿತ್ತು, ಸೀದಾ ಮನೆಯೊಂದರ ಮುಂದೆ ತಾರಾ ನಿಂತಿದ್ದಳು, ಇಲ್ಲೇಕೆ ನಿಂತಿದೆ ತಾರಾ ಅಂತ ನೋಡಿದ್ರೆ ಆ ಮನೆ ಶಿವಯೋಗಿಶ್ ಅಲಿಯಾಸ್ ಯೋಗಿ ಅವನದಾಗಿತ್ತು, ಇತ ನರಸಿಂಹನ ಸ್ನೇಹಿತನಾಗಿದ್ದವನು, ಅಂದು ಆ ಮನೆ ಬಾಗಿಲು ಹಾಕಿತ್ತು, ಬಳಿಕ ಶಿವಯೋಗಿಶ್ ನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಗೊತ್ತಾಗಿದೆ..

ಅಷ್ಟಕ್ಕೂ ಆಗಿದ್ದೇನು ಅಂತಾ ನೋಡೊದಾದದ್ರೆ, ಶಿವಯೋಗೀಶ್ ತರಗಾರ ಮೇಸ್ತ್ರಿಯಾಗಿದ್ದ, ನರಸಿಂಹ, ಶಿವಯೋಗೀಶ್ ನ ಜೊತೆ ಕೆಲಸ ಮಾಡುತ್ತಿದ್ದ, ಕೆಲಸದ ವೇಳೆ ಅಡ್ವಾನ್ ಆಗಿ ನರಸಿಂಹ 35ಸಾವಿರ ರೂಪಾಯಿಯನ್ನ ಶಿವಯೋಗಿಶ್ ನ ಬಳಿ ಪಡೆದಿದ್ದ, ಅಡ್ವಾನ್ಸ್ ಪಡೆದ ಮೇಲೆ ನರಸಿಂಹ ಕೆಲಸಕ್ಕೆ ಸರಿಯಾಗಿ ಬರುತ್ತಿರಲಿಲ್ಲ, ಅಡ್ವಾನ್ಸ್ ವಾಪಸ್ ಕೇಳಿದರು ಕೊಡದೇ ಸತಾಯಿಸುತ್ತಿದ್ದ, ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ನರಸಿಂಹ ಮಚ್ಚಿನಿಂದ ಶಿವಯೋಗಿಗೆ ಹೊಡೆದಿದ್ದು ಶಿವಯೋಗಿ ಗಂಭೀರ ಗಾಯಗೊಂಡಿದ್ದ, ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನರಸಿಂಹ ಜೈಲು ಸೇರಿದ್ದ ಬಳಿಕ ಬೇಲ್ ಮೇಲೆ ಇತ್ತೀಚೆಗಷ್ಟೆ ನರಸಿಂಹ ಹೊರ ಬಂದಿದ್ದ, ಬಂದವನೇ ಶಿವಯೋಗಿ ಮೇಲೆ ದ್ವೇಷ ಸಾಧಿಸುತ್ತಲೇ ಬರುತ್ತಿದ್ದ ಎನ್ನಲಾಗಿದೆ, ಈ ವಿಚಾರವಾಗಿ ಮಾತನಾಡಲು ಮಲ್ಲಶೆಟ್ಟಿಹಳ್ಳಿ ಬಳಿ ಸಂಧಾನಕ್ಕೆ ಎಂದು ನರಸಿಂಹನನ್ನು ಶಿವಯೋಗಿ ಕರೆದಿದ್ದಾನೆ, ಕರೆದವನೇ ದೊಣ್ಣೆಯಿಂದ ಹಿಗ್ಗಾಮುಗ್ಗಾ ನರಸಿಂಹನ ತಲೆಗೆ, ಕಿವಿಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ, ಮುಂದೊಂದು ದಿನ ನನ್ನನ್ನು ನರಸಿಂಹ ಕೊಲೆ ಮಾಡುತ್ತಾನೆ ಎಂದು ಈ ಕೃತ್ಯ ನಡೆಸಿರುವುದಾಗಿ ವಿಚಾರಣೆ ವೇಳೆ ಶಿವಯೋಗಿಶ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ...

ಒಟ್ಟಾರೆ ಕೇವಲ 35 ಸಾವಿರ ರೂಪಾಯಿಗೆ ಸ್ನೇಹಿತರ ನಡುವೆ ಜಗಳ ಆಗಿ ಕೊಲೆಯಲ್ಲಿ ಅಂತ್ಯವಾಗಿದೆ, ಒಬ್ಬ ಸಾವನ್ನಪ್ಪಿದ್ದರೆ ಇನ್ನೊಬ್ಬ ಜೈಲು ಕಂಬಿ ಎಣಿಸುವಂತಾಗಿದೆ, ಇತ್ತ ಪ್ರಕರಣ ಭೇದಿಸಿದ ಡಿಟೆಕ್ಟಿವ್ ತಾರಾ ಹಾಗೂ ಎರಡು ದಿನದಲ್ಲೇ ಪ್ರಕರಣ ಭೇದಿಸಿದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ..