POWER SAMACHARA | KANNADA NEWS | BREKING NEWS| 23-06-2023.....

ದಾವಣಗೆರೆ : ತಾಲ್ಲೂಕಿನ ಹೆಚ್. ಕಲ್ಪನಹಳ್ಳಿ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡುತ್ತೇವೆ ಎಂದು ಜಿಲ್ಲಾಡಳಿತ ಮಾತು ಕೊಟ್ಟು ಈಗ ನಿರ್ಲಕ್ಷ್ಯ ವಹಿಸಿದೆ ಎಂದು ದಾವಣಗೆರೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ ಆರೋಪಿಸಿದರು..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಡ್ಜ್ ನಿರ್ಮಾಣಕ್ಕೆ ಆಗ್ರಹಿಸಿ ರೈತ ಸಂಘದಿಂದ ಹೆದ್ದಾರಿ ತಡೆ ನಡೆಸಿ ಆಗ್ರಹಿಸಲಾಗಿತ್ತು, ಅಂದಿನ ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಗಿಯವರು ದಾವಣಗೆರೆ ತಾಲ್ಲೂಕು ಮಲ್ಲಶೆಟ್ಟಿಹಳ್ಳಿ ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಉತ್ತಮ ಅಂಡರ್ ಪಾಸ್ ನಿರ್ಮಾಣವನ್ನು ಮಾಡಲು, ಸಂಸದ ಜಿಎಂ ಸಿದ್ದೇಶ್ವರ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಂಡರ್ ಪಾಸ್ ನಿರ್ಮಾಣ ಮಾಡುತ್ತೇವೆ ಎಂದು ಲಿಖಿತವಾಗಿ ಭರವಸೆ ನೀಡಿದ್ದರು, ಆದರೆ ಇಲ್ಲಿಯವರೆಗೂ ಅಂದರೆ ಸುಮಾರು 2 ವರ್ಷಗಳಾದರೂ ಯಾವುದೇ ರೀತಿಯ ಕಾಮಗಾರಿಯನ್ನು ಪ್ರಾರಂಭಿಸಿರುವುದಿಲ್ಲ ಎಂದು ದೂರಿದರು..

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವಂತಹ ಮಲ್ಲಶೆಟ್ಟಿಹಳ್ಳಿ, ಕರೀಲಕ್ಕೇನಹಳ್ಳಿ, ಬುಳ್ಳಾಪುರ, ಈಚಘಟ್ಟ, ಜಂಪೇನಹಳ್ಳಿ, ದೊಡ್ಡರಂಗನಹಳ್ಳಿ, ಕೊಡಗನೂರು, ಕಬ್ಬರು, ಬೊಮ್ಮೇನಹಳ್ಳಿ ಹಾಗೂ ಸುಲ್ತಾನಿಪುರ ಈ ಗ್ರಾಮಗಳಿಗೆ ಓಡಾಡುವಂತಹ ಸಾವಿರಾರು ಜನರಿಗೆ, ರೈತರಿಗೆ ಹಾಗೂ ಓಡಾಡುವಂತಹ ವಾಹನಗಳಿಗೆ ಸ್ಥಳವಿಲ್ಲದೆ ಬಹಳ ತೊಂದರೆಯಾಗುತ್ತದೆ. ಈ ಗ್ರಾಮಗಳ ಗ್ರಾಮಸ್ಥರು ಅನಾರೋಗ್ಯದ ಕಾರಣ ತುರ್ತಾಗಿ ಆಸ್ಪತ್ರೆಗೆ ಹೋಗಬೇಕೆಂದು ಸುಮಾರು 2-3 ಕಿಲೋಮೀಟರ್ ಸುತ್ತುವರೆದು ಹೆದ್ದಾರಿಗೆ ಬರಬೇಕಾಗುತ್ತದೆ. ಇದರಿಂದ ಗರ್ಭಿಣಿ ಹೆಣ್ಣುಮಕ್ಕಳ ಹಾಗೂ ಹಿರಿಯ ನಾಗರೀಕರ ಜೀವ ಉಳಿಸುವುದು ಕಷ್ಟಕರವಾಗಿರುತ್ತದೆ. ಗ್ರಾಮಗಳಲ್ಲಿ ಯಾರಾದರೂ ವಿಷ ಕುಡಿದರೆ, ಹಾವು ಕಚ್ಚಿದರೆ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಎಂದು ದೂರಿದರು