POWER SAMACHARA | KANNADA NEWS | BREKING NEWS| 12-06-2023

ಶಕ್ತಿ ಯೋಜನೆ ಎಫೆಕ್ಟ್..!

ದಾವಣಗೆರೆ: ಒಂದೆಡೆ ಶಕ್ತಿ ಯೋಜನೆಯಿಂದ ಮಹಿಳೆಯರು ಫುಲ್ ಖುಷಿಯಾಗಿದ್ದಾರೆ, ಆದರೆ ಖಾಸಗಿ ಬಸ್ ಮಾಲೀಕರು ಸಂಕಷ್ಠದಲ್ಲಿ ಸಿಲುಕಿದ್ದಾರೆ. ನಿತ್ಯ ತುಂಬುತ್ತಿದ್ದ ಬಸ್ ಇಂದು ಖಾಲಿ ಖಾಲಿಯಾಗಿದೆ, ದಾವಣಗೆರೆ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳಲ್ಲಿ ಜನ ಹತ್ತದೇ ಇರುವುದರಿಂದ ಸಂಚರಿಸದೇ ಹಾಗೇ ನಿಂತಿದೆ, ಇದ್ದಿದ್ದರಿಂದ ಬೀದಿಗೆ ಬರುವಂತಾಗಿದೆ..

ಹೌದು.. ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ ಶಕ್ತಿ ಯೋಜನೆ ಜಾರಿ ಮಾಡಿದೆ, ಮಹಿಳೆಯರು ಖುಷಿ ಖುಷಿಯಾಗಿ ಬಸ್ ನಲ್ಲಿ ಫ್ರೀಯಾಗಿ ಪ್ರಯಾಣ ಮಾಡ್ತಿದ್ದಾರೆ, ಆದರೆ ಈ ಯೋಜನೆಯಿಂದ ಕೆಲವರ ಬಾಳು ಬೀದಿಗೆ ಬರುವಂತೆ ಆಗಿದೆ, ಸರ್ಕಾರಿ ಬಸ್ ಫ್ರೀ ಇರೋದ್ರಿಂದ ಮಹಿಳೆಯರು ಖಾಸಗಿ ಬಸ್ ನತ್ತ ಬರಿತ್ತಿಲ್ಲ, ಆಟೋನೂ ಹತ್ತುತ್ತಿಲ್ಲ.

ತಡವಾದ್ರು ಪರವಾಗಿಲ್ಲ ಸರ್ಕಾರಿ ಬಸ್ ಗೆ ಹೋಗ್ತಿವಿ

ಪುರುಷರು ಬಹುತೇಕ, ಬೈಕ್ ಕಾರನಲ್ಲಿ ಪ್ರಯಾಣ ಮಾಡ್ತಾರೆ, ಬಸ್, ಆಟೋಗಳಲ್ಲಿ ಮಹಿಳೆಯರು ಪ್ರಮುಖ ಪ್ರಯಾಣಿಕರಾಗಿದ್ದರು, ಆದರೆ ಶಕ್ತಿ ಯೋಜನೆಯಿಂದ ಮಹಿಳೆಯರು ಬಸ್ ಆಟೋ ಹತ್ತಿಲ್ಲ, ತಡವಾದ್ರು ಪರವಾಗಿಲ್ಲ, ಸರ್ಕಾರಿ ಬಸ್ ನ್ನೆ ಹತ್ತೋಣ ಅಂತಾ ಕೆಎಸ್ ಆರ್ ಟಿಸಿಯತ್ತ ಮುಖ ಮಾಡ್ತಾ ಇದ್ದಾರೆ, ಅಷ್ಟೆ ಅಲ್ಲ, ಖಾಸಗಿ ಬಸ್ ನಿಲ್ದಾಣದಲ್ಲಿ ಹಣ್ಣು, ಹೂ, ಹೊಟೆಲ್ ಅಂಗಡಿಗಳು ಕೂಡ ಖಾಲಿ ಹೊಡೆಯುತ್ತಿವೆ, ಇದ್ರಿಂದ ಅಂಗಡಿ ಮುಗ್ಗಟ್ಟುಗಳು ಸಹ ಸಂಕಷ್ಠದಲ್ಲಿ ಸಿಲುಕುತ್ತಿವೆ..

ಒಟ್ಟಾರೆ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲ ಆಗಿದೆ, ಆದ್ರೆ ಖಾಸಗಿ ಬಸ್ ಮಾಲೀಕರಿಗೆ, ಆಟೋ ಚಾಲಕರು ನಷ್ಠದ ಸುಳಿಗೆ ಸಿಲುಕುತ್ತಾ ಇದ್ದು, ಈ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ..