POWER SAMACHARA | KANNADA NEWS | BREKING NEWS| 25-07-2023..

ದಾವಣಗೆರೆ : ಸ್ವಗ್ರಾಮದಲ್ಲೇ ಶಾಸಕ ಶಿವಗಂಗಾ ಬಸವರಾಜ್ ಅವರಿಗೆ ಜನರು ಘೇರಾವ್ ಹಾಕಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇ ಕೋಗಲೂರು ಗ್ರಾಮದಲ್ಲಿ ನಡೆದಿದೆ..

ಶಾಸಕರ ಕಾರನ್ನು ಬಿಡದೇ ಮುಂದೆ ನಿಂತು ಶಾಸಕರಿಗೆ ದಿಕ್ಕಾರ ಕೂಗಿ ಜನರು ಆಕ್ರೋಶ ವ್ಯಕ್ತಪಡಿಸಿ, ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸುವಂತೆ ಆಗ್ರಹಿಸಿದ್ದಾರೆ..

ಜನರ ಪ್ರತಿಭಟನೆಗೆ ತಬ್ಬಿಬ್ಬಾದ ಶಾಸಕ ಶಿವಗಂಗಾ ಬಸವರಾಜ್...

ಸರ್ವೇ ನಂಬರ್ 46ರಲ್ಲಿ ನಿರಾಶ್ರಿತರು ಗುಡಿಸಲು ಹಾಕಿಕೊಂಡಿದ್ದರು, ನಿರಾಶ್ರಿತರಿಗೆ ಮಂಜೂರು ಮಾಡಿದ್ದ ಜಾಗದಲ್ಲಿ 20 ಅಡಿಯಷ್ಟು ಗುಂಡಿ ಹೊಡೆದು ಕೆರೆ ನಿರ್ಮಾಣ ಮಾಡಲಾಗುತ್ತಿದೆ, ಆದ್ದರಿಂದ ದೇವರ ಜಮೀನಿನಲ್ಲೇ ನಿರಾಶ್ರಿತರು ಗುಡಿಸಲು ಹಾಕಿಕೊಂಡಿದ್ದರು..

ಚುನಾವಣಾ ಪೂರ್ವದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ನೀಡಿದ್ದರು, ಈಗ 46ರ ಬದಲು ಸರ್ವೇ ನಂಬರ್ 81ರಲ್ಲಿ ನಿವೇಶನ ಕೊಡುವುದಾಗಿ ಶಾಸಕ ಬಸವರಾಜ್ ಹೇಳುತ್ತಿದ್ದಾರೆ, ಸ್ಮಶಾನದ ಪಕ್ಕದಲ್ಲಿ ನಿವೇಶನ ನೀಡಿದರೆ ಹೇಗೆ ಎಂದು ನಿರಾಶ್ರಿತರು ಪ್ರಶ್ನೆ ಮಾಡಿದ್ದಾರೆ, ನಮಗೆ ಸರ್ವೇ ನಂಬರ್ 46ರಲ್ಲೇ ನಿವೇಶನ ನೀಡುವಂತೆ ಜನರು ಪಟ್ಟು ಹಿಡಿದು ಕಾರ್ ಅಡ್ಡಗಟ್ಟ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.