POWER SAMACHARA | KANNADA NEWS | BREKING NEWS| 11-08-2023..

ದಾವಣಗೆರೆ: ವಿಧಾನಸಭೆ ಚುನಾವಣೆಯ ಗೆಲುವಿನ ನಾಗಲೋಟದಲ್ಲಿರುವ ಕಾಂಗ್ರೆಸ್, ಸದ್ಯ ಭಾರೀ ಉತ್ಸಾಹದಲ್ಲಿದೆ, ಆಪರೇಷನ್ ಕಮಲಕ್ಕೆ ಠಕ್ಕರ್ ಕೊಟ್ಟು ಆಪರೇಷನ್ ಹಸ್ತ ಮಾಡುವ ಮೂಲಕ ದಾವಣಗೆರೆ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಚುಕ್ಕಾಣಿ ಹಿಡಿದಿದೆ..

ದಾವಣಗೆರೆ ನಗರದ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ತೆರಿಗೆ- ಹಣಕಾಸು, ಆರೋಗ್ಯ-ಶಿಕ್ಷಣ, ಪಟ್ಟಣ ಯೋಜನೆ-ಸುಧಾರಣೆ, ಲೆಕ್ಕಪತ್ರ ಸ್ಥಾಯಿ ಸಮಿತಿ ಸೇರಿ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು..

ಆಪರೇಷನ್ ಹಸ್ತ, ಬಿಜೆಪಿ ನಿರ್ಲಕ್ಷ್ಯ..!

ಕಳೆದ ಭಾರೀ ಮೇಯರ್ ಸ್ಥಾನ ಎಸ್ ಟಿ ಗೆ ಮೀಸಲಾಗಿದ್ದರಿಂದ ಬಹುಮತ ಇದ್ದರು ಸಹ ಅಭ್ಯರ್ಥಿ ಇಲ್ಲದೇ ಮೇಯರ್ ಸ್ಥಾನವನ್ನ ಬಿಜೆಪಿ ಕಳೆದುಕೊಂಡಿತ್ತು, ಬಳಿಕ ಕಾಂಗ್ರೆಸ್ ಕಾರ್ಪೊರೇಟರ್ ವಿನಾಯಕ್ ಪೈಲ್ವಾನ್ ರನ್ನ ಸೆಳೆದು ಬೆಂಬಲ ನೀಡಿತ್ತು. ಈ ಹಿಂದೆಯೂ ಸಹ ಆಪರೇಷನ್ ಕಮಲ ನಡೆಸಿ ಕಾರ್ಪೋರೇಟರ್ ಸಂಖ್ಯೆ ಹೆಚ್ಚಿಗೆ ಮಾಡಿಕೊಂಡು, ಎಂಎಲ್ ಸಿ, ಎಂಪಿ, ಎಂಎಲ್ ಎ ಮತದಾನದಿಂದ ಮೂರು ಭಾರೀ ಅಧಿಕಾರದ ಚುಕ್ಕಾಣಿಯನ್ನ ಬಿಜೆಪಿ ಹಿಡಿದಿತ್ತು. ಸದ್ಯ ವಿನಾಯಕ್ ಪೈಲ್ವಾನ್ ಅವರು ಬಿಜೆಪಿ ಬೆಂಬಲದಿಂದ ಮೇಯರ್ ಆಗಿದ್ದರು, ಆದರೆ ಚುನಾವಣೆಯಿಂದ ಹಿಂದೆ ಸರಿದ ಕಾಂಗ್ರೆಸ್ ನಮ್ಮ ಕಾರ್ಪೋರೇಟರ್ ವಿನಾಯಕ್ ಪೈಲ್ವಾನ್ ರಿಗೆ ಬೆಂಬಲ ಎಂದು ಘೋಷಣೆ ಮಾಡಿದ್ದರಿಂದ ಹೈಡ್ರಾಮ ಕ್ರಿಯೇಟ್ ಆಗಿತ್ತು, ಸದ್ಯ ಮೇಯರ್ ಯಾವ ಪಕ್ಷ ಎಂಬ ಗೊಂದಲದಲ್ಲೇ ಮುಂದೆ ಹೋಗ್ತಿದೆ, ಕಾಂಗ್ರೆಸ್ ನ ಗಡಿಗುಡಾಳ್ ಮಂಜುನಾಥ್ ಅವರು ವಿಪಕ್ಷ ನಾಯಕರಾಗಿ ಮುಂದುವರೆದಿದ್ದಾರೆ..

ಪಾಲಿಕೆಯಲ್ಲಿ ಬಿಜೆಪಿ ಬಲಾಬಲ

ಸದಸ್ಯರು : 22(2 ಪಕ್ಷೇತರ ಸೇರಿ) ಎಂಎಲ್ ಸಿ: 5 ಎಂಪಿ : 1

ಒಟ್ಟು= 28

ಕಾಂಗ್ರೆಸ್ ಬಲಾಬಲ

ಸದಸ್ಯರು :22(3 ಪಕ್ಷೇತರ ಸೇರಿ) ಜೆಡಿಎಸ್ : 1 ಎಂಎಲ್ ಎ: 2 ಎಂಎಲ್ ಸಿ: 2 ಒಟ್ಟು= 27

ನಾಲ್ಕು ಸಮಿತಿ ಸ್ಥಾನ ಕಳೆದುಕೊಂಡ ಬಿಜೆಪಿ..!

ನಾಲ್ಕು ಪಕ್ಷೇತರ ಸೇರಿ ಬಿಜೆಪಿ 30ಸ್ಥಾನ ಹೊಂದಿತ್ತು ಓರ್ವ ಪಕ್ಷೇತರ, ಓರ್ವ ಜೆಡಿಎಸ್ ಸೇರಿ ಕಾಂಗ್ರೆಸ್ 25 ಸ್ಥಾನ ಹೊಂದಿತ್ತು. ಆದರೆ ಈ ಹಿಂದೆ ಬಿಜೆಪಿ ಸೇರಿದ್ದ ಇಬ್ಬರು ಪಕ್ಷೇತರಾದ ಜಯ್ಯಮ್ಮ ಗೋಪಿನಾಯ್ಕ್, ಸೌಮ್ಯ ನರೇಂದ್ರ ಮೊನ್ನೆ ಕಾಂಗ್ರೆಸ್ ಸೇರ್ಪಡೆಗೊಂಡ ಹಿನ್ನಲೆ ಬಿಜೆಪಿ 28ಸ್ಥಾನಕ್ಕೆ ಕುಸಿತ ಕಂಡು, ಕಾಂಗ್ರೆಸ್ 27ಸ್ಥಾನಕ್ಕೆ ಏರಿತ್ತು, ಆದರೂ ಸಹ 28ಸ್ಥಾನ ಹೊಂದಿದ್ದ ಬಿಜೆಪಿಗೆ ಸ್ಥಾಯಿ ಸಮಿತಿ ಚುಕ್ಕಾಣಿ ಹಿಡಿಯುವ ಅವಕಾಶ ಇತ್ತು, ಐವರು ಎಂಎಲ್ ಸಿ, ಓರ್ವ ಎಂಪಿ ಗೈರು ಹಿನ್ನಲೆ ಬಿಜೆಪಿ ಸ್ಥಾಯಿ ಸಮಿತಿ ಚುಕ್ಕಾಣಿ ಹಿಡಿದಿದೆ. ಕೊನೆಯಲ್ಲಿ 16 ಕಾಂಗ್ರೆಸ್, 12 ಬಿಜೆಪಿ ಸದಸ್ಯರು ಸ್ಥಾಯಿ ಸಮಿತಿಗೆ ಆಯ್ಕೆಯಾಗಿದೆ, ಹೆಚ್ಚು ಸ್ಥಾನ ಪಡೆದು ನಾಲ್ಕು ಸ್ಥಾಯಿ ಸಮಿತಿಯ ಚುಕ್ಕಾಣಿಯನ್ನ ಕಾಂಗ್ರೆಸ್ ಹಿಡಿದಿದ್ದು, ಸಮಿತಿ ಅಧ್ಯಕ್ಷರ ಆಯ್ಕೆಗೆ ಸರ್ಕಸ್ ಶುರುವಾಗಿದೆ..

ಅಧಿಕಾರ ಅನುಭವಿಸಿ ಕೈ ಕೊಟ್ಟ ಜಯ್ಯಮ್ಮ, ಸೌಮ್ಯ..!

ಈ ಹಿಂದೆ ನಾಲ್ವರು ಪಕ್ಷೇತರರು ಅಂದಿನ ಸಿಎಂ ಬಿಎಸ್ ವೈ ನೇತೃತ್ದಲ್ಲಿ ಬಿಜೆಪಿ ಸೇರಿದ್ದರು, ಬಳಿಕ ಸೌಮ್ಯ ನರೇಂದ್ರ ಅವರಿಗೆ ಉಪಮೇಯರ್ ಹುದ್ದೆ ನೀಡಲಾಗಿತ್ತು, ಕಳೆದ ಅವಧಿಯಲ್ಲಿ ಪಕ್ಷೇತರರಾಗಿದ್ದರು ಸಹ ಜಯ್ಯಮ್ಮ ಗೋಪಿನಾಯ್ಕ್ ಅವರಿಗೆ ಮೇಯರ್ ಹುದ್ದೆ ನೀಡಲಾಗಿತ್ತು, ಆದರೆ ಅಧಿಕಾರ ಅನುಭವಿಸಿ ಈ ಇಬ್ಬರು ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಹೆಸರು ಹೇಳದ ಬಿಜೆಪಿ ಮುಖಂಡರು ದೂರಿದ್ದಾರೆ..