POWER SAMACHARA | KANNADA NEWS | BREKING NEWS| 04-07-2023..

ದಾವಣಗೆರೆ: ಹೀಗಂತು ಬರ್ತ್ ಡೇ ಗಳೇ ದೊಡ್ಡ ದೊಡ್ಡ ಹಬ್ಬಗಳಂತೆ ಆಚರಣೆ ಆಗ್ತಿವೆ, ಜೊತೆಗೆ ಮೋಜು ಮಸ್ತಿಗಳು ನಡೆಯುತ್ತವೆ, ಅದರಲ್ಲೂ ಮಕ್ಕಳ ಜನ್ಮದಿನ ಅಂದರೆ ಕೇಳ್ತಿರಾ ಮನೆಯಲೆಲ್ಲ ಸಡಗರ, ಸಂಭ್ರಮ, ಆದರೆ ಬೆಣ್ಣೆನಗರಿಯ ಕಾರ್ಪೋರೇಟರ್ ಒಬ್ಬಾತ ತನ್ನ ಪುಟಾಣಿ ಮಗಳ ಬರ್ತ್ ಡೇ ಸೆಲೆಬ್ರೆಷನ್ ಮಾಡದೇ ಯುವತಿಗೆ ಆಸರೆಯಾಗಿ ಮಾದರಿಯಾಗಿದ್ದಾರೆ.

ಯೆಸ್.. ನಿಜ ಈಗ ರಾಷ್ಟ್ರೀಯ ಹಬ್ಬ, ಗ್ರಾಮದ ಹಬ್ಬಗಳು ಮತ್ತೊಂದು ಹಬ್ಬಗಳು ಕಳೆ ಕಳೆದುಕೊಂಡು ಬಿಟ್ಟಿವೆ, ಬದಲಿಗೆ ಹುಟ್ಟುಗಳನ್ನೆ ಅದ್ದೂರಿಯಾಗಿ ಹಬ್ಬಗಳಂತೆ ಆಚರಿಸಿಕೊಳ್ಳುವ ಟ್ರೆಂಡಿಂಗ್ ಶುರುವಾಗಿ ಬಿಟ್ಟಿದೆ, ಅದರಲ್ಲೂ ಮಕ್ಕಳ ಬರ್ತ್ ಡೇ ಗಳು ಕಂಪಲ್ ಸರಿ ಆಚರಣೆ ಆಗೇ ಆಗುತ್ತವೆ, ಆದರೆ ದಾವಣಗೆರೆ ನಗರದ ಶೇಖರಪ್ಪ ನಗರದಲ್ಲಿ ಮಾತ್ರ ಕಾರ್ಪೋರೇಟರ್ ಆರ್ ಎಲ್ ಶಿವಪ್ರಕಾಶ್, ಮಕ್ಕಳ ಬರ್ತ್ ಡೇಯನ್ನ ಸಾರ್ಥಕಗೊಳಿಸಿದ್ದಾರೆ, ಕಷ್ಟದಲ್ಲಿದ್ದ ಯುವತಿಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಕ್ಯಾನ್ಸರ್ ನಿಂದ ಕಂಗಲಾದ 'ಶಾಂತಿ'

ದಾವಣಗೆರೆ ನಗರದ ನಿಟ್ಟುವಳ್ಳಿಯ ಶ್ರೀ ರಾಮ ಬಡಾವಣೆ ನಿವಾಸಿ ಬಸವರಾಜ್ ಅವರ ಪುತ್ರಿ ಶಾಂತಿಗೆ ಈಗ ಇನ್ನೂ 16 ವಯಸ್ಸು. ಬಾಳಿ ಬದುಕ ಬೇಕಾದ ಜೀವನ. ಓದಬೇಕು ಜೊತೆಗೆ ಬೆಟ್ಟದಷ್ಟು ಸಾಧನೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡಿದ್ದ ಜೀವಕ್ಕೆ ಕ್ಯಾನ್ಸರ್ ಎಂಬ ಪೆಡಂ ಭೂತ ವಕ್ಕರಿಸಿತ್ತು, ತಂದೆ -ತಾಯಿ ಕೂಲಿ ಕಾರ್ಮಿಕರು. ಶಾಂತಾಗೆ ಈ ಕೆಟ್ಟ ಕಾಯಿಲೆ ಬಂದಿದ್ದು ಇಡೀ ಕುಟುಂಬದಲ್ಲಿ ಅಶಾಂತಿಗೆ ಕಾರಣವಾಗಿತ್ತು, ಪ್ರಮುಖವಾಗಿ ಚಿಕಿತ್ಸೆಗೆ ಹಣ ಜೋಡಿಸುವುದು ಸವಾಲಿನ ಕೆಲಸವಾಗಿತ್ತು, ಚಿಕಿತ್ಸೆ ಹಣ ಕೂಡಿಸುವುದು ಇರಲಿ ಬಸ್ ಚಾರ್ಜಗೂ ಪರದಾಡುವ ಸ್ಥಿತಿ ಎದುರಾಗಿತ್ತು, ಇಂತಹ ಕುಟುಂಬದ ನೆರವಿಗೆ ನಿಂತವರೇ ಪಾಲಿಕೆ ಸದಸ್ಯ ಶಿವಪ್ರಕಾಶ್, ಇದ್ದಕ್ಕಿದ್ದಂತೆ ಮನೆಗೆ ಬಂದು ಒಂದು ಲಕ್ಷ ರೂಪಾಯಿ ನೀಡಿದ್ದಾರೆ, ಇದರಿಂದ ಆ ಬಡ ಕುಟುಂಬಕ್ಕೆ ಆಶ್ಚರ್ಯ ಹಾಗೂ ಆನಂದ ಏಕಕಾಲಕ್ಕೆ ಆಗಿದೆ.

ಮಣಿಪಾಲ್ ನಲ್ಲಿ ಚಿಕಿತ್ಸೆ..!

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಾಂತಳ ನೆರವಿಗೆ ನಿಲ್ಲಿ ಎಂದು ವಿಡಿಯೋ ಒಂದು ವೈರಲ್ ಆಗಿತ್ತು, ಆ ವಿಡಿಯೋ ನೋಡಿದ ಶಿವಪ್ರಕಾಶ್, ತನ್ನ ಮಗಳು ಅವಿನ್ಯಾ ರಚನಾ ನಾಯ್ಕ್ ರ ಮೊದಲನೇ ವರ್ಷದ ಹುಟ್ಟು ಹಬ್ಬಕ್ಕೆ ಒಂದೊಳ್ಳೆ ಸಾರ್ಥಕ ಕೆಲಸ ಮಾಡಬೇಕು ಅಂದುಕೊಂಡಿದ್ದರು, ಅಂದುಕೊಂಡತೆ ಕುಟುಂಬದ ಜೊತೆ ಶಾಂತಳ ಮನೆಗೆ ಆಗಮಿಸಿದ ಶಿವಪ್ರಕಾಶ್, ಒಂದು ಲಕ್ಷ ರೂಪಾಯಿ ನೀಡಿ ಚಿಕಿತ್ಸೆಗೆ ನೆರವಾಗಿದ್ದಾರೆ, ಇನ್ನೂ ಹಣ ಪಡೆದ ಶಾಂತ ಮತ್ತವರ ಕುಟುಂಬ, ಮಣಿಪಾಲ್ ಆಸ್ಪತ್ರೆಗೆ ತೆರಳಿ ಶಾಂತಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಮಗನ ಜನ್ಮದಿನದಂದು ಮನೆ ಕಟ್ಟಿಸಿಕೊಟ್ಟಿದ್ದ ಶಿವಪ್ರಕಾಶ್..!

ಇನ್ನೂ ಶಿವಪ್ರಕಾಶ್ ತನ್ನ ಕಳೆದ ವರ್ಷ ಮೊದಲ ಮಗನ ಜನ್ಮದಿನ ಸಂದರ್ಭದಲ್ಲಿ ವೃದ್ದ ದಂಪತಿಗಳಿಗೆ ಮನೆ ಕಟ್ಟಿಸಿಕೊಟ್ಟಿದ್ದರು, ಈಗ ಪುತ್ರಿಯ ಬರ್ತ್ ಡೇ ಹಿನ್ನಲೆ ಕಷ್ಟದಲ್ಲಿದ್ದ ಬಾಲಕಿಗೆ ಸಹಾಯ ನೀಡುವ ಮೂಲಕ ಜನ್ಮದಿನ ಸಾರ್ಥಕಗೊಳಿಸಿದ್ದು ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ..