POWER SAMACHARA | KANNADA NEWS | BREKING NEWS| 17-06-2023..

ದಾವಣಗೆರೆ: ಮಾವ ಶಾಮನೂರು ಶಿವಶಂಕರಪ್ಪ ಫಂಡ್ ಕೊಟ್ಟರೆ ಪಡೆಯುವೆ, ನಾನೇ ದಾವಣಗೆರೆ ಲೋಕಸಭೆ ಕ್ಷೇತ್ರದ ಕ್ಯಾಂಡಿಡೇಟ್, ನನ್ನ ಮಾವ ನಾಲ್ಕು ಭಾರೀ ನನ್ನ ಸೋಲು ನೋಡುತ್ತಾ ಬಂದಿದ್ದಾರೆ, ಈ ಭಾರೀಯೂ ಸೋಲು ನೋಡಲಿ ಎಂದು ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ ಕುಹುಕವಾಡಿದ್ದಾರೆ.

ದಾವಣಗೆರೆ ನಗರದ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಮಾತನಾಡಿದ ಅವರು, ಹಿರಿಯರು ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಏನು ಹೇಳಿದರು ನನಗೆ ಆಶೀರ್ವಾದವೇ ಆಗಿದೆ, ಹೌದು ಶಾಮನೂರು ಶಿವಶಂಕರಪ್ಪನವರು ನನ್ನ ಮಾವ, ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಅವರು ಫಂಡ್ ನೀಡುತ್ತೇನೆ ಎಂದು ಹೇಳಿದ್ದಾರೆ, ಫಂಡ್ ನೀಡಿದರೆ ಖಂಡಿತವಾಗಿ ಪಡೆದುಕೊಳ್ಳುವೆ, ಶಿವಶಂಕರಪ್ಪನವರು ನನ್ನ ಸೋಲು ನೋಡಬೇಕು ಎಂದು ಹೇಳಿರುವುದೇ ನನಗೆ ಆಶೀರ್ವಾದ. ೨೦೧೯ ರವರೆಗೂ ಆಶೀರ್ವಾದ ಮಾಡಿದ್ದಾರೆ ಮುಂದೆಯೂ ಅವರ ಆಶೀರ್ವಾದ ನನ್ನ ಮೇಲಿರಲಿದೆ, ೨೦೦೪ ರಿಂದ ನಾನು ಸೋಲುವುದು ನೋಡಿಕೊಂಡು ಬರುತ್ತಿದ್ದಾರೆ ಮುಂದೆಯೂ ಸೋಲುವುದು ನೋಡುತ್ತಾರೆ ಎಂದು ರಿವರ್ಸ್ ಟಾಂಗ್ ನೀಡಿದರು..

ನನ್ನ ಸ್ಪರ್ಧೆಗೆ ಹಿರಿಯರಿಂದ ಒತ್ತಡ..!

ಈ ಹಿಂದೇ ನಾನು ಚುನಾವಣೆಗೆ ಸ್ಪರ್ಧೆ ನಡೆಸಲ್ಲ ಎಂದು ಹೇಳಿದ್ದೆ, ಆದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಆರ್ ಅಶೋಕ್ ನನ್ನನ್ನು ಕರೆಸಿದ್ದರು, ಆಗ ಚುನಾವಣೆಗೆ ನಿಲ್ಲಲ್ಲ ಎಂದೇ, ಈ ಭಾರೀ ಸ್ಪರ್ಧೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ, ಹೀಗಾಗಿ ಹಿರಿಯರ ಮಾತಿನಂತೆ ನಾನು ಸ್ಪರ್ಧೆ ಮಾಡಲು ಒಪ್ಪಿದ್ದೇನೆ..ಆದರೆ ಪತ್ರಿಕೆಗಳಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು..

ಟಿಕೆಟ್ ತಡವಾಗಿದ್ದೆ ಸೋಲಿಗೆ ಕಾರಣ..

ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಾಗೂ ಪಕ್ಷದಿಂದ ಟಿಕೇಟ್ ಬೇಗ ಹಂಚಿದ್ದರೆ ನಾವು ಕೂಡ ಗೆಲ್ಲುತ್ತಿದ್ದೆವು ಇದರಿಂದ ನಮಗೆ ಹಿನ್ನೆಡೆಯಾಗಿದೆ ನಾವೆಲ್ಲಾ ಒಮ್ಮತದಿಂದ ಕೆಲಸ ಮಾಡಿದ್ದೇವೆ. ಪ್ರಚಾರಕ್ಕೆ ಎಲ್ಲಾ ಕಡೆ ತೆರಳಿದ್ದೇನೆ. ಮೊದಲಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ ಎಂದರು. ಜಿಲ್ಲೆಯಲ್ಲಿ ಕಾಂಗ್ರೆಸ್ ನ ಆರು ಶಾಸಕರಿದ್ದಾರೆ, ೨೦೧೩ ರಲ್ಲಿ ಬಿಜೆಪಿ ಸರ್ಕಾರ ಇರಲಿಲ್ಲ ತಾ.ಪಂ ಜಿ.ಪಂ ಹಾಗೂ ಪಾಲಿಕೆ ಸದಸ್ಯರು ಇರಲಿಲ್ಲ ಅಂತಹ ವೇಳೆ ಬಹಳ ಅಂತರದಿಂದ ಗೆದ್ದಿದ್ದೇನೆ. ಮೋದಿ ಹವಾದಿಂದ ಗೆದ್ದಿದ್ದೇನೆ ಎನ್ನುತ್ತಾರೆ. ನಮ್ಮ ತಂದೆಯವರಿದ್ದಾಗ ಯಾವ ಹವಾ ಇತ್ತು, ಎಸ್ ಎಸ್ ಅವರನ್ನೇ ಕೇಳಿ ಎಂದ ಅವರು, ಈ ಚುನಾವಣೆಯಲ್ಲಿ ಅವರು ಯಾವ ಹವಾದಿಂದ ಗೆದ್ದಿದ್ದಾರೆ ಎಂದು ಪ್ರಶ್ನಿಸಿದರು.

ಸೋತಾಗಾ ಎಲ್ಲರೂ ಕಲ್ಲು ಹೊಡೆಯುವುದು ಸಹಜ. ಸೋಲು ಗೆಲುವು ಸಹಜ ಮುಂದೆ ಮತ್ತೆ ಗೆಲುವು ಸಾಧಿಸಲಿದ್ದೇವೆ. ವಿದ್ಯುತ್ ಹೊರೆ ಜನತೆಯ ಮೇಲೆ ಆಗುತ್ತಿದೆ. ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ನವರು ಡಬಲ್ ಗೇಮ್ ಮಾಡುತ್ತಿದ್ದಾರೆ. ಐದು ಗ್ಯಾರಂಟಿ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದರು..

22 ರಿಂದ ಬಿಎಸ್ ವೈ ದಾವಣಗೆರೆಯಲ್ಲಿ ಪ್ರಚಾರ..

ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿಲ್ಲ. ಅವರು ರಾಜ್ಯದಲ್ಲಿ ಮತ್ತೆ ಪ್ರಚಾರ ಆರಂಭಿಸಲಿದ್ದಾರೆ. 22 ರಂದು ದಾವಣಗೆರೆಗೆ ಆಗಮಿಸಿ ಸಭೆ ನಡೆಸಲಿದ್ದಾರೆ, ಅವರು ಹಿರಿಯರು ಬಿಜೆಪಿಯಲ್ಲಿ ಅವರಿಗೆ ಗೌರವವಿದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆದಿರುವ ಕಾಮಗಾರಿಗಳು ಸಾಕಷ್ಟು ಕಳಪೆಯಾಗಿವೆ ಎಂಬ ದೂರು ಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳಪೆ ಕಾಮಗಾರಿಯಾಗಿದ್ದರೆ ತನಿಖೆ ಮಾಡಿಸಲಿ, ಈ ಹಿಂದೇ ನನ್ನ ಅವಧಿಯಲ್ಲಿ ಬೇಕಂತಲೇ ಕಾಂಗ್ರೆಸ್ ನವರು ಕಳಪೆ ಕಾಮಗಾರಿ ಮಾಡಿಸಿದ್ದರು ಎಂದು ಆರೋಪಿಸಿದರು..