POWER SAMACHARA | KANNADA NEWS | BREKING NEWS| 28-08-2023..

ದಾವಣಗೆರೆ: ಕೆಲ ಬಿಜೆಪಿ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿರುವ ಹಿನ್ನಲೆ ದಾವಣಗೆರೆಯಲ್ಲಿ ಮಾತನಾಡಿರುವ ಸಂಸದ ಜಿಎಂ ಸಿದ್ದೇಶ್ವರ್, ಪಕ್ಷ ತೊರೆದು ಹೋಗುವವರು ಹೋಗಲಿ ಬರುವವರು ಬರಲಿ, ಅದು ರಾಜ್ಯಕ್ಕೆ ಆಗಲಿ ಜಿಲ್ಲೆಗೆ ಆಗಲಿ ಕೈ ಮುಗಿದು ಕಳುಹಿಸಿ ಕೊಡುತ್ತೇವೆ ಎಂದಿದ್ದಾರೆ..

ದಾವಣಗೆರೆ ನಗರದ ಜಿಎಂ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ ಸಂಸದ ಜಿಎಂ ಸಿದ್ದೇಶ್ವರ್, ಕುಂದುವಾಡ ಕೆರೆ ಅಭಿವೃದ್ಧಿಗೆ 15 ಕೋಟಿ ಬಳಸಿ ಅವ್ಯವ್ಯಹಾರ ಎಸಗಿದ್ದಾರೆ ಎಂಬ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಉತ್ತರ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ, ಇದೀಗ ರವೀಂದ್ರನಾಥ್ ಕೂಡ ಅವರ ಸ್ನೇಹಿತರಾಗಿದ್ದಾರೆ, ಹೀಗಾಗಿ ಬಿಜೆಪಿ ಮಾಜಿ ಶಾಸಕ ಎಸ್ ಎ ರವೀಂದ್ರನಾಥ್ ಅವರನ್ನ ಕೇಳಿ, ಈ ಹಿಂದೆ ಎಸ್ ಎ ರವೀಂದ್ರನಾಥ್ ಉತ್ತರ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದರು, ಇತ್ತೀಚೆಗೆ ಮಾಜಿ ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ್ ಶಾಮನೂರು ಫ್ಯಾಮಿಲಿ ಜೊತೆ ಗುರುತಿಸಿಕೊಳ್ಳುತ್ತಿರುವುದಕ್ಕೆ ವ್ಯಂಗ್ಯವಾಡಿದ್ದಾರೆ ಎನ್ನಲಾಗಿದೆ,

ಶಾಮನೂರು ಕುಟುಂಬ ಸಂಸದ ಸಿದ್ದೇಶ್ವರ ಸೋಲಿಸುತ್ತೇವೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿದ್ದೇಶ್ವರ್, ನನ್ನ ಸೋಲಿಸಬೇಕು ಅಂತ ಹಿಂದಿನಿಂದಲೂ ಟಾರ್ಗೆಟ್ ಮಾಡಿಕೊಂಡು ಬರುತ್ತಿದ್ದಾರೆ, ಅವರು ಸೋಲಿಸಬೇಕು ಅಂದಾಗಲೂ 4 ಬಾರಿ ಗೆದ್ದಿದ್ದೇನೆ, ಅವರದೇ 7 ಜನ ಶಾಸಕರು ಇದ್ದಾಗ, ಅವರ ಸರ್ಕಾರವಿದ್ದಾಗ ಗೆದ್ದು ಬಂದಿದ್ದೇನೆ, ಈಗಲೂ ನಾನು ಗೆದ್ದು ಬರುತ್ತೇನೆ, ಮತ್ತೊಮ್ಮೆ ಬಿಜೆಪಿಯಿಂದ ನನಗೆ ಟಿಕೆಟ್ ಸಿಗುತ್ತೆ ನಾನು ಗೆದ್ದು ಬರುತ್ತೇನೆ ಎಂದು ಜಿಎಂ ಸಿದ್ದೇಶ್ವರ್ ತಿಳಿಸಿದ್ದಾರೆ..