POWER SAMACHARA | KANNADA NEWS | BREKING NEWS| 14-07-2023..

ದಾವಣಗೆರೆ: ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿ ವಿಚಾರಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್ ಟಾಂಗ್ ನೀಡಿದ್ದಾರೆ, ರೇಣುಕಾಚಾರ್ಯ ಎಂಪಿ ಸ್ಥಾನಕ್ಕೆ ಬಂದರೆ ನಾನು ಹೊನ್ನಾಳಿ ಎಂಎಲ್ ಎ ಸ್ಥಾನಕ್ಕೆ ಹೋಗುತ್ತೇನೆ, ಹೊನ್ನಾಳಿಯಲ್ಲಿ ಗೆದ್ದು ಮಂತ್ರಿಯಾಗುತ್ತೇನೆ ಎಂದು ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ..

ರೇಣುಕಾಚಾರ್ಯ ಎಂಪಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಾ ಹೋಗುತ್ತಿದ್ದಾರೆ, ಎಲ್ಲರಿಗೂ ಆಸೆ ಇರುತ್ತೆ ತಪ್ಪೇನಿಲ್ಲ, ಪಕ್ಷ ತೀರ್ಮಾನ ಮಾಡುತ್ತೆ, ಮುಂಚೆಯೆ ಟಿಕೆಟ್ ಘೋಷಣೆ ಮಾಡಬೇಕು ಎಂದು ರೇಣುಕಾಚಾರ್ಯ ಹೇಳಿರುವುದು ಒಳ್ಳೆಯ ಬೆಳವಣಿಗೆ ಎಂದರು..

ಎಂಪಿ VS ಎಂಪಿ..!

ಎಂಪಿ ರೇಣುಕಾಚಾರ್ಯ ಲೋಕಸಭೆಗೆ ಬಂದರೆ ಹೊನ್ನಾಳಿಯಲ್ಲಿ ಸ್ಥಾನ ಖಾಲಿ ಆಗುತ್ತೆ ಅದನ್ನೂ ಭರ್ತಿ ಮಾಡಬೇಕಿದೆ, ಆ ಸ್ಥಾನವನ್ನು ನಾನು ತುಂಬುತ್ತೇನೆ, ಹೊನ್ನಾಳಿಯಲ್ಲಿ ನಮ್ಮ ಜನ ಬಹಳ ಇದ್ದಾರೆ, ನಾನು ಅಲ್ಲಿ ಸ್ಪರ್ಧೆ ಮಾಡಬೇಕು ಎಂದು ಬಹಳ ಜನ ಅಪೇಕ್ಷೆ ಪಡುತ್ತಾ ಇದ್ದಾರೆ, ಪಕ್ಷ ತೀರ್ಮಾನಕ್ಕೆ ಬದ್ದ ಎಂದು ಎಂಪಿ ಜಿಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ..

ಎಂಪಿ ರೇಣುಕಾಚಾರ್ಯಗೆ ಎಂಪಿ ಸ್ಥಾನದ ಮೇಲೆ ಕಣ್ಣು..!

ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ರನ್ನ ಭೇಟಿ ಮಾಡಿ ಮಾಧ್ಯಮದವರ ಜೊತೆ ಮಾತನಾಡಿದ್ದ ಎಂಪಿ ರೇಣುಕಾಚಾರ್ಯ, ಎಲ್ಲಾ ತಾಲ್ಲೂಕುಗಳಲ್ಲಿ ಜನ ಕರೆ ಮಾಡಿ ಲೋಕಸಭೆಗೆ ಸ್ಪರ್ಧೆ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ, ಹೀಗಾಗಿ ನಾನು ಪ್ರಬಲ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದರು, ಈ ಹೇಳಿಕೆ ಬೆನ್ನಲ್ಲೆ ಸಂಸದರ ಕಚೇರಿಯಲ್ಲಿ ಮಾತನಾಡಿರುವ ಜಿಎಂ ಸಿದ್ದೇಶ್ವರ್, ಹೊನ್ನಾಳಿಯಲ್ಲಿ ಈ ಹಿಂದಿನಿಂದಲೂ ಬಹಳ ಜನ ನನಗೆ ಒತ್ತಡ ಹೇರುತ್ತಿದ್ದರು, ಅಲ್ಲಿ ನಮ್ಮ ಜನ ಬಹಳಷ್ಟಿದ್ದಾರೆ, ರೇಣುಕಾಚಾರ್ಯ ಲೋಕಸಭೆಗೆ ಬಂದರೆ, ನಾನು ಹೊನ್ನಾಳಿ ವಿಧಾನಸಭೆಗೆ ಹೋಗುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ..