POWER SAMACHARA | KANNADA NEWS | BREKING NEWS| 06-06-2023

ದಾವಣಗೆರೆ ; ಜನರ ಕಿವಿಗೆ ಹೂ ಇಡಬೇಡಿ, ಕಂಡೀಶನ್ ಹಾಕದೇ ಗ್ಯಾರಂಟಿ ಯೋಜನೆ ಜಾರಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ದಾವಣಗೆರೆಯ ಹೊನ್ನಾಳಿಯಲ್ಲಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ..

ಎಲ್ಲದಕ್ಕೂ ಶರತ್ತು ವಿಧಿಸೋದು ಸರಿಯಲ್ಲ, ಮುಂಚೇ ಶರತ್ತು ಹೇಳದೇ ಗ್ಯಾರಂಟಿ ಘೋಷಣೆ ಮಾಡಿದ್ದೀರಿ, ಯಾವುದು ಶರತ್ತು ಹಾಕದೇ ಯೋಜನೆ ಜಾರಿ ಮಾಡಿ, ಕರೆಂಟ್ ಬಿಲ್, ಅನ್ನಭಾಗ್ಯ, ಬಸ್ ಪ್ರಯಾಣ ಎಲ್ಲದಕ್ಕೂ ಶರತ್ತು ಹಾಕುತ್ತಿದ್ದೀರಿ, ಕೊಟ್ಟು ಮಾತು ಉಳಿಸಿಕೊಳ್ಳಿ, ವಚನ ಭ್ರಷ್ಟರಾಗಬೇಡಿ ಎಂದು ಕಿಡಿಕಾರಿದ್ದಾರೆ..

ಅತ್ತೆ ಸೊಸೆ ಗಲಾಟೆ ಹಚ್ಚಿದ್ದೀರಿ

ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ, ಅದನ್ನ ಬಿಟ್ಟು ನೀವು ಕೊಡಿ, ಗೃಹ ಲಕ್ಷ್ಮಿ ಯೋಜನೆ ಅತ್ತೆ ಸೊಸೆಗೆ ಜಗಳ ಹಚ್ಚಿದ್ದೀರಿ, ಮನೆಗಳಲ್ಲಿ ಅತ್ತೆ ಸೊಸೆ ಗಲಾಟೆ ಶುರುವಾಗಿದೆ, ಬಾಡಿಗೆ ಇದ್ದ ಮನೆಗೂ ಕರೆಂಟ್ ಫ್ರೀ ಕೊಡಿ ಆ ಬಸ್ ಇಲ್ಲ, ಈ ಬಸ್ ಫ್ರೀ ಇಲ್ಲ ಎಂದು ಕಂಡೀಶನ್ ಆಗಿದ್ದೀರಿ, ಮುಂಚೆ ಎಸಿ ಬಸ್ ಇಲ್ಲ ಅಂತಾ ಹೇಳಿದ್ರಾ, ಯಾವುದೇ ಶರತ್ತು ಹಾಕಲೇ ಬೇಡಿ ಎಂದಿದ್ದಾರೆ.

ನನಗೆ ನನ್ನ ಕುಟುಂಬಕ್ಕೆ ಫ್ರೀ ಯೋಜನೆ ಬೇಡ..

ಹಾಲಿಗೆ ಪ್ರೋತ್ಸಾಹ ಧನ ಕಡಿತ ಮಾಡಿದ್ದೀರಿ, ಜನರ ಮೇಲೆ ಹೆಚ್ಚಿನ ತೆರಿಗೆ ಹಾಕಬೇಡಿ, ಪಾಕಿಸ್ತಾನ, ಶ್ರೀಲಂಕಾ ಬರ್ಬಾದ್ ಆಗೋ ತರ ಆಗೋದು ಬೇಡ, ನನಗೆ ನನ್ನ ಕುಟುಂಬಕ್ಕೆ ಫ್ರೀ ಯೋಜನೆ ಬೇಡ, ಬಡವರಿಗೆ ಸಿಗಲಿ ಎಂದು ರೇಣುಕಾಚಾರ್ಯ ಘೋಷಣೆ ಮಾಡಿದ್ದಾರೆ..