<strong style="color: #212121; font-size: 1.25em;">POWER SAMACHARA | KANNADA NEWS | BIG BREKING NEWS|16-06-2023</strong> <h4><strong>ದಾವಣಗೆರೆ :</strong> ಪಕ್ಷ ಕಟ್ಟಿ ಬೆಳೆಸಿದ್ದ ಬಿಎಸ್ ಯಡಿಯೂರಪ್ಪರನ್ನ ಸಿಎಂ ಖುರ್ಚಿಯಿಂದ ಕೆಳಗಿಳಿಸಿದ್ದೆ ಬಿಜೆಪಿ ಸೋಲಿಗೆ ಕಾರಣ ಎಂದು ಪಕ್ಷದ ವರಿಷ್ಠರ ವಿರುದ್ದ ದಾವಣಗೆರೆಯ ಹೊನ್ನಾಳಿಯಲ್ಲಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ..</h4> <img class="aligncenter wp-image-1213 size-full" src="https://powersamachara.com/wp-content/uploads/2023/05/mp-renukacharya.jpg" alt="" width="860" height="573" /> <h4>ಬಿಎಸ್ ವೈ ಗೆ ಪೂರ್ಣ ಅಧಿಕಾರ ನೀಡಬೇಕಿತ್ತು, ಬಿಎಸ್ ವೈರನ್ನ ಸಿಎಂ ಸ್ಥಾನದಿಂದ ಇಳಿಸಿದ್ದು ಬಿಜೆಪಿಗೆ ದೊಡ್ಡ ಹೊಡೆತವಾಗಿದೆ, ಮೀಸಲಾತಿಗೆ ಕೈ ಹಾಕಬಾರದಿತ್ತು, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ, ಬಡವರ ಅಕ್ಕಿ ಕಟ್ ಮಾಡಿದ್ದು ಮಹಾ ತಪ್ಪಾಗಿತ್ತು, ಕಾಂಗ್ರೆಸ್ ನವರು ಎರಡು ತಿಂಗಳ ಮುಂಚೇಯೆ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದರು, ನಮ್ಮವರು ಪ್ರಣಾಳಿಕೆ ಕೊನೆಯಲ್ಲಿ ಬಿಡುಗಡೆ ಮಾಡಿದ್ದಾರೆ, ಎನ್ ಪಿಎಸ್, ಓಪಿಎಸ್ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ, ಇದು ದೊಡ್ಡಮಟ್ಟದ ಹಿನ್ನಡೆಗೆ ಕಾರಣವಾಗಿತು, ಹಿರಿಯ ಮುಖಂಡರಾದ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರನ್ನು ಕಡೆಗಣಿಸಿದ್ದಾರೆಂದು ತಪ್ಪು ಸಂದೇಶ ರವಾನೆ ಆಯಿತು, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ, ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳು ಹಾಗೂ ಮೀಸಲಾತಿ ಗೊಂದಲದಿಂದ ದೊಡ್ಡಪೆಟ್ಟು ಬಿದ್ದಿದೆ, ಇದರಿಂದ ಬಿಜೆಪಿ ಸೋಲು ಕಾಣಬೇಕಾಯಿತು, ಮುಂದೆ ಎಲ್ಲ ಸರಿ ಅಗಾಲಿದೆ ಕಾರ್ಯಕರ್ತರೇ ದೃತಿಗೆಡಬೇಡಿ ಎಂದು ಎಂಪಿ ರೇಣುಕಾಚಾರ್ಯ ಕರೆ ನೀಡಿದ್ದಾರೆ..</h4>