POWER SAMACHARA | KANNADA NEWS | BREKING NEWS| 10-07-2023..

ದಾವಣಗೆರೆ : ಆ ಮೂವರ ಜಾತಿ, ಧರ್ಮ ಬೇರೆ ಬೇರೆ ಆಗಿದ್ದರು ಪ್ರಾಣ ಸ್ನೇಹಿತರು, ಕಾಲೇಜು ಬಿಡುವಿನ ವೇಳೆ ಸಿನಿಮಾಕ್ಕೆ ಹೋಗಿದ್ರು, ಆದರೆ ಇವರು ಬೇರೆ ಬೇರೆ ಧರ್ಮದವರು ಎಂದು ಸಂಘಟನೆಯ ಗುಂಪೊಂದು ಕಾನೂನು ಕೈಗೆ ತೆಗೆದುಕೊಂಡು ಹಲ್ಲೆ ನಡೆಸಿ, ಪೊಲೀಸರಿಗೆ ಹಿಡಿದು ಕೊಟ್ಟಿತ್ತು, ಆದರೆ ಅಲ್ಲಿ ಆಗಿದ್ದೆ ಬೇರೆ..ಏನಿದು ನೈತಿಕ ಪೊಲೀಸ್ ಗಿರಿ ಮುಂದೇನಾಯ್ತು ಅಂತೀರ ಈ ಸ್ಟೋರಿ ನೋಡಿ..

ಹೌದು..ದಾವಣಗೆರೆ ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ಮೂವರು ಸ್ನೇಹಿತರು ಸಿನಿಮಾ ನೋಡೋದಕ್ಕೆ ಆಗಮಿಸಿದ್ದರು, ಈ ವೇಳೆ ಚಿತ್ರಮಂದಿರದಲ್ಲಿ ಮೂವರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನಟ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಸಂಘದ ಅಧ್ಯಕ್ಷ ದೊಡ್ಡೇಶ್ ಹಾಗೂ ಲಿಂಗರಾಜ್ ಸೇರಿದಂತೆ ಯುವಕರು ಗುಂಪು ಹಿಡಿದಿದೆ, ಜೊತೆಗೆ ಮೂವರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಕೆಟಿಜೆ ನಗರ ಠಾಣೆಗೆ ಕರೆ ತಂದು ಮೂವರನ್ನ ಒಪ್ಪಿಸಿದ್ದಾರೆ, ಅನ್ಯಕೋಮಿನ ಯುವಕರ ಜೊತೆ ಚಿತ್ರಮಂದಿರಕ್ಕೆ ಬಂದಿದ್ದಲ್ಲದೇ ಚಿತ್ರಮಂದಿರದ ಒಳಗಡೆ ಯುವತಿ ಹಾಗೂ ಇಕ್ಬಾಲ್, ತಮೀಮ್ ಎಂಬ ಇಬ್ಬರು ಯುವಕರು ಸೇರಿಕೊಂಡು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು, ಜೊತೆಗೆ ದೊಡ್ಡೇಶ್ ಹಾಗೂ ಗುಂಪೊಂದು ಫೇಸ್ ಬುಕ್ ಲೈವ್ ಕೂಡ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು..

*ಠಾಣೆಯಲ್ಲಿ ಆಗಿದ್ದೇ ಬೇರೆ, ದುನಿಯಾ ವಿಜಯ್ ಆಪ್ತ ಅಂದರ್...*

ಯುವತಿ ಹಾಗೂ ಇಬ್ಬರು ಯುವಕರನ್ನು ಕೆಟಿಜೆ ನಗರ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು, ಠಾಣೆಯಲ್ಲಿ ಯುವತಿ ಮ, ಸಂಘಟನೆಯವರ ಮೇಲೆ ದೂರು ನೀಡಿದ್ದಾಳೆ, ಸಿನಿಮಾ ನೋಡುತ್ತಿದ್ದಾಗ ಸುಖಾಸುಮ್ಮನೆ ಬಂದು ಹಲ್ಲೆ ನಡೆಸಿದ್ದಾರೆ, ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರು ನೀಡಿದ್ದು, ಕೇಸ್ ಉಲ್ಟಾ ಹೊಡೆದಿದೆ, ದಾವಣಗೆರೆಯಲ್ಲಿ ನೈತಿಕ ಪೊಲೀಸ್ ಗಿರಿ ಮಾಡಲಾಗಿದ್ದು, ಪ್ರಕರಣ ಹಿನ್ನಲೆ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಸಂಘ ಕಟ್ಟಿದ್ದ ಅಧ್ಯಕ್ಷ, ಕೆಲ ದಿನಗಳ ಕಾಲ ದುನಿಯಾ ವಿಜಯ್ ಜೊತೆಯೆ ಇದ್ದ ದೊಡ್ಡೇಶ್ ಹಾಗೂ ನಿಂಗರಾಜ್ ಎಂಬುವವರ ಮೇಲೆ ನೈತಿಕ ಪೊಲೀಸ್ ಗಿರಿ ಹಾಗೂ ಜಾತಿ ನಿಂದನೆ ಕೇಸ್ ದಾಖಲಾಗಿದೆ..

ದಾವಣಗೆರೆ ಎಸ್ಟಿ ಹೇಳಿದ್ದೇನು..?

ಈ ಸಂಬಂಧ ದಾವಣಗೆರೆಯಲ್ಲಿ ಎಸ್ಪಿ ಡಾ. ಅರುಣ್ ಹೇಳಿಕೆ ನೀಡಿದ್ದು, ಹಿಂದು ಯುವತಿ ಜೊತೆ ಮುಸ್ಲಿಂ ಯುವಕರ ಬಂದಿದ್ದರು ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ, ಅಸಭ್ಯವಾಗಿ ವರ್ತಿಸಿದ್ದರೆ 112ಗೆ ಕರೆ ಮಾಡಿ ಮಾಹಿತಿ ನೀಡಬೇಕಿತ್ತು, ಫೇಸ್ ಬುಕ್ ನಲ್ಲಿ ಇನ್ನೊಬ್ಬರ ಬಗ್ಗೆ ಲೈವ್ ಮಾಡುವ ಹಕ್ಕು ಇಲ್ಲ, ಆದರೆ ಇವರೇ ನೈತಿಕ ಪೊಲೀಸ್ ಗಿರಿ ಮಾಡಿದ್ದಾರೆ, ಯುವತಿ ದೂರು ಕೊಟ್ಟಿದ್ದು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ, ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಇವರ ಮೇಲೆ ಹಳೇ ಕೇಸ್ ಇದ್ದಾವ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ..

ಒಟ್ಟಾರೆ ಇಲ್ಲಿ ತಪ್ಪು ಯಾರದ್ದು ಎನ್ನುವ ಸ್ಪಷ್ಟತೆ ಸಿಕ್ಕಿಲ್ಲ, ತಪ್ಪು ಯಾರದ್ದೆ ಇರಲಿ, ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆ ಇದೆ, ನ್ಯಾಯಾಲಯ ಇದೆ, ಆದರೆ ನೈತಿಕ ಪೊಲೀಸ್ ಗಿರಿ ನಡೆಸಿದ್ದು ಸರಿಯಲ್ಲ ಎಂಬುದು ಜನರ ಅಭಿಪ್ರಾಯ. ಇನ್ನೂ ಇಬ್ಬರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ..